ಸಗ್ರಿ ನಾಗಮಂಡಲೋತ್ಸವ: ಪೂರ್ವಭಾವಿ ಸಭೆ

ಉಡುಪಿಯ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಪ್ರಿಲ್ 8 ರಿಂದ 11 ನೇ ತಾರೀಖಿನ ವರೆಗೆ ನಡೆಯಲಿರುವ ನವನಿರ್ಮಿತ ಶಿಲಾಮಯ ನಾಗದೇವರ ಗುಡಿ ಸಮರ್ಪಣೆ , ಪುನಃ ಪ್ರತಿಷ್ಠಾಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವ ದ ಯಶಸ್ಸಿಗಾಗಿ ಪೂರ್ವಭಾವಿ ಸಮಾಲೋಚನಾ ಸಭೆ ಭಾನುವಾರ ಶ್ರೀ ಕ್ಷೇತ್ರದ ಅನಂತ ಸಭಾಭವನದಲ್ಲಿ ನಡೆಯಿತು .

ಶ್ರೀ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಸಿದ್ಧ ವೈದ್ಯ ಡಾ ರವಿರಾಜ ಆಚಾರ್ಯರು ಉದ್ಘಾಟಿಸಿ ಉತ್ಸವಕ್ಕೆ ಎಲ್ಲ ರೀತಿಯ ಸಹಕಾರದ ಭರವಸೆ ಇತ್ತರು .‌ ಉದ್ಯಮಿ , ಧಾರ್ಮಿಕ ಮುಖಂಡ ಬಾಲಾಜಿ ರಾಘವೇಂದ್ರಾಚಾರ್ಯರು ಸಾಮಗರು ನಾಗಪಾತ್ರಿಯಾಗಿ ಸಮಾಜಕ್ಕೆ ಅಮೂಲ್ಯ ಮಾರ್ಗದರ್ಶನ ಮಾಡ್ತಾ ಇದ್ದಾರೆ . ಅವರದ್ದೇ ಆದ ಪ್ರಭಾ ವ ವರ್ಚಸ್ಸು ನಾಡಿನೆಲ್ಲೆಡೆ ಇದೆ . ಆದ್ದರಿಂದ ಈ ಪರ್ವಕ್ಕೆ ಅತ್ಯಂತ ದೊಡ್ಡ ಸಂಖ್ಯೆಯಲ್ಲಿ ಭಕ್ತರು ನಾಡಿನೆಲ್ಲೆಡೆಯಿಂದ ಆಗಮಿಸುತ್ತಾರೆ . ಆದ್ದರಿಂದ ಸ್ಥಳೀಯರಾದ ನಾವೂ ಕೈಜೋಡಿಸಿ ಪುಣ್ಯ ಸಂಪಾದಿಸಲು ಅಮೂಲ್ಯ ಅವಕಾಶ ದೊರೆತಿದೆ ಎಂದರು . ಯುವ ಮುಖಂಡ ರಾಘವೇಂದ್ರ ಕಿಣಿ ಮಾತನಾಡಿ ಸಲಹೆ ನೀಡಿದರು . ಉದ್ಯಮಿ ಯಶ್ಪಾಲ್ ಸುವರ್ಣ , ನಗರಸಭಾ ಸದಸ್ಯೆ ಗೀತಾಶೇಟ್ , ಹರಿ ಉಪಾಧ್ಯ , ಅನಂತ ಸಾಮಗ , ಉಪಸ್ಥಿತರಿದ್ದರು ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ಸಾಮಗರು ಹನ್ನೆರಡು ವರ್ಷಗಳ ನಂತರ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಾಗಮಂಡಲೋತ್ಸವ ನಡೆಸುವ ಅವಕಾಶ ದೇವರು ನೀಡಿದ್ದು ಈ ಹಿಂದಿನಂತೆ ಎಲ್ಲ ಭಕ್ತರು ನಾಗರಿಕರು ಪೂರ್ಣ ಸಹಕಾರಕ್ಕಾಗಿ ವಿನಂತಿಸಿದರು . ರಾಜಗೋಪಾಲ್ ಶೇಟ್ , ಮಂಜುನಾಥ ಹೆಬ್ಬಾರ್ ಪ್ರದೀಪ್ ರಾವ್ ಸತೀಶ್ , ರಾಮಚಂದ್ರ ಸನಿಲ್ ಕುಮಾರ್ , ವಿಷ್ಣುಪಾಡಿಗಾರ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಶೋದಾ ಸಲಹೆ ಸೂಚನೆ ನೀಡಿದರು .‌ ಆನಂದ ತೀರ್ಥ ಉಪಾಧ್ಯಾಯ ಸ್ವಾಗತಿಸಿದರು . ವಾಸುದೇವ ಭಟ್ ಪೆರಂಪಳ್ಳಿ ಪ್ರಸ್ತಾವನೆಗೈದು ಕಾರ್ಯಕ್ರಮ ನಿರ್ವಹಿಸಿದರು .

 
 
 
 
 
 
 
 
 
 
 

Leave a Reply