ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ ಉಡುಪಿ -ಮಣಿಪಾಲ ಘಟಕಕ್ಕೆ ಮರವಂತೆ ನಾಗರಾಜ ಹೆಬ್ಬಾರ್ ಸಾರಥ್ಯ

ಮಣಿಪಾಲ: ದೇಶದಾದ್ಯಂತ ಸುಮಾರು 50ಕ್ಕೂ ಅಧಿಕ ಘಟಕಗಳನ್ನು ಹೊಂದಿರುವ ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾದ ಉಡುಪಿ – ಮಣಿಪಾಲ ಘಟಕದ 2021-22 ನೇ ಸಾಲಿನ ಅಧ್ಯಕ್ಷರಾಗಿ ಉಡುಪಿಯ ಉದ್ಯಮಿ ಮರವಂತೆ ನಾಗರಾಜ ಹೆಬ್ಬಾರ್ ಅವಿರೋಧವಾಗಿ ಆಯ್ಕೆಯಾಗಿರುವರು.
ಅವರು ಉಡುಪಿಯ ಪ್ರಸಿದ್ಧ ಪ್ರವಾಸಿ ಸಂಸ್ಥೆ ಅಪ್ನಾ ಹಾಲಿಡೇಸ್‌ನ ಸ್ಥಾಪಕರು ಮತ್ತು ಸುಮಾರು 40ವರುಷಗಳಿಂದ “ಹೆಬ್ಬಾರ್ ಅಡ್ವಟೈಸರ್ಸ್” -ಪತ್ರಿಕಾ ಜಾಹಿರಾತು ಸಂಸ್ಥೆಯನ್ನು ನಡೆಸುತ್ತಿ ರುವರು.
ಅವರು ಉಡುಪಿ ಜಿಲ್ಲಾ ಟೂರ್ಸ್ & ಟ್ರಾವೆಲ್ಸ್ ಎಸೋಸಿಯೇಶನ್ ಅಧ್ಯಕ್ಷರಾಗಿ ಮತ್ತು ಪ್ರತಿಷ್ಟಿತ ಕರಾವಳಿ ಪ್ರವಾಸೋದ್ಯಮ ಸಂಘಟನೆ, ಉಡುಪಿ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಟಾನದ ಉಪಾಧ್ಯಕ್ಷರಾಗಿ ಕೂಡಾ ಸೇವೆ ಸಲ್ಲಿಸುತ್ತಿರುವರು.
ನಿಕಟಪೂರ್ವ ಅಧ್ಯಕ್ಷರಾಗಿ ತನುಜಾ ಮಾಬೆನ್, ಗೌರವ ಕಾರ್ಯದರ್ಶಿಯಾಗಿ ರಾಘವೇಂದ್ರ ಪ್ರಭು ಕರ್ವಾಲು, ಗೌರವ ಕೋಶಾಧಿಕಾರಿಯಾಗಿ ರಾಜೇಶ್ ಭಟ್ ಪಣಿಯಾಡಿ, ಉಪಾಧ್ಯಕ್ಷರಾಗಿ ಕೆ. ಕೃಷ್ಣರಾಜ ತಂತ್ರಿ, ಚಂದ್ರಕಾ೦ತ ಡಿ., ಜೊತೆ ಕಾರ್ಯದರ್ಶಿಗಳಾಗಿ ಮನೋಜ್ ಕಡಬ ಮತ್ತು ಗಿರೀಶ್ ತಂತ್ರಿ, ವಿಶೇಷ ಸಲಹೆಗಾರರಾಗಿ ಸುರೇಶ್ ವಿ. ಬೀಡು (ಆಡಳಿತ), ರವಿರಾಜ್ ಎಚ್.ಪಿ. (ಕಲೆ ಮತ್ತು ಸಂಸ್ಕೃತಿ), ಜನಾರ್ದನ ಕೊಡವೂರು (ಮಾಧ್ಯಮ) ಹಾಗೂ ಡಾ|| ಎಸ್. ಓ. ಅಂಚನ್ (ವೆಲ್‌ನೆಸ್) ಸರ್ವಾನುಮತದಿಂದ ಆಯ್ಕೆಯಾಗಿರುವರು. 
ಆಡಳಿತ ಮಂಡಳಿಯ ಸದಸ್ಯರಾಗಿ ಪೂರ್ಣಿಮಾ ಜನಾರ್ದನ್, ಜಯಶ್ರೀ ಭಂಡಾರಿ, ಸುಭಾಷಿತ್ ಕುಮಾರ್, ಜಗದೀಶ್ ಶೆಟ್ಟಿ, ಯು. ಸುಧೀರ್ ಕುಮಾರ್, ಶ್ರೀಧರ್ ಮಣಿಪಾಲ್, ಅಕ್ಷತಾ ಗಿರೀಶ್, ರೇಖಾ ಪೈ, ಚಂದ್ರಕಾ೦ತ್ ಯು. ಮತ್ತು ನರಸಿಂಹಮೂರ್ತಿಯವರನ್ನು ಆರಿಸಲಾಗಿದೆ ಎಂದು ಕಾರ್ಯದರ್ಶಿ ರಾಘವೇಂದ್ರ ಪ್ರಭು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.
 
 
 
 
 
 
 
 
 
 
 

Leave a Reply