ಪರ್ಕಳ : ವೃತ್ತಿಪರ ಸೇವಾ ದಿನಾಚರಣೆ

ಪರ್ಕಳ : ಸಮಾಜದಲ್ಲಿ ಹಲವಾರು ವೃತ್ತಿಪರ ಕ್ಷೇತ್ರಗಳಲ್ಲಿ ಕೌಟುಂಬಿಕವಾಗಿ ಅಥವಾ ತಾಂತ್ರಿಕ ಪರಿಣತಿಯನ್ನು ಪಡೆದು ಜೀವನ ನರ‍್ವಹಣೆ ಬದುಕು ಕಟ್ಟಿ ಕೊಂಡವರಿದ್ದಾರೆ. ಹಲವಾರು ವೃತ್ತಿಗಳನ್ನು ಹವ್ಯಾಸವನ್ನಾಗಿ ಬೆಳೆಸಿ ಕೊಂಡವರಿದ್ದಾರೆ.

ಎಲ್ಲಾ ವೃತ್ತಿಪರ ಸೇವೆಗೆ ತನ್ನದೇ ಆದ ಮೌಲ್ಯಗಳಿವೆ, ಪ್ರಾಮುಖ್ಯತೆಗಳಿವೆ, ಅವೆಲ್ಲವನ್ನೂ ಸಮಾನ ರೀತಿಯಲ್ಲಿ ಗೌರವಿಸುವ ಪರಿಪಾಠ ಬೆಳೆಯಬೇಕು. ಹಾಗು ರ‍್ವ ಮಹಿಳೆ ಮನೆಯಲ್ಲಿ ಗ್ರಹಿಣಿಯಾಗಿ ತನ್ನ ಕುಟುಂಬವನ್ನು ನರ‍್ವಹಣೆ ಮಾಡುವ ಕೆಲಸವನ್ನು ಕೂಡ ವೃತ್ತಿಪರ ಸೇವೆಯೆಂದೇ ಪರಿಗಣಿಸಿ ಅವಳನ್ನು ಕೂಡ ಅದೇ ಗೌರವ ಮನೋಭಾವನೆಯಿಂದ ಕಾಣ ಬೇಕು ಎಂದು ನಿಯೋಜಿತ ರೋಟರಿ ಜಿಲ್ಲೆ ರ ನಿಯೋಜಿತ ಜಿಲ್ಲಾ ಗರ‍್ನರ್ ಡಾ. ಜಯಗೌರಿ ಅಭಿಮತ ವ್ಯಕ್ತ ಪಡಿಸಿದರು. ಶನಿವಾರ ಪರ್ಕಳದಲ್ಲಿ ಪರ್ಕಳ ರೋಟರಿ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ ವೃತ್ತಿಪರ ಸೇವಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ವಿವಿಧ ವೃತ್ತಿಪರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಯಶೋಧಾ, ಕಿರಣ್ ಕುಮಾರ್, ಭವಾನಿ, ಮುದ್ದು ಮಡಿವಾಳ, ಬೊಗ್ಗು ಕುಲಾಲ್, ಮಹಮ್ಮದ್ ಷರೀಫ್, ನಾರಾಯಣ್ ಆಚಾರ್ಯ, ವಿಠ್ಠಲ್ ನಾಯ್ಕ ರನ್ನು ಸನ್ಮಾನಿಸಲಾಯಿತು. ಚಂದ್ರಶೇಖರ್ ಅಡಿಗ ಪ್ರಾಯೋಜಕತ್ವದಲ್ಲಿ ಪರ್ಕಳ ಬಿ ಎಂ ಶಾಲೆಗೆ ಪೀಠೋಪಕರಣಗಳನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷ ಶ್ರೀನಿವಾಸ್ ನಾಯಕ್ ವಹಿಸಿದ್ದರು. ಸಹಾಯಕ ಗವರ್ನರ್ ಡಾ.ಸುರೇಶ್ ಶೆಣೈ, ವಲಯ ಸೇನಾನಿ ಸಚ್ಚಿದಾನಂದ ನಾಯಕ್, ವೃತ್ತಿಪರ ಸೇವಾ ನರ‍್ದೇಶಕ ಎಸ್ ಎನ್ ನಾಯಕ್ ಹಾಗು ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು. ಕರ‍್ಯರ‍್ಶಿ ಮಂಜುನಾಥ್ ಉಪಾಧ್ಯ ವಂದಿಸಿದರು. ಗಣೇಶ್ ಪಾಟೀಲ್ ನಿರೂಪಿಸಿದರು. ಕ್ಲಬ್ ನ ಮಾಜಿ ಅಧ್ಯಕ್ಷ ದಯಾನಂದ ನಾಯಕ್ ಕರ‍್ಯಕ್ರಮ ಸಂಘಟಿಸಿದರು.

 
 
 
 
 
 
 
 
 
 
 

Leave a Reply