SSLC ಆದವರಿಗೆ ಅಂಚೆ ಇಲಾಖೆಯಿಂದ 2357 ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ : ಅಂಚೆ ಇಲಾಖೆಯಲ್ಲಿ ಖಾಲಿ ಇರುವ 2357 ಗ್ರಾಮೀಣ‌ ಡಾಕ್‌ ಸೇವಕ್‌ (ಜಿಡಿಎಸ್) ಹುದ್ದೆಗಳನ್ನು ಭರ್ತಿ ಮಾಡಿ ಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

  • ಸದ್ಯ ಪಶ್ಚಿಮ ಬಂಗಾಳದ ಅಂಚೆ ವೃತ್ತದಲ್ಲಿ ಈ ಹುದ್ದೆಗಳು ಖಾಲಿ ಇವೆ. ಇದರ ಜತೆಗೆ ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ), ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಹುದ್ದೆ ಗಳಿಗೂ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆಗಳೇನು? 
* ಭಾರತದ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯಿಂದ ಗಣಿತ, ಸ್ಥಳೀಯ ಭಾಷೆ ಬಂಗಾಳಿ ಮತ್ತು ಇಂಗ್ಲಿಷ್‌ನಲ್ಲಿ 10ನೇ ತರಗತಿಯಲ್ಲಿ ಉತ್ತೀರ್ಣವಾಗಿರಬೇಕು. ಸ್ಥಳೀಯ ಭಾಷೆಯನ್ನು 10 ವರ್ಷಗಳೂ ಕಲಿತಿರಬೇಕು.

* ಅಭ್ಯರ್ಥಿಗಳು 18 ರಿಂದ 40 ವರ್ಷ ವಯಸ್ಸಿನವರಾಗಿರಬೇಕು.

* ಒಸಿ / ಒಬಿಸಿ / ಇಡಬ್ಲ್ಯೂಎಸ್ ಪುರುಷ / ಟ್ರಾನ್ಸ್-ಮೆನ್ ವಿಭಾಗಕ್ಕೆ ಅರ್ಜಿ ಶುಲ್ಕ 100 ರೂ, ಆದರೆ ಎಲ್ಲಾ ಮಹಿಳಾ / ಮಂಗಳಮುಖಿ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸ ಬೇಕಾಗಿಲ್ಲ ಎಂದು ಸೂಚಿಸಲಾಗಿದೆ.

ಕೊನೆಯ ದಿನ ಆಗಸ್ಟ್‌ 19.

ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಭರ್ತಿಗೆ https://appost.in/gdsonline/   ಕ್ಲಿಕ್ ಮಾಡಿ ನೋಡಬಹುದು.

 
 
 
 
 
 
 
 
 
 
 

Leave a Reply