ಸಂಗೀತ ರಸಗ್ರಹಣ ಶಿಬಿರ

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ತೃತೀಯ ಸೆಮಿಸ್ಟರ್ ನ ವಿದ್ಯಾರ್ಥಿ- ಶಿಕ್ಷಕರಿಗಾಗಿ ಈಚೆಗೆ ಸಂಗೀತ ರಸಗ್ರಹಣ ಶಿಬಿರವನ್ನು ಏರ್ಪಡಿಸಲಾಗಿತ್ತು.ಈ ಸಲ ಸಂಪನ್ಮೂಲ ವ್ಯಕ್ತಿಯಾಗಿ ಶಿಬಿರವನ್ನು ನಡೆಸಿಕೊಟ್ಟವರು ನಟಿ,ನೃತ್ಯ ಕಲಾವಿದೆ,ಹಾಡುಗಾರ್ತಿ ಹಾಗೂ ಕಾಲೇಜಿನ ಪ್ರಸಕ್ತ ವಿದ್ಯಾರ್ಥಿ- ಶಿಕ್ಷಕಿ ಪೃಥ್ವಿ ಉಪಾಧ್ಯಾಯ.ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಸಂಪನ್ಮೂಲ ವ್ಯಕ್ತಿಗೆ ಸ್ಮರಣಿಕೆ ನೀಡಿ ಪೃಥ್ವಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದರೂ ಪ್ರವೃತ್ತಿಯಿಂದ ಭರವಸೆಯ ಕಲಾವಿದೆ ಎಂದು ನುಡಿದು ಸ್ವಾಗತಕೋರಿದರು.ಬಳಿಕ ಪೃಥ್ವಿ ಉಪಾಧ್ಯಾಯ ಸಂಗೀತದ ಅರ್ಥ,ಸ್ವರೂಪ,ಭೇದಗಳು,ಸ್ವರ,ಶ್ರುತಿ, ಲಯ,ರಾಗ,ತಾಳ ,ಜೀವಸ್ವರ,ಜನ್ಯ ಜನಕ ರಾಗಗಳ ನಡುವಿನ ವ್ಯತ್ಯಾಸ, ತಾಳ ವೈವಿಧ್ಯ ಇವೇ ಮೊದಲಾದ ಸಂಕೀರ್ಣ ವಿಚಾರಗಳನ್ನು ಖಚಿತತೆಯೊಂದಿಗೆ ಪ್ರಾತ್ಯಕ್ಷಿಕೆ ಸಹಿತ ವಿದ್ಯಾರ್ಥಿ ಶಿಕ್ಷಕರಿಗೆ ಮನವರಿಕೆ ಮಾಡಿಕೊಟ್ಟರು.ಒಂದೆರಡು ದೇಶಭಕ್ತಿ ಗೀತೆ ಮತ್ತು ಭಾವಗೀತೆಗಳನ್ನು ಏಕಕಂಠದಲ್ಲಿ ಹಾಡಲು ಕಲಿಸಿಕೊಟ್ಟರು.

 
 
 
 
 
 
 
 
 
 
 

Leave a Reply