ಖಾಲಿ ಫ್ಲಾಟ್ ಗೆ ಎಳೆದೊಯ್ದು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಖಾಲಿ ಫ್ಲಾಟ್ ಗೆ ಕರೆದೊಯ್ದು ಯುವತಿಯ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಉತ್ತರ 24 ಪರಗಣದ ಅಶೋಕ್ ನಗರ ಪ್ರದೇಶದಲ್ಲಿ ನಡೆದಿದೆ.

ಸಂತ್ರಸ್ತೆ ಕೋಲ್ಕತ್ತಾದ ಬಾರ್‌ನಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದು, ಭಾನುವಾರ ರಾತ್ರಿ ನಾಲ್ವರು ಯುವಕರು ಆಕೆಯನ್ನು ಖಾಲಿ ಫ್ಲಾಟ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಬಳಿಕ ಸಂತ್ರಸ್ತೆಯನ್ನು ರಸ್ತೆಬದಿಯಲ್ಲಿಯೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

ಅಶೋಕ್ ನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರನ್ನು ತನ್ಮಯ್ ಪಾಲ್, ಆಕಾಶ್ ಚಕ್ರವರ್ತಿ, ತುಕೈ ಸಿಕ್ದರ್ ಮತ್ತು ಗೋಪಾಲ್ ಪಾಲ್ ಎಂದು ಗುರುತಿಸಲಾಗಿದೆ.

 
 
 
 
 
 
 
 
 
 
 

Leave a Reply