ಉಡುಪಿ:6ನೇ ಶಿಕ್ಷಕರ ಸಾಹಿತ್ಯ ಸಮ್ಮೇಳನ ಉದ್ಘಾಟನೆ: 

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಜನಾರ್ದನ ಮಹಾಕಾಳಿ ದೇವಾಲಯದ ಸಂಯುಕ್ತ ಆಶ್ರಯದಲ್ಲಿ ನಡೆಯುವ ಒಂದು ದಿನದ ನ ಶಿಕ್ಷಕ ಸಾಹಿತಿಗಳ ಆರನೆಯ ಸಮ್ಮೇಳನವನ್ನು ಧರ್ಮದರ್ಶಿ ಡಾ.ವಿಜಯ ಬಲ್ಲಾಳ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಒಂದು ದಿನದ ಶಿಕ್ಷಕರ ದಿನಾಚರಣೆ ನಿತ್ಯವೂ ಸಂಭ್ರಮವಾಗ ಬೇಕು. ಶಿಕ್ಷಕರು ಉತ್ತಮ ಓದುಗರಾಗ ಬೇಕು.

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸ್ಪೂರ್ತಿದಾಯಕರಾಗ ಬೇಕು ಎಂದು ಅವರು ಅಭಿಪ್ರಾಯ ಪಟ್ಟರು. ರಾಷ್ಟ್ರಮಟ್ಟದ ಪ್ರಶಸ್ತಿ ಪು ರಸ್ಕೃತ ಶಿಕ್ಷಕ ನೆಂಪು ನರಸಿಂಹ ಭಟ್ಟರು ಸಮ್ಮೇಳನಾಧ್ಯಕ್ಷರಾಗಿದ್ದು ಶಿಕ್ಷಣಕ್ಕೆ ಇನ್ನಷ್ಟು ಮಹತ್ವ ಸಿಗಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ಉದ್ಯಮಿ ವಿಶ್ವನಾಥ ಶೆಣೈ ಅವರು ಸಮಾಜ ಕಟ್ಟುವಲ್ಲಿ ಶಿಕ್ಷಕರ ಜವಬ್ದಾರಿ ಹೆಚ್ಚಿನದು ಎಂದರು.

ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಜಿ.ಯು ನಾಯಕ್, ಪರಿಷತ್ತಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಕೆ.ವಿ.ಶ್ರೀಕಾಂತ ವೇದಿಕೆ ಯಲ್ಲಿದ್ದರು. ಗುರುರಾಜ ಮತ್ತು ಡಾ. ವಾಣಿ ಶ್ರೀ ಕಾಸರಗೋಡು ನಿರೂಪಿಸಿದರು. ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕ್ರತಿಕ ಸಂಘದ” ಗಾನ ಸಾಹಿತ್ಯ ನೃತ್ಯ ವೈಭವ ” ಕಾರ್ಯಕ್ರಮ ವಿತ್ತು. ಶೆಫಿನ್ಸ್ ಅಕಾಡೆಮಿಯ ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಕರಪತ್ರವನ್ನು ಗಣ್ಯರು ಬಿಡುಗಡೆಗೊಳಿಸಿದರು.

ಪರಿಷತ್ತಿನ ಸಂಚಾಲಕ ಕೃಷ್ಣಮೂರ್ತಿ ಕುಲ್ಕರ್ಣಿ ಸ್ವಾಗತಿಸಿದರು. ಸಾಹಿತಿ ವಿಠಲ ಪೂಜಾರಿ ಭಕ್ತಿ ಗೀತೆ ಹಾಡಿದರು. ರಾಜು ಎನ್ ಆಚಾರ್ಯ ವಂದಿಸಿದರು.

 
 
 
 
 
 
 
 
 
 
 

Leave a Reply