Janardhan Kodavoor/ Team KaravaliXpress
26.6 C
Udupi
Thursday, January 20, 2022
Sathyanatha Stores Brahmavara

ಶ್ರೀಕ್ಷೇತ್ರ ಬಂಟಕಲ್ಲು~ ಆರ್‌ಎಸ್‌ಬಿ ಯುವವೃಂದದ ಸಾಧನೆ ಅನುಕರಣೀಯ -ಡಾ.ವಿದ್ಯಾಲತಾ ನಾಯಕ್

ಶಿರ್ವ:-  ಕಳೆದ ೩೪ ವರ್ಷಗಳ ಹಿಂದೆ ಪ್ರಾರಂಭಗೊ0ಡ ರಾಜಾಪುರ ಸಾರಸ್ವತ ಯುವವೃಂದ ಸಮಾಜದ ಯುವ ಸಮುದಾಯವನ್ನು ಸಂಘಟಿಸಿ, ವಿವಿಧ  ಕಾರ್ಯಕ್ರಮಗಳ ಮೂಲಕ ಸಮಾಜದ ಎಲ್ಲಾಕ್ಷೇತ್ರಗಳಲ್ಲಿಯೂ ಉತ್ತಮ ಸಮಾಜಮುಖಿ ಸೇವಾಸಕ್ತ ಸಶಕ್ತ ವ್ಯಕ್ತಿಗಳನ್ನು ನಿರ್ಮಾಣ ಮಾಡಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕ್ರೀಡೆ ಹಾಗೂ ಸಾಂಸ್ಕೃತಿಕವಾಗಿ ಬೆಳೆಯಲು, ಸಮಾಜದಲ್ಲಿ ಸಮರ್ಥ ನಾಯಕತ್ವವನ್ನು ನೀಡುವಲ್ಲಿ ಯಶಸ್ವಿಯಾಗಿದೆ.
ದುರ್ಗಾಹೋಮ ಸೇವೆಯ ಮೂಲಕ ಶ್ರೀಕ್ಷೇತ್ರದಲ್ಲಿ ಧಾರ್ಮಿಕ ಮೌಲ್ಯಗಳ ವೃದ್ದಿಗೆ ಉತ್ತಮ ತಳಹದಿಯನ್ನು ನಿರ್ಮಿಸಿದೆ. ಬಂಟಕಲ್ಲು  ಆರ್‌ಎಸ್‌ಬಿ ಯುವವೃಂದದ ಸಾಧನೆ ಅನುಕರಣೀಯ ಎಂದು ಬ್ರಹ್ಮಾವರ ಎಸ್‌ಎಮ್‌ಎಸ್ ಕಾಲೇಜಿನ ಉಪಪ್ರಾಂಶುಪಾಲೆ ಡಾ. ವಿದ್ಯಾಲತಾ  ನಾಯಕ್ ನುಡಿದರು.

 ಅವರು ರವಿವಾರ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ಬಂಟಕಲ್ಲು ಯುವೃಂದದ ವತಿಯಿಂದ ಏರ್ಪಡಿಸಿದ ರಜತ ವರ್ಷದ “ಶ್ರೀದುಗಾಹೋಮ”, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಕ್ರೀಡಾಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ  ಪಿಎಚ್‌ಡಿ ಸಾಧಕ ನಿಟ್ಟೆ ತಾಂತ್ರಿಕ ಕಾಲೇಜಿನ ಉಪನ್ಯಾಸಕ ಡಾ.ಶ್ರೀರಾಮ್ ಪಿ.ಮರಾಠೆ,  ಸಂಗೀತ,ಸಾಹಿತ್ಯ ಕಲಾ ಸಾಧಕ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು,  ಪ್ರಗತಿಪರ ಕೃಷಿಕ ಉಪೇಂದ್ರ ನಾಯಕ್ ಹೇರೂರುಗಂಪ ಇವರನ್ನು ಸನ್ಮಾನಿಸಲಾಯಿತು. ಕ್ರೀಡೋತ್ಸವದಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿರ್ವ ಗ್ರಾ,ಪಂ.ಅಧ್ಯಕ್ಷ ಕೆ.ಆರ್.ಪಾಟ್ಕರ್‌ರವರನ್ನು ಅಭಿನಂದಿಸಲಾಯಿತು. 

ಮುಖ್ಯ ಅತಿಥಿಗಳಾಗಿ  ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್  ಮಾತನಾಡಿ ನಮ್ಮ ಸಮಾಜ ಕೃಷಿಪ್ರಧಾನ ಸಮಾಜವಾಗಿದ್ದು, ಇಂದು ಸಾಮಾಜಿಕ ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ  ಮುಂಚೂಣಿಯಲ್ಲಿದೆ.
ಮುಂದುವರಿದ0ತೆ ಮಾತೃಭಾಷೆ, ಮಾತೃಸಂಸ್ಥತಿ, ಧಾರ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ. ಇತರ ಸಂಘಟನೆ. ಕ್ಷೇತ್ರಗಳಲ್ಲಿಯೂ  ಸೇರಿ ಸಮಾಜದ ನಾಯಕರಾಗಿ ಮೂಡಿ ಬರಬೇಕು ಎಂದರು.
 
ಶ್ರೀಕ್ಷೇತ್ರದ ಹಿರಿಯ ವೈದಿಕರಾಗಿದ್ದ ದಿ.ಕೆ.ವೇದವ್ಯಾಸರಾಯ ಭಟ್ ಸ್ಮರಣಾರ್ಥ ಅರ್ಚಕ ವೇ.ಮೂ.ಸುಧೀರ್ ಭಟ್ ಯುವೃಂದದ ಸರ್ವಸದಸ್ಯರಿಗೆ ಶಾಲು ಉಡುಗೊರೆ ನೀಡಿದರು.  ಉದ್ಯಮಿ ವಾಸುದೇವ ನಾಯಕ್ ಮಣಿಪಾಲ ಶುಭ ಹಾರೈಸಿದರು. ಪ್ರಾರಂಭದಲ್ಲಿ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಎಳ್ಳಾರೆ ಸದಾಶಿವ ಪ್ರಭು ಜ್ಯೋತಿ ಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ವಹಿಸಿದ್ದರು. ಯುವವೃಂದದ ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ಪಾಟ್ಕರ್ ಉಪಸ್ಥಿತರಿದ್ದರು.  
ಯುವೃಂದದ ಅಧ್ಯಕ್ಷೆ  ಶ್ರಾವ್ಯಾ ಪಾಟ್ಕರ್ ಸ್ವಾಗತಿಸಿದರು, ಪುನೀತ್  ತೆಂಡುಲ್ಕರ್, ಮಾನ್ಯಾ ಪಾಟ್ಕರ್, ರಚಿತಾ ಪಾಟ್ಕರ್, ಭೂಮಿಕಾ ಪರಿಚಯಿಸಿದರು. ಶಿಕ್ಷಕ ದೇವದಾಸ್ ಪಾಟ್ಕರ್ ಮುದರಂಗಡಿ ನಿರೂಪಿಸಿದರು. ಅನಂತರಾಮ ವಾಗ್ಲೆ, ಉಮೇಶ ಪಾಟ್ಕರ್, ರಾಘವೇಂದ್ರ ನಾಯಕ್ ಪಾಲಮೆ ಸಹಕರಿಸಿದರು.  
ದಿಶಾ ಪ್ರಭು ಪ್ರಾರ್ಥಿಸಿದರು. ಕಾರ್ಯದರ್ಶಿ ಸುಮಲತಾ ಪಾಟ್ಕರ್ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ  ಆರ್‌ಎಸ್‌ಬಿ ಕೊಂಕಣಿ  ಪ್ರಪ್ರಥಮ ಚಲನಚಿತ್ರ “ಅಮ್ಚೆ ಸಂಸಾರ್” ಚಿತ್ರದ ನಿರ್ಮಾಪಕ,ನಿರ್ದೇಶಕರಾದ ಸಂದೀಪ್ ಕಾಮತ್, ಭುವನೇಶ್ ಪ್ರಭು, ಜಿ.ಪಂ.ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಹಿರಿಯ ಜ್ಯೋತಿಷಿ ಮಾಣ್ಯೂರು ಉಪೇಂದ್ರ ಪ್ರಭು, ಶ್ರೀದುರ್ಗಾ ಚಂಡೆ ಬಳಗದ ಅಧ್ಯಕ್ಷೆ ಗೀತಾ ವಾಗ್ಲೆ, ಸಮಾಜ ಬಾಂದವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!