ಹಡಿಲು ಭೂಮಿ ಕೃಷಿಯಿಂದ ಕೃಷಿಕನಿಗೆ ತೊಂದರೆ – ಕೂಡಲೇ ಸ್ಪಂದಿಸಿದ ಕೇದಾರೋತ್ಥಾನ ಟ್ರಸ್ಟ್

ಉಡುಪಿ: ಹಡಿಲು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಹಸನು ಮಾಡುವ ಸರಕಾರ ಮಟ್ಟದ ಕ್ರಿಯಾಯೋಜನೆ ಯಾದ ಹಡಿಲುಭೂಮಿ ಕೃಷಿ ಯನ್ನು ಕೇದಾರನಾಥ ಟ್ರಸ್ಟ್ ಮೂಲಕ ಮಾಡುತ್ತಿರುವುದು ಒಳ್ಳೆಯ ಕೆಲಸ.ಆದರೆ ಬ್ರಹ್ಮಾವರದ ಹಾವಂಜೆ ಗಾಮದ ಕೀಳಂಜೆಯಲ್ಲಿ ಕೃಷಿಕ, ವಯೋವೃದ್ಧ ಕೃಷ್ಣಯ್ಯ ಶೆಟ್ಟಿ ತಮ್ಮ ಪೂರ್ವಜರು ಮಾಡಿಕೊಂಡು ಬಂದಂತಹ ಕೃಷಿಯನ್ನೇ ನಂಬಿ ಬದುಕುವ ಅವರ ಜಮೀನಿಗೆ ತೊಂದರೆಯಾಗಿದ್ದು, ಸರಿಪಡಿಸುವಂತೆ ವಿನಂತಿಸಿಕೊಂಡಿದ್ದರು.

ಕಡಿದು ಹಾಕಿದ ಮರದಿಂದ ಕೃಷಿ ಚಟುವಟಿಕೆಗೆ ತೊಂದರೆಯಾದ ಹಿನ್ನಲೆಯಲ್ಲಿ ದೂರವಾಣಿ ಮೂಲಕ ಕೇದಾರೋತ್ಥಾನ ಟ್ರಸ್ಟ್ ನ ಮುಖ್ಯಸ್ತರಿಗೆ ತಿಳಿಸಲಾಗಿತ್ತು, ಇದೀಗ ಆ ಮರವನ್ನು ಯಂತ್ರದ ಮೂಲಕ, ಕಟ್ ಮಾಡುವ ಮೂಲಕ ಆ ಮರವನ್ನು ಅಲ್ಲಿಂದ ತೆರವುಮಾಡುವ ಕಾರ್ಯ ಭರದಿಂದ ಸಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿಕ ಕೃಷ್ಣಯ್ಯ ಶೆಟ್ಟಿ ಹಾಗೂ ಕಾಂಗ್ರೆಸ್ ಮುಖಂಡ ಜಯಶೆಟ್ಟಿ ಬನ್ನಂಜೆ, ವಾಲ್ಟರ್ ಡಿಸೋಜ ಕೊಳಲಗಿರಿ, ಗಣೇಶ್ ಶೆಟ್ಟಿ ಕೀಳಂಜೆ, ಟ್ರಸ್ಟಿನ ಮುಖ್ಯಸ್ಥ ನಿವೃತ್ತ ಶಿಕ್ಷಕ ಮುರಳಿ ಕಡೆಕಾರ್,ಹಾಗೂ ಸ್ಥಳೀಯ ಹಾವಂಜೆ ಗ್ರಾಮ ಪಂಚಾಯತ್ ನ ಮುಖ್ಯಸ್ಥರು ಹಾಗೂ ಸಂಬಂಧಪಟ್ಟವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

 
 
 
 
 
 
 
 
 
 
 

Leave a Reply