ಮಗುವಿಗೆ ಕಿಡ್ನಿ, ಲಿವರ್, ಹೃದಯಗಳಲ್ಲಿ ತೊಂದರೆ- ಸಹಾಯ ಮಾಡುವಿರಾ

ಕಾಣದ ಕಾಯಿಲೆಗಳು ಬಡವನ ಮನೆಯ ಬಾಗಿಲನ್ನೇ ಹುಡುಹುಡುಕಿಕೊಂಡು ಬಂದು ಬಡಿಯುತ್ತವೆ. ಅದ್ಯಾವ ಮುನ್ಸೂಚನೆ ಕೊಡದೇ ದುರ್ವಾರ್ತೆ ಹಿಡಿದು ಬರುವ ಈ ಅಪರಿಚಿತ ನೆಂಟನಿಗೆ ಮನೆ ಬಡವನದು ಎನ್ನುವ ಕರುಣೆ ಕೂಡ ಇರುವುದಿಲ್ಲ..

ಹಾಗೆ ಕಾಯಿಲೆ ಎನ್ನುವ ನೆಂಟ ಬಂದು ಹೋದ ತರುವಾಯ ಈ ಬಡವನ ಬದುಕು ಮತ್ತಷ್ಟೂ ದುರ್ಭರ.! ಹಾರ್ದಳ್ಳಿ ಮಂಡಳ್ಳಿ ಗ್ರಾಮಪಂಚಾಯತಿಯ ಜಡ್ಡಿನಬೈಲಿನ ಮಹೇಶ್ ಪೂಜಾರಿ ಯವರದೂ ಕೂಡ ಬಡತನದ ಬದುಕು. ಅವರ ಹೆಂಡತಿಯ ಹೆಸರು ಶೋಭಾ. ಐದು ವರುಷದ ಹಿಂದೆ ಮಗು ಹುಟ್ಟಿತು ಎಂದು ಸಂಭ್ರಮಿಸುತ್ತಿರಬೇಕಾದರೆ ಅದಾಗಲೇ ಮಗುವಿಗೆ ಕಿಡ್ನಿ, ಲಿವರ್, ಹೃದಯಗಳಲ್ಲಿ ತೊಂದರೆ ಕಾಣಿಸಿತು.

ಇದ್ದ ಹಣ ಒಟ್ಟುಗೂಡಿಸಿ ಆಪರೇಷನ್ನು ಮಾಡಿಸಿ ಇನ್ನೇನು ಎಲ್ಲವೂ ಸರಿಯಾಯಿತು ಅನ್ನುವಷ್ಟರಲ್ಲಿ ಬದುಕು ಮತ್ತೊಂದು ಕಡೆಯಿಂದ ಜಾಡಿಸಿ ಒದೆಯಿತು. ಹೆಂಡತಿ ಶೋಭಾ ಅದೊಂದು ದಿವಸ ತಲೆಯೊಳಗೆ ನೋವು ಎಂದು ಟೆಸ್ಟ್ ಮಾಡಿಸಿದರೆ ಗಡ್ಡೆಯಾಗಿದೆ ಎಂದರು. ಅದಕ್ಕೂ ಕಾಡಿಬೇಡಿ ಆಪರೇಷನ್ ಮಾಡಿಸಲಾಯಿತು.

ಹೀಗೆ ಆಪರೇಷನ್ ಮುಗಿದು ಮನೆಗೆ ಬಂದು ವಾರವಾಗಿಲ್ಲ. ವಿಧಿ ಪುನಃ ತನ್ನ ಕುಹಕ ಬುದ್ದಿ ತೋರಿಸಿತು. ಮತ್ತೆ ಮಗ ಸಮೇತ್‌ನಿಗೆ ಉಸಿರಾಟದ ತೊಂದರೆ ಕಾಣಿಸಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪರೀಕ್ಷಿಸಿ ನೋಡಿದ ವೈದ್ಯರು ಹಾರ್ಟಿಗೆ ಕೂಡಲೆ ಆಪರೇಷನ್ ಆಗಬೇಕಿದೆ ಎಂದಿದ್ದಾರೆ. ಕೂಲಿ ಮಾಡಿ ಬದುಕು ಕಟ್ಟಿಕೊಳ್ಳಲು ಹೆಣಗುತ್ತಿದ್ದ ಈ ಮಹೇಶ್ ಪೂಜಾರ್ರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಎಲ್ಲಿಂದ ತರುವುದು ದುಡ್ಡು..?

ಗೆಳೆಯರೇ, ನಮಗೆ ಗೊತ್ತಿದೆ
ಕರೋನಾ ಹಲವರ ಬದುಕನ್ನು ಹಲವು ವಿಧದಲ್ಲಿ ಹೈರಾಣಾಗಿಸಿದೆ. ಹಿಂದೆಲ್ಲಾ ಇಂತಹ ಅಂತಃಕರಣದ ಕೈಂಕರ್ಯಕ್ಕೆ ಕೈಚಾಚಿದರೆ ಕೈಹಿಡಿಯುವ ಕೈಗಳೂ ಅನೇಕ ಇದ್ದವು.

ಇದೀಗ ಪರಿಸ್ಥಿತಿ ಬದಲಾಗಿದೆ, ಕಷ್ಟ ಎಲ್ಲ ಮನೆಯಲ್ಲೂ ಕಾಲುಚಾಚಿ ಕುಳಿತಿದೆ. ಆದರೂ ಬದುಕಲು ಹಲವು ವಿಧದ ಹೋರಾಟವನ್ನೇ ನಡೆಸುತ್ತಿರುವ ಈ ಪುಟ್ಟ ಕುಟುಂಬಕ್ಕೆ ನಾವು ನೀವೆಲ್ಲಾ ಕಿಂಚಿತ್ ನೆರವಾದರೂ ಆಗಬೇಕಿದೆ.

ಈ ಮನಮಿಡಿಯುವ ಸಂಕಷ್ಟದ ಕಥೆಗೆ ನಿಮ್ಮಿಂದೇನಾದರೂ ನೆರವು ಸಿಗಲಿ ಎನ್ನುವ ನಿರೀಕ್ಷೆಯೊಂದಿಗೆ ಕೆಳಗೆ ಮಹೇಶ್ ಪೂಜಾರಿಯವರ ಹೆಂಡತಿ ಶೋಭಾ ಅವರ ಅಕೌಂಟ್ ಡಿಟೈಲ್ಸ್‌ ಅನ್ನು ಹಾಕಲಾಗಿದೆ. ಮಾನವೀಯತೆಯ ಒರತೆ ಯಾವತ್ತಿಗೂ ಬತ್ತದೇ ಇರುವ ಈ ಜಗತ್ತಿನಲ್ಲೇ ಅಲ್ಲವಾ ನಾವುನೀವೆಲ್ಲಾ ಬದುಕುತ್ತಿರುವುದು.? – Team Abhimatha

ಮಹೇಶ್ ಪೂಜಾರಿಯವರ ಹೆಂಡತಿ ಶೋಭಾ ಅವರ ಬ್ಯಾಂಕ್ ಖಾತೆ
Bank account details: Name: Shobha
A/c No.01622200074345
IFSC:CNRB0010162
Canara Bank, Bidkalkatte Branch

 
 
 
 
 
 
 
 
 
 
 

Leave a Reply