ಕೆರೆಯಲ್ಲಿ ಮುಳುಗಿ ಫೋಟೋಗ್ರಾಫರ್ ಸಾವು

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಸಂಸದ ಬಿ ವೈ ರಾಘವೇಂದ್ರ ಅವರ ಫೋಟೋಗ್ರಾಫರ್ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಪ್ರಸನ್ನ ಭಟ್  ಮೃತ ವ್ಯಕ್ತಿ. ಇಂದು ಸಂಜೆ ಕಾರಿನಲ್ಲಿ ಸ್ನೇಹಿತರ ಜೊತೆ ಬಂದಿದ್ದ ಮೃತ ಪ್ರಸನ್ನ ಭಟ್, ಮಾವತ್ತೂರು‌ ಕೆರೆಯಲ್ಲಿ ಈಜಾಡಲು  ಹೋಗಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಕನಕಪುರ ಗಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ‌ಪರೀಕ್ಷೆಗೆ ದಯಾನಂದ ಸಾಗರ್ ಆಸ್ಪತ್ರೆಗೆ ರವಾನಿಸಿದ್ದಾರೆ.

 
 
 
 
 
 
 
 
 
 
 

Leave a Reply