ಕ್ರಾಂತಿಕಾರಿ ಸುಭಾಶ್ಚಂದ್ರ ಭೋಸ್ ರವರ ಆದರ್ಶಗಳನ್ನು ಬದುಕಿನಲ್ಲಿ ರೂಪಿಸಿಕೊಳ್ಳಿ –   ಶ್ರೀ ಟಿ.ಎನ್. ರಾಮಕೃಷ್ಣ

ಕ್ರಾಂತಿಕಾರಿ ಸ್ವಾತಂತ್ರ‍್ಯ ಹೋರಾಟಗಾರ, ರಾಷ್ಟ್ರೀಯವಾದಿ ನೇತಾಜಿ ಸುಭಾಶ್ಚಂದ್ರ ಭೋಸ್ರವರು ರಾಷ್ಟ್ರಕ್ಕಾಗಿ ಹೋರಾಡಿ ದೇಹತ್ಯಾಗ ಮಾಡಿದವರು. ದೇಶಕ್ಕಾಗಿ ಅವರ ತ್ಯಾಗ, ಹೋರಾಟ, ಛಲ ಇಂದಿನ ಯುವಪೀಳಿಗೆಗೆ ಆರ‍್ಶಪ್ರಾಯವಾಗಿದ್ದು, ಅವರ ಜೀವನ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು ರಾಷ್ಟ್ರಗೌರವ ಸಂರಕ್ಷಣಾ ಪರಿಷತ್, ಕರ್ನಾಟಕ ಸಮಿತಿಯ ಅಧ್ಯಕ್ಷ ಶ್ರೀ ಟಿ.ಎನ್. ರಾಮಕೃಷ್ಣರವರು ವಿದ್ಯಾರ್ಥಿಗಳಿಗೆ ಕರೆಯಿತ್ತರು.
ಪೂರ್ಣಪ್ರಜ್ಞ ಕಾಲೇಜು, ಉಡುಪಿಯ ಆಂತರಿಕ ಗುಣಮಟ್ಟ ಖಾತರಿ ಘಟಕದ ಸಹಯೋಗದೊಂದಿಗೆ ವಿಧ್ಯಾರ್ಥಿ  ಕ್ಷೇಮಪಾಲನಾ ಸಮಿತಿಯವರು ಆಜಾದ್ ಹಿಂದ್ಸರಕಾರದ 25ನೇ ವಾರ್ಷಿಕೋತ್ಸವ  ಹಾಗೂ ನೇತಾಜಿ ಸುಭಾಶ್ಚಂದ್ರ ಭೋಸರ 125ನೇ ಜನ್ಮಶತಾಬ್ಧಿ ಆಚರಣೆಯ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ“ ನೇತಾಜಿ ಸುಭಾಶ್ಚಂದ್ರ ಭೋಸ್ ರವರ ಜೀವನ ತತ್ವಗಳು” ಎನ್ನುವ ಉಪನ್ಯಾಸ ಕಾರ‍್ಯಕ್ರಮವನ್ನು ಆಯೋಜಿಸಿದ್ದು,
ಶ್ರೀಯುತ ಟಿ.ಎನ್.ರಾಮಕೃಷ್ಣರವರು ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲ  ಡಾ|ರಾಘವೇಂದ್ರ ಎ. ರವರು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹಾಗೂ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ| ರಮೇಶ್ ಟಿ.ಎಸ್. ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ ಡಾ| ವಿನಯ್ ಕುಮಾರ್, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಈ ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಕಾರ‍್ಯಕ್ರಮ ನಿರ್ವಹಿಸಿದರು. ಶ್ರೀಮತಿ ಸುಮಲತಾ ವಂದಿಸಿದರು.
 
 
 
 
 
 
 
 
 
 
 

Leave a Reply