Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಬಾಲಕರ ಹಾಗೂ ಬಾಲಕಿಯರ ಫುಟ್‌ಬಾಲ್ ಪಂದ್ಯಾಟ

ಜಿಲ್ಲಾಡಳಿತ ಉಡುಪಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬೃಹ್ಮಾವರ ಹಾಗೂ ಮಣಿಪಾಲ ಪದವಿ ಪೂರ್ವ ಕಾಲೇಜು, ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಕೆನರಾ ಬ್ಯಾಂಕ್ ಪ್ರಾಯೋಜಿತ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಬಾಲಕರ ಹಾಗೂ ಬಾಲಕಿಯರ ಫುಟ್‌ಬಾಲ್ ಪಂದ್ಯಾಟವು ಮಣಿಪಾಲ ಪದವಿ ಪೂರ್ವ ಕಾಲೇಜಿನ ಕ್ರಿಡಾಂಗಣದಲ್ಲಿ ಜರುಗಿತು.

ಉಧ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಶ್ರೀ ರಘುನಾಥ್, ಕೆನರಾ ಬ್ಯಾಂಕ್ ಮಣಿಪಾಲ ಶಾಖೆಯ ಪ್ರಬಂಧಕರಾದ ಶ್ರೀ ನಿತಿನ್ ಅಜ್‌ಮೇರಾ, ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀ.ಜಯರಾಮ ಶೆಟ್ಟಿಗಾರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಅಹಲ್ಯಾ ಆಚಾರ್ಯ, ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ. ಅನಿತಾ ಮಲ್ಯ, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಸಂತೋಷ ಕುಮಾರ ಕುಂದಾಪುರ ಹಾಗೂ ಕಾರ್ಕಳದ ಟಿ.ಪಿ.ಓ. ಗಳಾದ ಶ್ರೀ ಚಂದ್ರಶೇಖರ ಶೆಟ್ಟಿ ಹಾಗೂ ಶ್ರೀ ರವಿಚಂದ್ರ ಕಾರಂತ ಉಪಸ್ಥಿತರಿದ್ದರು. ಪಂದ್ಯಾಟವನ್ನು ಉಧ್ಘಾಟಿಸಿದ ಶ್ರೀ ನಿತಿನ್ ಅಜ್‌ಮೇರಾ ಕ್ರೀಡಾಳುಗಳಿಗೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೂಪಾ ಭಟ್ ವಹಿಸಿದ್ದರು.
ಒಟ್ಟು ೧೩ ತಂಡಗಳು ಭಾಗವಹಿಸಿದ ಈ ಪಂದ್ಯಾಟದಲ್ಲಿ ವಿಜೇತ ತಂಡಗಳ ವಿವರ ಈ ಕೆಳಗಿನಂತಿದೆ. ಪ್ರಥಮ ಸ್ಥಾನ ಪಡೆದ ತಂಡಗಳು ಮಂಗಳೂರಿನಲ್ಲಿ ನಡೆಯಲಿರುವ ಮೈಸೂರು ವಿಭಾಗ ಮಟ್ಟದ ಪಂದ್ಯಾಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿವೆ.
೧. ೧೭ ರ ವಯೋಮಿತಿಯ ಬಾಲಕರು
ಪ್ರಥಮ : ಸೆಕ್ರೆಡ್ ಹಾರ್ಟ ಆಂಗ್ಲ ಮಾಧ್ಯಮ ಶಾಲೆ, ಬಜಗೋಳಿ – ಕಾರ್ಕಳ ವಲಯ
ದ್ವಿತೀಯ : ಸರಕಾರಿ ಪ.ಪೂ.ಕಾಲೇಜು, ಹೆಜಮಾಡಿ – ಉಡುಪಿ ವಲಯ
೨. ೧೭ ರ ವಯೋಮಿತಿಯ ಬಾಲಕಿಯರು
ಪ್ರಥಮ : ಸಂತ ಸಿಸಿಲಿ ಪ್ರೌಢಶಾಲೆ, ಉಡುಪಿ – ಉಡುಪಿ ವಲಯ
ದ್ವಿತೀಯ : ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ – ಕಾರ್ಕಳ ವಲಯ
೩. ೧೪ ರ ವಯೋಮಿತಿಯ ಬಾಲಕರು
ಪ್ರಥಮ : ಆಲ್ ಅಜಾರ್ ಆಂಗ್ಲ ಮಾಧ್ಯಮ ಶಾಲೆ, ಹೆಜಮಾಡಿ – ಉಡುಪಿ ವಲಯ
ದ್ವಿತೀಯ : ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ – ಕಾರ್ಕಳ ವಲಯ
೪. ೧೪ ರ ವಯೋಮಿತಿಯ ಬಾಲಕಿಯರು
ಪ್ರಥಮ : ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆ ಸಾಸ್ತಾನ – ಬೃಹ್ಮಾವರ ವಲಯ
ದ್ವಿತೀಯ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಂಡ್ಕೂರು – ಕಾರ್ಕಳ ವಲಯ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!