Janardhan Kodavoor/ Team KaravaliXpress
23.6 C
Udupi
Friday, December 2, 2022
Sathyanatha Stores Brahmavara

ನಿವೃತ್ತ ‌ಮುಖ್ಯೋಪಾಧ್ಯಾಯ ಎಸ್ ರಾಮದಾಸ ಶಿವತ್ತಾಯ ನಿಧನ

ಉಡುಪಿಯ ಮೂಡುಪೆರಂಪಳ್ಳಿಯ ಖಾಸಗಿ ಅನುದಾನಿತ ಹಿ ಪ್ರಾ ಶಾಲೆಯ ( ಶಿವತ್ತಾಯರ ಶಾಲೆ) ನಿವೃತ್ತ ಮುಖ್ಯ ಶಿಕ್ಷಕ ಎಸ್ ರಾಮದಾಸ ಶಿವತ್ತಾಯರು(75) ನಿಧನರಾಗಿದ್ದಾರೆ.
ಇಂದು ಸಂಜೆ 6 ಘಂಟೆಗೆ ಪೆರಂಪಳ್ಳಿಯ ಸ್ವಗೃಹದ ಬಳಿ ಇರುವ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಅದಮ್ಯ ಮಾನವೀಯ ಕಳಕಳಿಯ ವ್ಯಕ್ತಿತ್ವ ಹಾಗೂ ಅಪಾರ ದೈವಶ್ರದ್ಧೆಯನ್ನು ಹೊಂದಿದ್ದ ಶಿವತ್ತಾಯರು ಉದಾರ ದಾನಿಯೂ ಆಗಿದ್ದರು . ಯಕ್ಷಗಾನ ಕಲೆಯ ಬಗ್ಗೆ ವಿಶೇಷ ಪ್ರೀತಿ ಅಭಿಮಾನ ಹೊಂದಿದ್ದ ಅವರು ತಮ್ಮ‌ ಮನೆಯ ಆವರಣದಲ್ಲೇ ಕಟೀಲು, ಧರ್ಮಸ್ಥಳ, ಮಂದಾರ್ತಿ,ಕರ್ನಾಟಕ ಮೇಳವೂ ಸೇರಿ 7 ಮೇಳಗಳ ಯಕ್ಷಗಾನ ಬಯಲಾಟ ಸೇವೆಯನ್ನೂ ನಡೆಸಿದ್ದರು. ಯಕ್ಷಗಾನ ಕಲಾರಂಗದ ಸದಸ್ಯರಾಗಿದ್ದ ವಿವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರಾವ್ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!