ರಕ್ಷಾ ಸಾವಿನ ಪ್ರಕರಣ:ಸಿಐಡಿ ತನಿಖೆ ಆರಂಭ

ವೈದ್ಯರ ನಿರ್ಲಕ್ಷದಿಂದ ಮೃತಪಟ್ಟ ರಕ್ಷಾ ಸಾವಿನ ತನಿಖೆ ಸಿಓಡಿ ನೀಡಲಾಗಿದ್ದು ಅದರ ತನಿಖೆ ಈಗಾಗಲೇ ಆರಂಭ ವಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ
ಆಗಸ್ಟ್ ನಲ್ಲಿ ಸಂಭವಿಸಿದ ರಕ್ಷಾ ಅವರ ಸಾವಿನ ಪ್ರಕರಣದ ಬಗ್ಗೆ ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ರವರು, ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಆದೇಶ ನೀಡಿದ ದಿನವೇ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗಿದೆ. ವಿಚಾರಣೆ, ತನಿಖೆ ಪ್ರಗತಿ ಹಂತದಲ್ಲಿ ಇರುವಾಗ ಪ್ರಕರಣದ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ.
ಯಾವುದೇ ತನಿಖೆ ಪರಿಣಾಮಕಾರಿಯಾಗಿ ನಡೆಯಬೇಕಾದರೆ ತನಿಖೆ ಮುಗಿಯುವ ವರೆಗೆ ಅದರ ಗೌಪ್ಯತೆಯನ್ನು ಕಾಪಾಡ ಬೇಕಾಗುತ್ತದೆ ಎಂದರು. ರಕ್ಷಾ ರವರ ಸಾವಿನ ಪ್ರಕರಣದ ಬಗ್ಗೆ ತನಿಖೆಯಾಗಬೇಕು ಎಂಬ ಕೂಗು ಜಿಲ್ಲೆಯಲ್ಲಿ ಬಲಗೊಂಡ ನಂತರ ಗೃಹ ಸಚಿವರು ಈಗಾಗಲೇ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿದನ್ನು ಇಲ್ಲಿ ಸ್ಮರಿಸಬಹುದು.
ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಾ ಸಾವಿನ ತನಿಖೆಯನ್ನು ಶೀಘ್ರವಾಗಿ ನಡೆಸ ಬೇಕೆಂದು ಒತ್ತಾಯ ಮಾಡಿ ಜಸ್ಟಿಸ್ ಫಾರ್ ರಕ್ಷಾ( justice for raksha ) ಎಂಬ ಟ್ವಿಟರ್ ಅಭಿಯಾನ ನಡೆಯುತ್ತಿದೆ

Leave a Reply