ಆಚಾರ್ಯಾಸ್ ಏಸ್ : ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ

9,10,ಪಿಯುಸಿ,ಸಿಇಟಿ, ಜೆಇಇ, ನೀಟ್, ಕಾಮರ್ಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಉಡುಪಿಯ ಏಸ್ ವತಿಯಿಂದ ನವಂಬರ್ 27ರಿಂದ ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ ಆಯೋಜಿಸಲಾಗಿದೆ. ನವೆಂಬರ್ 27ನೇ ತಾರೀಖಿನಿಂದ ಪ್ರತೀ ಶನಿವಾರ ಅಪರಾಹ್ನ 4 ರಿಂದ 6 ರ ವರೆಗೆ ಮತ್ತು ಭಾನುವಾರದಂದು ಬೆಳಿಗ್ಗೆ 9 ರಿಂದ ಸಂಜೆ 4 ರ ವರೆಗೆ ಜರಗಲಿದೆ.


ಕಳೆದ 7 ವರ್ಷಗಳಿಂದ ಪರಿಣಾಮಕಾರಿ ತರಬೇತಿ ಮೂಲಕ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಕಾಶ ಕಲ್ಪಿಸಿರುವ ಏಸ್ ಸಂಸ್ಥೆಯು ಈ ಭಾರೀ ಇನ್ನಷ್ಟು ಸೌಲಭ್ಯ ಮತ್ತು ಸಂಪನ್ಮೂಲತೆಯ ಮುಖೇನ ತರಬೇತಿಯನ್ನು ಆಯೋಜಿಸುತ್ತಿದೆ. 

ಬ್ಯಾಂಕಿಂಗ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ಆಳವಾದ ಅಧ್ಯಯನ ನಡೆಸಿರುವ ಪ್ರತಿಭಾನ್ವಿತ ಉಪನ್ಯಾಸಕರುಗಳಿಂದ ತರಬೇತಿಯು ಜರಗಲಿದೆ. ಉಪನ್ಯಾಸದ ಜೊತೆಗೆ ಪ್ರಮುಖ ಅಧ್ಯಾಯಗಳ ಕುರಿತಾಗಿ ತೀರಾಪರಿಷ್ಕೃತ ಪ್ರಶ್ನೆಪತ್ರಿಕೆಗಳೊಂದಿಗೆ ನಿರಂತರ ಮಾದರಿ ಪರೀಕ್ಷೆಗಳನ್ನೂ ಕೂಡಾ ಆಯೋಜಿಸಲಾಗುವುದು.

ಈ ತರಬೇತಿಯ ಸಂದರ್ಭ ರೈಲ್ವೇಸ್, ಇನ್ಸೂರೆನ್ಸ್, ಐಟಿ, ಹಾಗೂ ವಿವಿಧ ಮಾದರಿಯ ವಿನೂತನ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ದಗೊಳಿಸ ಲಾಗುವುದು. ಬ್ಯಾಂಕಿಂಗ್ ಪ್ರಿಲಿಮ್ಸ್ ಹಾಗೂ ಮೈನ್ಸ್ ಮಾದರಿಯಲ್ಲಿ ಜರಗಲಿದ್ದು ಮ್ಯಾಥ್ಸ್, ರೀಸನಿಂಗ್ ,ಇಂಗ್ಲಿಷ್, ಜಿಕೆ, ಕರೆಂಟ್ ಅಫೇರ್ಸ್, ಕಂಪ್ಯೂಟರ್ ನಾಲೇಜ್, ವಿವಿಧ ಬ್ಯಾಂಕಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ಆಡಳಿತ,ಆರ್ಥಿಕ ಕ್ಷೇತ್ರಗಳ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಹೊಂದಿರುತ್ತದೆ. 

ಅಲ್ಲದೆ ಕನಿಷ್ಟ ಅವಧಿಯಲ್ಲಿ ಗರಿಷ್ಟ ಪ್ರಶ್ನೆಗಳನ್ನು ಅತ್ಯಂತ ವೇಗ ಮತ್ತು ನಿಖರತೆಯಿಂದ ಉತ್ತರಿಸುವ ಪ್ರತಿಭೆಯನ್ನು  ಪರೀಕ್ಷಾರ್ಥಿಗಳು ತಿಳಿದಿರಬೇಕೆನ್ನುವ ನಿಟ್ಟಿನಲ್ಲಿ ವೇಗ-ನಿಖರತೆಯ ಪರಿಣತಿಗಾಗಿ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಹಮ್ಮಿಕೊಳ್ಳಲಾಗಿದೆ. ತರಬೇತಿಯ ಅಂತ್ಯದಲ್ಲಿ ಮಾದರಿ ಆನ್ಲೈನ್ ಪರೀಕ್ಷೆಗಳನ್ನು ಆಯೋಜಿಸಲಾಗುತ್ತಿದೆ. ಬ್ಯಾಂಕಿಂಗ್ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂದಿಸಿದ ಪ್ರಸಿದ್ದ ಪ್ರಕಾಶಕರ ಕೃತಿಗಳು ಗ್ರಂಥಾಲಯ ದಲ್ಲಿ ಉಚಿತವಾಗಿ ಲಭ್ಯವಿದೆ.

ಆಸಕ್ತ ವಿದ್ಯಾರ್ಥಿಗಳು ಉಡುಪಿ ತೆಂಕಪೇಟೆಯಲ್ಲಿರುವ ಶ್ರೀಲಕ್ಷ್ಮೀವೆಂಕಟರಮಣ ದೇವಾಲಯದ ಸಮೀಪದ ರಾಧೇಶ್ಯಾಮ ಕಟ್ಟಡದ ಏಸ್ ಕಚೇರಿಯನ್ನು ಸಂಪರ್ಕಿಸಬೇಕೆಂದು  ಸಂಸ್ಥೆಯ ನಿರ್ದೇಶಕ ಅಕ್ಷೋಭ್ಯ ಆಚಾರ್ಯ (9901420714) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಉಡುಪಿ ಏಸ್: 0820-4299111)

 
 
 
 
 
 
 
 
 

Leave a Reply