ಕೋಟ : ಪರಿಸರ ಸ್ನೇಹಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಕೋಟ: ಸ್ವಚ್ಛತಾ ಅಭಿಯಾನಗಳು ಮನೆ ಮನೆಯಲ್ಲೂ ಆರಂಭಗೊಳ್ಳಬೇಕು ಆಗ ಮಾತ್ರ ಪರಿಸರ ಸುಂದರವಾಗಿಡಲು ಸಾಧ್ಯವಿದೆ ಎಂದು ಬ್ರಹ್ಮಾವರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗುಂಡ್ಮಿ ರವೀಂದ್ರ ಉಪಾಧ್ಯ ಹೇಳಿದ್ದಾರೆ.

ಕೋಟದ ಪಂಚವರ್ಣ ಯುವಕ ಮಂಡಲದ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ,ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ,ಯಕ್ಷ ಸೌರಭ ಕಲಾರಂಗ ಕೋಟ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಂಯುಕ್ತ ಸಂಯೋಜನೆಯಲ್ಲಿ ಪರಿಸರ ಸ್ನೇಹಿ ಸ್ವಚ್ಛತಾ ಅಭಿಯಾನ 107ನೇ ಭಾನುವಾರದ ಕಾರ್ಯಕ್ರಮದಲ್ಲಿ ಪಾಂಡೇಶ್ವರ ಗ್ರಾಮಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸನಿಹ ಪ್ಲಾಸ್ಟಿಕ್ ಮುಕ್ತಗೊಳಿಸು ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ಕಾಲಘಟ್ಟದಲ್ಲಿ ಸ್ವಚ್ಛತೆ ಎಲ್ಲಿ ಆರಂಭಗೊಳ್ಳಬೇಕಂದರೆ ಪ್ರಾಥಮಿಕ ಹಂತದಲ್ಲಿ ಜನಸಾಮಾನ್ಯರಿಗೆ ಅರಿವು ಮೂಡಿಸಿದಾಗ ಕಂಡ ಕಂಡಲ್ಲಿ ಎಸೆಯುವ ಮನಸ್ಥಿತಿ ತಗ್ಗಲಿದೆ .ಪ್ರಸ್ತುತ ನೋಡಿದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಕೊಂಪೆ ನಮ್ಮ ಪರಿಸರವನ್ನು ಆವರಿಸಿಕೊಂಡಿದೆ, ಇದರಿಂದ ವಿವಿಧ ರೀತಿಯ ಸಾಂಕ್ರಾಮಿಕ ಖಾಯಿಲೆಗಳು ಸೃಷ್ಠಿಯಾಗುತ್ತಿದೆ. ಪರಿಸರವನ್ನು ನಾವು ಆರಾಧಿಸಿದರೆ ಅವುಗಳು ನಮ್ಮನ್ನು ಹಾಗೂ ನಮ್ಮ ಮುಂದಿನ ಪೀಳಿಗೆಯನ್ನು ಕಾಯುತ್ತವೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಂಘಸಂಸ್ಥೆಗಳ ವಿವಿಧ ಬಗ್ಗೆಯ ಕಾರ್ಯಕ್ರಮಗಳು ಸಹಕಾರಿ ಈ ನಿಟ್ಟಿನಲ್ಲಿ ಕೋಟ ಭಾಗದ ಪಂಚವರ್ಣ ಯುವಕ ಮಂಡಲ ಹಾಗೂ ಅದರ ಮಿತ್ರಸಂಸ್ಥೆಗಳ ಕಾರ್ಯ ಶ್ಲಾಘನೀಯ, ಯಾವುದೇ ಕಾರ್ಯಕ್ರಮ ಆಯೋಜಿಸಿಕೊಂಡು ಬರುವುದು ಸುಲಭ ಆದರೆ ಅದನ್ನು ನಿರಂತವಾಗಿ ಕೊಂಡ್ಯೊಯುವುದು ಬಹುದೊಡ್ಡ ಸಾಧನೆಯಾಗಿದೆ ಇದಕ್ಕೆಲ್ಲ ನಮ್ಮ ಕಣ್ಮುಂದೆ ಇಂಥಹ ಸಂಘಟನೆಗಳೇ ಸಾಕ್ಷಿಯಾಗಿವೆ.ಪ್ಲಾಸ್ಟಿಕ್ ಅನ್ನು ಮಿತವಾಗಿ ಬಳಸಿ ಪರಿಸರವನ್ನು ಉಳಿಸಿ ಎಂಬ ಘೋಷವಾಕ್ಯ ನಮ್ಮೆಲ್ಲ ಕೇರಿಗಳಲ್ಲಿಮೊಳಗಲಿ ಎಂದು ಆಶಿಸಿದರು.

ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯ ಕಾರ್ಯಕ್ರಮದ ಮಾರ್ಗದರ್ಶಕ ಗುಂಡ್ಮಿ ರವೀಂದ್ರ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಪಟ್ಟಾಭಿರಾಮಚಂದ್ರ ಸೋಮಯಾಜಿ,ಗುಂಡ್ಮಿ ತಗ್ಗಿನಬೈಲು ಗುರಿಕಾರ ನಾರಾಯಣ ಪೂಜಾರಿ,ಕೋಟದ ಜನತಾ ಫಿಶ್ ಮಿಲ್ ಮ್ಯಾನೇಜರ್ ಶ್ರೀನಿವಾಸ್ ಕುಂದರ್, ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ,ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ,ಯಕ್ಷಸೌರಭ ಕಲಾರಂಗದ ಸತ್ಯನಾರಾಯಣ ಆಚಾರ್ಯ, ಪಂಚವರ್ಣ ಸಂಚಾಲಕ ಅಜಿತ್ ಆಚಾರ್ಯ, ಸಂಘಟನಾಕಾರ್ಯದರ್ಶಿ ಗಿರೀಶ್ ಆಚಾರ್ಯ ,ಜೊತೆಕಾರ್ಯದರ್ಶಿ ಸಂದೇಶ್ ಆಚಾರ್ಯ,ಭಾಸ್ಕರ್ ದೇವಾಡಿಗ,ಸುಧೀರ್ ಕೊಯ್ಕೂರ್,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ,ಹಂಗಾರಕಟ್ಟೆ ದೂಳಂಗಡಿ ಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಗಿಳಿಯಾರ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಂಚವರ್ಣ ದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ನಿರೂಪಿಸಿದರು.ಕಾರ್ಯಕ್ರಮಕ್ಕೆ ಸಾಲಿಗ್ರಾಮ ಪಟ್ಟಣಪಂಚಾಯತ್ ಸಹಕಾರ,ಗೀತಾನಂದ ಫೌಂಡೇಶನ್ ಸಹಕಾರ ನೀಡಿತ್ತು.

 
 
 
 
 
 
 
 
 
 
 

Leave a Reply