ಪಾಂಬೂರು- ಪರಿಚಯ ಬಯಲು ರಂಗಮಂದಿರ “ಪ್ರಕೃತಿ”ಯಲ್ಲಿ ಪರಿಚಯ “ರಾಷ್ಟ್ರೀಯ ರಂಗೋತ್ಸವ -2023” ಕ್ಕೆ ಚಾಲನೆ

ಶಿರ್ವ:- ಕಲೆ,ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಪಾಂಬೂರು ಇದರ ವತಿಯಿಂದ 12ನೇ ವರ್ಷದ ಬಹುಭಾಷಾ ನಾಟಕಗಳನ್ನು ಒಳಗೊಂಡ ಏಳು ದಿನಗಳ ಪರಿಚಯ -“ರಾಷ್ಟ್ರೀಯ ರಂಗೋತ್ಸವ -2023″ಕ್ಕೆ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್(ಭಾ.ಆ.ಸೇ.) ರವಿವಾರ ಸಂಜೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಪರಿಚಯ ಬಯಲು ರಂಗಮoದಿರ “ಪ್ರಕೃತಿ”ಯಲ್ಲಿ ಚಾಲನೆ ನೀಡಿ ಮಾತನಾಡುತ್ತಾ, ಈ ಭಾಗದಲ್ಲಿ ಕಲೆ ಜೀವಂತವಾಗಿದೆ ಎಂಬುದಕ್ಕೆ ಪ್ರತ್ಯಕ್ಷ ನಿದರ್ಶನ ಈ ಕಾರ್ಯಕ್ರಮದಲ್ಲಿ ಸಾಕಷ್ಟು ಮುಂಚಿತವಾಗಿ ತುಂಬಿರುವ ಕಲಾ ಪ್ರೇಮಿಗಳನ್ನು ಕಂಡು ಅತೀವ ಸಂತಸವಾಗಿದೆ. ಸಂಸ್ಥೆಯ ಸಮಯ ಪ್ರಜ್ಞೆ, ಶಿಸ್ತು ಮತ್ತು ಬದ್ಧತೆಗೆ ಅಭಿನಂದನೆಗಳು. ಉಡುಪಿ ಜಿಲ್ಲೆಯಲ್ಲಿ ಇರುವಷ್ಟು ಕಾಲ ನಿಮ್ಮ ಕಾರ್ಯಕ್ರಮಗಳಲ್ಲಿ ನಿಮ್ಮೊಂದಿಗೆ ಇರುತ್ತೇನೆ ಎಂದರು.

ಪಾಂಬೂರು ಚರ್ಚ್ನ ಪ್ರಧಾನಧರ್ಮಗುರುಗಳಾದ ರೆ.ಫಾ.ಹೆನ್ರಿ ಮಸ್ಕರೇನ್ಹಸ್ ಆಶೀರ್ವಚನ ನೀಡಿ ಬಹುಭಾಷಾ ನಾಟಕೋತ್ಸವಕ್ಕೆ ದೇವರ ಆಶೀರ್ವಾದ ಕೋರಿದರು. ಮಾಂಡ್ ಸೊಭಾಣ್(ರಿ) ಮಂಗಳೂರು ಇದರ ಗುರಿಕಾರರಾದ ಎರಿಕ್ ಒಝೇರಿಯೋ ಮಾತನಾಡಿ ಪರಿಚಯ ಸಂಸ್ಥೆ ಮಾಂಡ್ ಸೊಭಾಣ್‌ನ ಶಿಸ್ತನ್ನು ಪಾಲಿಸಿ ಕೊಂಕಣಿ ಸಹಿತ ಎಲ್ಲಾ ಭಾಷೆಗಳನ್ನು ಪ್ರೋತ್ಸಾಹಿಸಿ ಧರ್ಮದ ಎಲ್ಲೆಗಳನ್ನು ಮೀರಿ ಮುಂದುವರಿಯುತ್ತಿರುವುದರಿoದ ಅದರ ಮೇಲೆ ಹೆಚ್ಚಿನ ಪ್ರೀತಿ ಇದೆ. ಬಯಲು ರಂಗಮAದಿರ ನಿರ್ಮಾಣ ಸುಲಭ ಕಾರ್ಯವಲ್ಲ. ಪರಿಚಯ ತಂಡ ತಮ್ಮ ಕುಟುಂಬ, ವ್ಯವಹಾರಗಳ ನಡುವೆಯೂ ಕಲೆಗಾಗಿ ಮಾಡುವ ಕಾರ್ಯ ಅಭಿನಂದನೀಯ. ಈ ವೇದಿಕೆಯಲ್ಲಿ ತಮ್ಮ ತಂಡಕ್ಕೆ ಒಂದು ಅವಕಾಶ ನೀಡುವಂತೆ ಕೋರಿ, ಈಭಾಗದಲ್ಲಿ ಗ್ರೀನರಿ ನಿರ್ಮಾಣಕ್ಕೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

೧೨ ವರ್ಷಗಳ ಹಿಂದೆ ಕಲೆ,ಸಾಹಿತ್ಯ, ಸಂಸ್ಕೃತಿಗಾಗಿ ಈ ಹಳ್ಳಿಯಲ್ಲಿ ಪ್ರಾರಂಭಗೊAಡ “ಪರಿಚಯ ಪಾಂಬೂರು” ಇದರ ಉದ್ಘಾಟನೆ ನೆರವೇರಿಸಿ ಪ್ರತೀ ವರ್ಷವೂ ಬಂದು ಸಕಾಲಿಕ ಮಾರ್ಗದರ್ಶನ ನೀಡುತ್ತಿರುವ ವಿದ್ಯಾ ಗುರುಗಳಾದ ನಿವೃತ್ತ ಉಪನ್ಯಾಸಕ ಕೆ.ಎಸ್.ಶ್ರೀಧರಮೂರ್ತಿ ಮಾತನಾಡಿ ಆರಂಭದ ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಎಲ್ಲಿಯೂ ರಾಜಿ ಮಾಡಿಕೊಳ್ಳದೆ, ಅಭಿರುಚಿ, ಸಮಯಪ್ರಜ್ಞೆ, ಈ ಶಿಸ್ತನ್ನು ಬದ್ಧತೆಯಿಂದ ಕೃತಿಯ ಮೂಲಕ ಸಮಾಜಕ್ಕೆ ಪರಿಚಯ ಮಾಡಿಕೊಟ್ಟು, ಪ್ರಬುದ್ಧ ಪ್ರೇಕ್ಷಕವರ್ಗವನ್ನು ಕಟ್ಟಿಕೊಂಡ ದಟ್ಟ, ದಿಟ್ಟ ಕಾರ್ಯಕ್ಕೆ ಅಭಿನಂದಿಸಿದರು.

ತೊಟ್ಟಮ್ ಚರ್ಚ್ನ ಧರ್ಮಗುರುಗಳಾದ ರೆ.ಫಾ. ಡೆನಿಸ್ ಡೇಸಾರವರು “ಪ್ರಕೃತಿ” ಬಯಲು ರಂಗಮAದಿರದ ವಿನ್ಯಾಸಕಾರ ಅಂತರಾಷ್ಟ್ರೀಯ ಖ್ಯಾತಿಯ ರಂಗಕಲಾವಿದ ವಿಲ್ಸನ್ ಕಯ್ಯಾರ್‌ರವರನ್ನು ಸನ್ಮಾನಿಸಿ ಮತನಾಡುತ್ತಾ, ಪರಿಚಯದ ಕಾರ್ಯವೈಖರಿ, ಸಮಯಪ್ರಜ್ಞೆ, ಶೀರ್ಷಿಕೆಗೀತೆ ಮಧೂರ ಅರ್ಥಪೂರ್ಣವಾಗಿದೆ. ಸಾಂಸ್ಕೃತಿಕ  ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಕಲಾಭಿಮಾನಿಗಳಿಗೆ, ಕಲಾವಿದರಿಗೆ ಸ್ಪೂರ್ತಿ ನೀಡಿದ ದಿನವಾಗಿದೆ. ಆರೋಗ್ಯಕರ,ಸಾಮರಸ್ಯದ ಸಮಾಜದ ನಿರ್ಮಾಣದಲ್ಲಿ ಜಾಗೃತಿ, ವಿಶ್ಲೇಷಣೆ,ವಿಶ್ವಾಸ,ಸತ್ಯ, ಸಂಹಿಷ್ಣುತೆ ಕಾರ್ಯತತ್ಪರರಾಗಲು ನಾಟಕಗಳು ಪ್ರೇರಣೆ ನೀಡುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಟ್ರಸ್ಟಿ ಡಾ.ವಿನ್ಸೆಂಟ್ ಆಳ್ವ ವಹಿಸಿದ್ದರು. ಅಧ್ಯಕ್ಷ ಅನಿಲ್ ಡೇಸಾ ಅತಿಥಿಗಳಿಗೆ ಶಾಲು, ಮಲ್ಲಿಗೆ ನೀಡಿ ಗೌರವಿಸಿದರು. ಕಾರ್ಯದರ್ಶಿ ಪ್ರಕಾಶ್ ನೊರೋನ್ಹಾ ಪ್ರಾಸ್ತಾವಿಕ ಮಾತುಗಳೊಂದಿಗೆ ನಿರೂಪಿಸಿದರು. ಸದಸ್ಯೆ ವಾಲೆಟ್ ಕಸ್ತಲಿನೊ ಧನ್ಯವಾದವಿತ್ತರು.

ನಂತರ ರಂಗಾಯಣ ಶಿವಮೊಗ್ಗ ತಂಡದವರಿoದ ನಾ ಡಿಸೋಜರವರ ಕಾದಂಬರಿ ಮತ್ತು ಎಸ್ ಮಾಲತಿರವರ “ಹಕ್ಕಿಗೊಂದು ಗೂಡು ಕೊಡಿ” ನಾಟಕ ಆಧಾರಿತ “ಹಕ್ಕಿಕಥೆ” ಕನ್ನಡ ನಾಟಕ ಪ್ರದರ್ಶನಗೊಂಡಿತು.

 
 
 
 
 
 
 
 
 
 
 

Leave a Reply