ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಇಂದು ಸದೃಢ ಭಾರತ ಓಟ ಕಾಯ೯ಕ್ರಮವನ್ನು ಆಯೋಜಿಸಲಾಗಿತ್ತು. ಬಾವುಟ ತೋರಿಸುದರ ಮೂಲಕ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲೆ ಪ್ರೊ.(ಡಾ) ನಿಮ೯ಲಾ ಹರಿಕೃಷ್ಣರವರು ಮಾತನಾಡಿ ಭಾರತದ ಪ್ರತಿಯೊಬ್ಬರು ಆರೋಗ್ಯವಂತ ಹಾಗೂ ಸದೃಢ ಪ್ರಜೆಗಳಾಗಲು ಇಂತಹ ಕಾಯ೯ಕ್ರಮಗಳನ್ನು ಆಯೋಜಿಸುವುದು ತೀರಾ ಅಗತ್ಯವಿದ್ದು ಸವ೯ರೂ ಇದರ ಲಾಭವನ್ನು ಪಡೆಯ ಬೇಕು ಹಾಗೂ ಆ ಮೂಲಕ ಸೋಮಾರಿತನ, ಒತ್ತಡ ಆತಂಕಗಳಿಂದ ಹೊರಬರಲು ಪ್ರಯತ್ನಿಸಬೇಕೆಂದು ಕರೆಯಿತ್ತರು.ಕಾಲೇಜಿನ ದೈಹಿಕ ಶಿಕ್ಷಣ ನಿದೇ೯ಶಕ ಪ್ರಕಾಶ್ ರಾವ್ ಡಿ ಪ್ರಾಸ್ತಾವಿಕವಾಗಿ ಮಾತನಾಡಿ ಫಿಟ್ ಇಂಡಿಯಾಸ್ವಾತಂತ್ರ್ಯ ಓಟದ ಬಗ್ಗೆ ಮಾತನಾಡಿದರು . ನಗರದ ಎ.ಎಲ್.ಎನ್.ರಾವ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಓಟದಲ್ಲಿ ಕಾಲೇಜಿನ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವಗ೯ದವರು ಹಾಗೂ ವಿದ್ಯಾಥಿ೯ಗಳು ಸಾಮಾಜಿಕ ಅಂತರವನ್ನು ಪಾಲನೆಮಾಡಿ ಭಾಗವಹಿಸಿದರು.
