ಪೂಜ್ಯ ಪುತ್ತಿಗೆ ಶ್ರೀಪಾದರ ಚಾತುರ್ಮಾಸ್ಯ ಪೂರ್ವಭಾವಿ ಸಭೆ

ಭಾವಿ ಪರ್ಯಾಯ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಶಿಷ್ಯ ಶ್ರೀ ಶ್ರೀ ಸುಶ್ರೀ೦ದ್ರ ತೀರ್ಥ ಶ್ರೀಪಾದರ ಜೊತೆಗೆ ಭಕ್ತಜನರ ಅಪೇಕ್ಷೆ ಮೇರೆಗೆ ಬೆಂಗಳೂರು ನಗರದ ಗೋವರ್ಧನ ಕ್ಷೇತ್ರ ,ಶ್ರೀ ಪುತ್ತಿಗೆ ಮಠದಲ್ಲಿ ಚಾತುರ್ಮಾಸ್ಯವ್ರತವನ್ನು ಈ ಬಾರಿ ನಡೆಸಲಿದ್ದಾರೆ .
ತತ್ಪ್ರಯುಕ್ತ ಇಂದು ಬೆಂಗಳೂರಿನ ಗೋವರ್ಧನ ಕ್ಷೇತ್ರದಲ್ಲಿ ಮೊದಲ ಸಿದ್ದತಾ ಸಭೆಯನ್ನು ನಡೆಸಲಾಯಿತು .

ಈ ಸಭೆಯಲ್ಲಿ ಪ್ರೊಫ್, ರಾಧಾಕೃಷ್ಣರಾವ್ , ಚಂದ್ರ ಶೇಖರ್ ಹೆಬ್ಬಾರ್ ,ಗಿರಿಧರ್ ಬಜ್ಪೆ ,ಜಯಂತ್ ರಾವ್ ,ಹರೀಶ್ , ರಾಘವೇಂದ್ರ ರಾವ್ ಶ್ರೀಮತಿ ಮಾಲಿನಿ , ಪುಷ್ಪಕ್ ,ಅಗ್ನಿಹೋತ್ರಿ ,ಶಶಿಧರ್ , ವಿನಯ್ , TMO ಸದಸ್ಯರು , ಶ್ರೀಪತಿ ಉಪಾಧ್ಯಾಯ ,ಸಂತೋಷ್ ಕೆಪಿ ಜನಾರ್ದನ ತಂತ್ರಿ ಮುಂತಾದ ಗಣ್ಯರು ಉಪಸ್ಥಿತರಿದ್ದು ಸಲಹೆಯನ್ನು ನೀಡಿದರು

ಈ ಬಾರಿಯ ಚಾತುರ್ಮಾಸ್ಯ ಶ್ರೀಪಾದರ 50 ನೆಯ ಪೀಠಾರೋಹಣ ವರ್ಷವಾಗಿದ್ದು , ಈ ವಿಶೇಷ ಸಂದರ್ಭದಲ್ಲಿ ಶ್ರೀಪಾದರು ಕೈಗೆತ್ತಿಕೊಂಡಿರುವ ಬೃಹತ್ ಲೋಕಕಲ್ಯಾಣ ಯೋಜನೆಯಾದ ಕೋಟಿ ಗೀತಾಲೇಖನ ಯಜ್ಞ ವನ್ನು ವ್ಯಾಪಕವಾಗಿ ನೊಂದಾಯಿಸಲು ತೀರ್ಮಾನಿಸಲಾಯಿತು .

ಶ್ರೀ ಮಠದ ವ್ಯವಸ್ಥಾಪಕ ಕುಂಜಾರ್ ರವರು ಸ್ವಾಗತಿಸಿದರು .ದಿವಾನರಾದ ನಾಗರಾಜಾಚಾರ್ಯ ಪ್ರಸ್ತಾವಿಸಿದರು .ಮುಖ್ಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ವಂದಿಸಿದರು .

 
 
 
 
 
 
 
 
 
 
 

Leave a Reply