ಶಿಕ್ಷಕಿ ಸುಜಾತ ಶೆಟ್ಟಿಯವರಿಂದ ಕ್ರೀಡೆಯಲ್ಲಿ ಸಾಧನೆ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಹಾಗೂ ಉಡುಪಿ ಜಿಲ್ಲಾ ಮಟ್ಟದ ವಸತಿ ಶಾಲೆ ಮತ್ತು ಕಾಲೇಜ್ ಸಂಯುಕ್ತವಾಗಿ ನೌಕರರ ಕ್ರೀಡಾಕೂಟವನ್ನು ಆಯೋಜಿಸಿತ್ತು. ವಿಭಾಗ ಮಟ್ಚದ ಈ ಕ್ರೀಡಾಕೂಟವು ಬ್ರಹ್ಮಾವರದ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ವಿಜ್ಞಾನ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ದಿನಾಂಕ 08/011/2022ರಂದು ನೆರವೇರಿತು. ಇದರಲ್ಲಿ 40 ವರ್ಷಕ್ಕಿಂತ ಕೆಳಗಿನ ವಯೋಮಾನದ ವಿಭಾಗದಲ್ಲಿ ಶ್ರೀಮತಿ ಸುಜಾತ ಶೆಟ್ಟಿಯವರು ಅತ್ಯುತ್ತಮವಾಗಿ ತ್ರೋಬಾಲ್ ಪಂದ್ಯಾಟದಲ್ಲಿ ಆಡಿ ಪ್ರಥಮ ಸ್ಥಾನ ಪಡೆದರೆ 100 ಮೀ ಓಟದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಇವರು ಉಡುಪಿ ಪಟ್ಲ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯ ಶಿಕ್ಷಕಿ. ಇವರ ಸಾಧನೆಯನ್ನು ಶಾಲಾ ಪ್ರಾಂಶುಪಾಲೆ ಶ್ರೀಮತಿ ಪೂರ್ಣಿಮಾ ಹಾಗೂ ಶಾಲಾ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.

 
 
 
 
 
 
 
 
 
 
 

Leave a Reply