ಎಂಜಿಎಂ ಕಾಲೇಜಿನಲ್ಲಿ ಕಿರುಚಿತ್ರ ಪ್ರದರ್ಶನ ಹಾಗೂ ಕಾರ್ಯಗಾರ

ಎಂಜಿಎಂ ಕಾಲೇಜು ಉಡುಪಿ , ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಯಕ್ಷಗಾನ ಹಾಗೂ ನಾಟಕ ರಂಗ ಎಂಜಿಎಂ ಕಾಲೇಜು ಆಶ್ರಯದಲ್ಲಿ ಮುಕ್ತ ಕಿರುಚಿತ್ರ ಪ್ರದರ್ಶನ ಹಾಗೂ ಕಿರುಚಿತ್ರ ಕಾರ್ಯಗಾರ ವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ್ ಅವರು ಉದ್ಘಾಟಿಸಿ ಇಂದಿನ ವಿದ್ಯಾರ್ಥಿಳಿಗೆ ಪಠ್ಯದ ಜೊತೆಗೆ ಸಾಂಸ್ಕೃತಿಕ ಹಾಗೂ ಕಲಾಮಾಧ್ಯಮ ತೀರ ಅಗತ್ಯ ಈ ನಿಟ್ಟಿನಲ್ಲಿ ಕಾಲೇಜು ಸದಾ ಪ್ರೋತ್ಸಾಹ ವನ್ನು ನೀಡುತ್ತಿದ್ದು , ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿ ಕೊಳ್ಳುವುದರ ಜೊತೆಗೆ ಜೀವನ ಮೌಲ್ಯ ಗಳನ್ನು ಮುಂದಿನ ಜೀವನದಲ್ಲಿ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. 
ಇದೇ ಸಂದರ್ಭದಲ್ಲಿ ಮುಕ್ತ ಕಿರುಚಿತ್ರವನ್ನು ಪ್ರದರ್ಶಿಸಿ ಕಾರ್ಯಗಾರವನ್ನು ಮೇದಿನಿ ಕೆಳಮನೆ ಅವರು ನಡೆಸಿಕೊಟ್ಟರು.  ಸಮಾರಂಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ ಶೆಣೆೈ, ಅಧ್ಯಕ್ಷ ಪ್ರೊ. ಶಂಕರ್, ವಿಶ್ವಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಇದರ ಸ್ಥಾಪಕರಾದ ಸುರಾಲು ನಾರಾಯಣ ಮಡಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪುತ್ತಿ ವಸಂತ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯಕ್ಷಗಾನ ಹಾಗೂ ನಾಟಕ ವಿಭಾಗದ ಸಂಚಾಲಕರಾದ ಪ್ರೊ. ರಾಘವೇಂದ್ರ ತುಂಗ ನಿರೂಪಿಸಿ ,ಧನ್ಯವಾದ ನೀಡಿದರು.
 
 
 
 
 
 
 
 
 
 
 

Leave a Reply