ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ!

ಮುಳುಗು ಜಿಲ್ಲೆಯ ವೆಂಕಟಾಪುರ ತಾಲೂಕಿನ ಅಂಕಣ್ಣಗುಡೆಂ ಮತ್ತು ಸುಂದರಯ್ಯ ಕಾಲೋನಿ ನಡುವೆ ಶುಕ್ರವಾರ ಖಾಸಗಿ ಬಸ್ ಚಾಲಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಾವಿನ ಅಂಚಿನಲ್ಲಿ ಎದುರಿಗೆ ಬರುತ್ತಿದ್ದ ಮರಳು ಲಾರಿಗಳನ್ನು ತಪ್ಪಿಸಿ ಬಸ್ಸಿನಲ್ಲಿದ್ದ 45 ಯಾತ್ರಾರ್ಥಿಗಳ ಪ್ರಾಣ ಉಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಉತ್ತರ ಬ್ರಾಹ್ಮಣಪಲ್ಲಿ ತಾಲೂಕಿನ 45 ಜನರು ಶುಕ್ರವಾರ ತಮಿಳುನಾಡಿನಿಂದ ಹಿಂದಿರುಗುವಾಗ ಭದ್ರಾಚಲಂನಲ್ಲಿರುವ ಸೀತಾರಾಮಚಂದ್ರ ಸ್ವಾಮಿಯ ದರ್ಶನ ಪಡೆದರು. ಅಲ್ಲಿಂದ ಭದ್ರಾಚಲಂ-ವೆಂಕಟಪುರಂ ಮಾರ್ಗದಲ್ಲಿನ ಯಾದಾದ್ರಿಗೆ ತೆರಳಲು ಪ್ರಯಾಣ ಬೆಳೆಸಿದೆವು ಎಂಬುದು ಪ್ರತ್ಯಕ್ಷದರ್ಶಿಗಳ ಮಾತಾಗಿದೆ.

ಸ್ವಲ್ಪ ದೂರ ಪ್ರಯಾಣಿಸಿದ ಬಳಿ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಪೊನ್ನೈ ಗ್ರಾಮದ ಚಾಲಕ ಜೆ.ದೇವೀರಕ್ಕಂ (57) ಅವರ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರು ಸ್ವಲ್ಪ ಹೊತ್ತು ಬಸ್ ನಿಲ್ಲಿಸಿ ಚೇತರಿಸಿಕೊಂಡರು. ಬಳಿಕ ನಾವು ಮತ್ತೆ ಅಲ್ಲಿಂದ ಪ್ರಯಾಣ ಬೆಳೆಸಿದವು. ಸ್ವಲ್ಪ ದೂರದ ಬಳಿಕ ದೇವೀರಕ್ಕಂ ಅವರಿಗೆ ಹೃದಯಾಘಾತ ಸಂಭವಿಸಿದೆ. ಆದ್ರೂ ಸಹಿತ ಅವರು ಎದುರಿಗೆ ಬರುತ್ತಿದ್ದ ಮರುಳು ತುಂಬಿದ ಲಾರಿಗಳನ್ನು ತಪ್ಪಿಸಿ ರಸ್ತೆ ಬದಿಯ ಬಸ್‌ಗೆ ಹೃದಯಾಘಾತವಾದಾಗ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಬಸ್​ನ್ನು ನಿಲ್ಲಿಸಿದ್ದಾರೆ. ಆದ್ರೆ ಚಾಲಕನ ಸೀಟಿನಲ್ಲಿಯೇ ದೇವೀರಕ್ಕಂ ಕುಸಿದು ಬಿದ್ದು ಸಾವನ್ನಪ್ಪಿದ್ದರು ಎಂದರು.

ಈ ಘಟನೆಯಲ್ಲಿ ಯಾವುದೇ ಯಾತ್ರಾರ್ಥಿಗಳಿಗೆ ಗಾಯಗಳಾಗಿಲ್ಲ. ಮರಳು ಲಾರಿಗಳು ಅಡ್ಡಾದಿಡ್ಡಿಯಾಗಿ ನುಗ್ಗಿದ್ದರಿಂದ ಯಾತ್ರಾರ್ಥಿಗಳು ಗಾಬರಿ ಪಡುವಂತಾಯಿತು. ಆದ್ರೂ ಸಹ ಚಾಲಕ ದೇವೀರಕ್ಕಂ ಅವರು ನಮ್ಮೆಲ್ಲರ ಪ್ರಾಣ ಉಳಿಸಿ ಅವರು ಪ್ರಾಣ ಬಿಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳ ಮಾತಾಗಿದೆ.

 
 
 
 
 
 
 
 
 
 
 

Leave a Reply