ಇಂದ್ರಾಳಿ ಶಾಲಾ ಸಂಸತ್ ಪದಗ್ರಹಣ

ವಿದ್ಯಾರ್ಥಿ ಜೀವನದಲ್ಲಿ ಬರುವ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಪ್ರಗತಿ ಸಾಧಿಸಬೇಕು ಎಂದು ಹೇಳುತ್ತಾ, ವಿದ್ಯಾರ್ಥಿ ಸಂಸತ್ತಿನ ಮಹತ್ವವನ್ನು ತಿಳಿಸಿ ಭವಿಷ್ಯದಲ್ಲಿ ವಿದ್ಯಾರ್ಥಿಗಳ ಜೀವನ ಸುಖಮಯವಾಗಿರಲಿ ಎಂದು ಮಣಿಪಾಲ ಇನಸ್ಚಿಟ್ಯೂಟ್ ಅಫ್ ಕಮ್ಯೂನಿಕೇಶನ್‌ನ ಡಾ ಪ್ರತಿಮಾ ಜಯಪ್ರಕಾಶ್ ಆಚಾರ್ಯರವರು ಇಂದ್ರಾಳಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಅವರು ಸಂಸ್ಥೆಯಲ್ಲಿ ನಡೆದ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಶ್ರೀ. ಕೆ. ಅಣ್ಣಪ್ಪ ಶೆಣೈಯವರು ವಹಿಸಿ ಶಾಲಾ ದಿನಚರಿ ಪುಸ್ತಕವನ್ನು ಆನಾವರಣಗೊಳಿಸಿದರು.
ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ.ಕೆ. ವಿನಾಯಕ ಕಿಣಿ ವಿದ್ಯಾರ್ಥಿ ಸಂಸತ್ತಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ರೀ. ದಿನೇಶ್ ಹೆಗ್ಡೆ ಆತ್ರಾಡಿ, ಆಡಳತ ಮಂಡಳಿಯ ಸದಸ್ಯರಾದ ಶ್ರೀ ರತ್ನಾಕರ ಶೆಣೈ, ಶ್ರೀಮತಿ ವಿದ್ಯಾ ಅಮರ್ ಪೈ,
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೇಷ್ಮಾ ಉಪಸ್ಥಿತರಿದ್ದರು.
ವಿದ್ಯಾರ್ಥಿ ನಾಯಕ ಅಣ್ಣಪ್ಪ ಶ್ರೀಕಾಂತ್ ಪ್ರಭು ನೇತೃತ್ವದಲ್ಲಿ ವಿದ್ಯಾರ್ಥಿ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದರು. ಕು. ಪಂಚಮಿ, ಕು ರೇಷ್ಮಾ, ಕು. ಮಾನ್ಯ , ಕು. ದೀಕ್ಷಾ ಪ್ರಾರ್ಥಿಸಿದರು. ಕು. ವಾಸವಿ ನಿರೂಪಿಸಿ, ಕು. ನಿಖಿತಾ ಸ್ವಾಗತಿಸಿ, ಕು. ಧರಿತ್ರಿ ವಂದಿಸಿದರು.

 
 
 
 
 
 
 
 
 
 
 

Leave a Reply