ಭಗವದ್ಗೀತೆ ಲೇಖನದಿಂದ ಸರ್ವಸಂಕಷ್ಟಗಳ ನಿವಾರಣೆ ~ಪುತ್ತಿಗೆ ಶ್ರೀ

ಭಾವಿ ಪರ್ಯಾಯ ಪೀಠಾಧಿಪತಿ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರ ತಮ್ಮ ಚತುರ್ಥ ಪರ್ಯಾಯದ ಬಹುಮುಖ್ಯ ಯೋಜನೆಯಾದ ಕೋಟಿ ಗೀತಾ ಲೇಖನದ ಯಜ್ಞ ದೀಕ್ಷೆಗೆ ಇಂದು ಉದ್ಯಾವರದ ಪ್ರಸಿದ್ಧ ವೀರ ವಿಠ್ಠಲ ದೇವಳದಲ್ಲಿ ಶುಭೋದಯ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ರಂಗನಾಥ್ ಶೆಣೈ ಯವರು ಚಾಲನೆ ನೀಡಿದರು. ವಾಗ್ಮಿ ಶ್ರೀ ದಿನೇಶ್ ಕಾಮತ್ ಗೀತೆಯ ಪ್ರತಿ ವಾಕ್ಯವೂ ನಮ್ಮ ಆತ್ಮೋದ್ದಾರ ಕ್ಕೆ ಪೂರಕ ಅಲ್ಲದೆ ನಮ್ಮ ಸಂಕಷ್ಟಗಳನ್ನು ನಿವಾರಿಸುವದಲ್ಲದೆ , ಎದುರಿಸುವ, ಸಹಿಸುವ ಶಕ್ತಿಯನ್ನು ನೀಡಲಿದೆ ಎಂದು ತಿಳಿಸಿದರು. ಪುತ್ತಿಗೆ ಶ್ರೀಗಳಿಂದ. ನಿಯೋಜಿತ ಪ್ರದ್ಯುಮ್ನ ತಂಡದ ರಮೇಶ್ ಭಟ್ ಕೆ ಇವರು ಶ್ರೀಗಳವರ ಈ ಯೋಜನೆಯ ಹಿಂದಿನ ಭಾವರ್ಥ ಹಾಗೂ ರೂಪು ರೇಷೆಗಳನ್ನು ವಿವರಿಸಿದರು.

ಸಭೆಯಲ್ಲಿ 2ನೆ ಮೊಕ್ತೇಸರರಾದ ಶ್ರೀಸುರೇಶ್ ಶೆಣೈ, ಟ್ರಸ್ಟಿಗಳಾದ ಶ್ರೀಪ್ರಕಾಶ್ ಶೆಣೈ, ಶ್ರೀ ದಯಾನಂದ ಭಂಡಾರ್ಕರ್ ಹಾಗೂ ಮಠದ ಗೀತಾ ಪ್ರಚಾರಕರಾದ ಶ್ರೀ ಸುರೇಶ್ ಕಾರಂತ್,ಶ್ರೀ ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು. ಶ್ರೀ ವೀರ ವಿಠ್ಠಲ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಲತಾ ಆಚಾರ್ಯ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 50 ಕ್ಕೂ ಹೆಚ್ಚು ಶ್ರೀ ಕೃಷ್ಣ ಭಕ್ತರು ಗೀತಾ ಲೇಖನ ದೀಕ್ಷೆ ಪಡೆದರು.

 
 
 
 
 
 
 
 
 
 
 

Leave a Reply