ನಮ್ಮ ಸಂವಿಧಾನವು ಹೆಚ್ಚಿನ ಜನರ ಸಂಪತ್ತನ್ನು ಕಸಿದುಕೊಳ್ಳಲು ಸಹಾಯ ಮಾಡುತ್ತದೆ~ ಸಚಿವ ಸಾಜಿ ಚೆರಿಯನ್

ತಿರುವನಂತಪುರಂ: ಭಾರತವು ಸುಂದರವಾಗಿ ಬರೆದ ಸಂವಿಧಾನವನ್ನು ಹೊಂದಿದೆ ಎಂದು ನಾವೆಲ್ಲರೂ ಹೇಳುತ್ತೇವೆ. ಆದರೆ ಸಂವಿಧಾನವನ್ನು ದೇಶದ ಹೆಚ್ಚಿನ ಜನರನ್ನು ಲೂಟಿ ಮಾಡಲು ನೆರವಾಗುವಂತೆ ಬರೆಯಲಾಗಿದೆ ಎಂದು ನಾನು ಹೇಳುತ್ತೇನೆ ಎಂದು ಕೇರಳದ ಮೀನುಗಾರಿಕೆ ಮತ್ತು ಸಾಂಸ್ಕೃತಿಕ ಸಚಿವ ಸಾಜಿ ಚೆರಿಯನ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಸಂವಿಧಾನದ ಬಗ್ಗೆ ಸಾಜಿ  ಚೆರಿಯನ್ ಅವರ ಹೇಳಿಕೆಯು ವಿವಾದಕ್ಕೆ ಕಾರಣವಾಗಿದ್ದು, ಭಾರತವು ಸುಂದರವಾಗಿ ಬರೆದ ಸಂವಿಧಾನವನ್ನು ಹೊಂದಿದೆ ಎಂದು ನಾವೆಲ್ಲರೂ ಹೇಳುತ್ತೇವೆ. ಆದರೆ ಸಂವಿಧಾನವನ್ನು ಭಾರತದ ಹೆಚ್ಚಿನ ಜನರ ಸಂಪತ್ತನ್ನು ಕಸಿದುಕೊಳ್ಳಲು ಸಹಾಯ ಮಾಡುತ್ತದೆ ಎಂದು ನಾನು ಹೇಳುತ್ತೇನೆ. ಬ್ರಿಟಿಷರು ಬರೆದಿದ್ದ ಸಂವಿಧಾನವನ್ನು ನೋಡಿ ನಮ್ಮ ಭಾರತೀಯ ನಮ್ಮ ಸಂವಿಧಾನವನ್ನು ಸಿದ್ಧಪಡಿಸಿದ್ದು, ಅದನ್ನು ನಾವು ಈ ದೇಶದಲ್ಲಿ 75 ವರ್ಷಗಳಿಂದ ಆಚರಣೆ ಮಾಡುತ್ತಿದ್ದೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ. 

ಭಾರತದಲ್ಲಿ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲಾಗಿಲ್ಲ ಎಂದು ಒತ್ತಿ ಹೇಳಿದ ಅವರು, ಸಂವಿಧಾನದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತತೆಯಂತಹ ಕೆಲವು ಉತ್ತಮ ಅಂಶಗಳ ಕುರುಹುಗಳು ಇದ್ದರೂ, ಅದರ ಉದ್ದೇಶ ಸಾಮಾನ್ಯ ಜನರನ್ನು ಶೋಷಣೆ ಮಾಡುತ್ತಿದೆ. ಭಾರತವು ಕಾರ್ಮಿಕ ಪ್ರತಿಭಟನೆಯನ್ನು ಒಪ್ಪಿಕೊಳ್ಳದ ದೇಶವಾಗಿದೆ. ಯಾರಾದರೂ ವೇತನವನ್ನು ಕೇಳಿದರೆ ಅವರನ್ನು ಹೊಡೆಯಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಡವ ತನ್ನ ದುಡಿಮೆಯಿಂದ ಪಡೆದ ಹೆಚ್ಚುವರಿ ಮೌಲ್ಯವನ್ನು ಬಳಸಿಕೊಂಡು ಶೋಷಣೆಗೆ ಒಳಗಾಗುತ್ತಾನೆ. ಈ ದೇಶದ ಸಂವಿಧಾನವು ಕಾರ್ಮಿಕರು 8\20 ಗಂಟೆಗಳವರೆಗೆ ಕೆಲಸ ಮಾಡುವಾಗ ಅವರನ್ನು ರಕ್ಷಿಸುತ್ತಿದೆಯೇ ಎಂದು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply