ಉಡುಪಿ ಜಿಲ್ಲಾಧಿಕಾರಿ ಮೇಲೆ ವಕೀಲೆ ಸಹನಾ ಕುಂದರ್ ಗರಂ

ಉಡುಪಿ: ಸರಕಾರಿ ಮಟ್ಟದ ಯಾವುದೇ ಸಮಿತಿ ಸೇರಲು ಬಲವಾದ ಶಿಫಾರಸುಗಳನ್ನು ಮಾಡುತ್ತಾರೆ. ಆದರೆ ಯಾವುದೇ ಶಿಫಾರಸ್ಸು ಇಲ್ಲದೆ, ತಮ್ಮ ಸಮಾಜಮುಖಿ ಕಾರ್ಯ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಸ್ವಭಾವವೇ ವಕೀಲೆ ಸಹನಾ ಕುಂದರ್ ಅವರನ್ನು ಸ್ಥಳೀಯ ದೂರು ಸಮಿತಿಯ ಸದಸ್ಯತ್ವಕ್ಕೆ ಆಯ್ಕೆಯಾಗು ವಂತೆ ಮಾಡಿತು.

ಆದರೆ, ರಾಜ್ಯ ಬಿಜೆಪಿಯ ಕಾನೂನು ಪ್ರಕೋಷ್ಟದ ಸಮಿತಿ ಸದಸ್ಯೆ, ಬೆಳ್ಮಣ್ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆ ಹಾಗೂ ವಕೀಲೆ ಸಹನಾ ಕುಂದರ್ ಅವರನ್ನು ಸ್ಥಳೀಯ ದೂರು ಸಮಿತಿಯ ಸದಸ್ಯೆಯಾಗಿ ನೇಮಕ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದ ಕೆಲವೇ ದಿನಗಳಲ್ಲಿ ಸದಸ್ಯತ್ವದಿಂದ ಕೈ ಬಿಡಲಾಗಿದೆ.

ಇದೀಗ ಜಿಲ್ಲಾಧಿಕಾರಿಯವರು ಆದೇಶ ನೀಡಿ, ಅವರೇ ಯಾವುದೇ ಮಾಹಿತಿ ನೀಡದೆ ಸದಸ್ಯತ್ವದಿಂದ ತೆಗೆದುಹಾಕಿರುವ ಬಗ್ಗೆ ವಕೀಲೆ ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ದೂರು ಸಮಿತಿ ಎಂದರೆ, ಮಹಿಳೆ ಯರಿಗೆ ತಾನು ಕೆಲಸ ಮಾಡುವ ಸ್ಥಳಗಳಲ್ಲಿ ಉಂಟಾಗುವ ಲೈಂಗಿಕ ಕಿರುಕುಳಗಳನ್ನು ತಡೆಯಲು ಜಿಲ್ಲಾ ಮಟ್ಟದ ವ್ಯವಸ್ಥೆ.

ಈ ಸಮಿತಿ ಮೂಲಕ ಮಹಿಳೆಯರಿಗೆ ರಕ್ಷಣೆ, ಲೈಂಗಿಕ ಕಿರುಕುಳದ ವಿರುದ್ಧ ಧ್ವನಿಯಾಗಿ ನ್ಯಾಯ ಕೊಡಿಸುವ ಕೆಲಸ ನಿರಂತರ ನಡೆಯುತ್ತದೆ.

ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಸಹನಾ ಕುಂದರ್ ಅವರು… ಜಿಲ್ಲಾಧಿಕಾರಿಯವರೇ ಸಹಿ ಹಾಕಿ ಹೊರಡಿಸಿರುವ ಆದೇಶವನ್ನು ಅದು ಹೇಗೆ ಏಕಾಏಕಿ ಹೊಲ್ಡ್ ನಲ್ಲಿ ಇರಿಸುತ್ತಾರೆ ಎಂಬ ಬಗ್ಗೆ ಸ್ಪಷ್ಟನೆ ಕೇಳಲು ಜಿಲ್ಲಾಧಿಕಾರಿ ಬಳಿ ಹೋದಾಗ ಅವರಿಂದ ಬಂದ ಉತ್ತರ ಸಮಂಜಸ ವಾಗಿರಲಿಲ್ಲ.

ಜಿಲ್ಲಾಧಿಕಾರಿಗಳ ಈ ನಡವಳಿಕೆಯಿಂದ ಅನ್ಯಾಯವಾಗಿದೆ. ಇದಕ್ಕೆ ಜಿಲ್ಲಾಧಿಕಾರಿಯವರು ಉತ್ತರ ನೀಡಬೇಕು ಎಂದು ಹೇಳಿಕೊಂಡಿದ್ದಾರೆ.

ಜು.5 ರಂದು ಸರ್ಕಾರಿ ಆದೇಶದನ್ವಯ ಉಡುಪಿ ಜಿಲ್ಲಾ ಮಟ್ಟದ “ಸ್ಥಳೀಯ ದೂರು ಸಮಿತಿ”ಗೆ ವಕೀಲೆ ಸಹನಾ ಕುಂದರ್ ಅವರನ್ನು ನೇಮಕ ಮಾಡಿ ಸುತ್ತೋಲೆ ಹೊರಡಿಸಿದ್ದರು.

ಅದೇ ರೀತಿ ನನ್ನ ಮೇಲೆ ಅಭಿಮಾನ, ಪ್ರೀತಿ ಇರುವ ಎಲ್ಲಾ ಕರಾವಳಿಯ ಜನ ಅದನ್ನು ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡಿದ್ದರು.

ಯಾವುದೇ ಸಂಭಾವನೆ, ಸಂಬಳ ಇಲ್ಲದಿದ್ದರೂ ನೊಂದವರ ಧ್ವನಿಯಾಗುವ ಈ ಕಾರ್ಯ ನಿರ್ವಹಿಸಲು ಒಪ್ಪಿದ್ದೆ. ಆದರೆ ರಾತ್ರಿ 9:45 ಕ್ಕೆ(Unofficial Time) ಗೆ ಕರೆ ಮಾಡಿ ನಿಮ್ಮ ಸದಸ್ಯತ್ವವನ್ನು ಹೋಲ್ಡ್ ನಲ್ಲಿ ಇರಿಸಲಾಗಿದೆ ಎಂದು ಹೇಳುತ್ತಾರೆ. ಈ ಬಗ್ಗೆ ನಿಮ್ಮಿಂದ ಬಂದ ಉತ್ತರ ನಿರೀಕ್ಷೆ ಮಾಡಿರಲಿಲ್ಲ.

ಈ ವಿಚಾರವಾಗಿ ನೀವು ನೀಡಿದ ಉತ್ತರ ನಿಮಗೇ ಸರಿ ಎನ್ನಿಸುತ್ತಿದೆಯಾ.. ಎಂದು ಕೇಳಿದ್ದಾರೆ. ರಾತ್ರೋ ರಾತ್ರಿ ಈ ಹುದ್ದೆಯಿಂದ ತೆಗೆಯುವ ನಿಮ್ಮ ಕಾರ್ಯದ ಹಿಂದೆ ರಾಜಕೀಯ ಒತ್ತಡ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ತನಗಾದ ಈ ಅವಮಾನಕ್ಕೆ ಜಿಲ್ಲಾಧಿಕಾರಿಯವರು ಉತ್ತರ ನೀಡಲೇ ಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಕೂಡಾ ವಕೀಲೆ ಸಹನಾ ಕುಂದರ್ ರೊಂದಿಗೆ ಕೈ ಜೋಡಿಸಿದ್ದಾರೆ.

 
 
 
 
 
 
 
 
 
 
 

Leave a Reply