ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಲಾಖೆಯಿಂದ ಸ್ಪೆಷಲ್ ಸ್ಟಾಂಪ್ ಕ್ಯಾನ್ಸಲೇಷನ್ ಸೇವೆ ಲಭ್ಯ~ಅಂಚೆ ಅಧೀಕ್ಷಕ ನವೀನ್ ಚಂದರ್

ವಿಶ್ವದೆಲ್ಲೆಡೆ ಜೂನ್ 21 ನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಪರಿಪೂರ್ಣ ಆರೋಗ್ಯಕ್ಕೆ ಪರಿಣಾಮಕಾರಿ ಯೋಗವನ್ನು ಜಗತ್ತಿಗೆ ಸಾರಿದ ಅಂತರಾಷ್ಟ್ರೀಯ ಯೋಗ ದಿನವನ್ನು ಭಾರತೀಯ ಅಂಚೆ ಇಲಾಖೆಯೂ ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡು ಬಂದಿದೆ. 
2015 ರ ಜೂನ್ 21 ರಂದು ಅಂತರಾಷ್ಟ್ರೀಯ ಯೋಗದಿನವನ್ನು ಘೋಷಿಸಿದ್ದು ಆ ದಿನ ಭಾರತೀಯ ಅಂಚೆ ಇಲಾಖೆ ಯೋಗದಿನವನ್ನು ಪ್ರತಿನಿಧಿಸುವ ಎರಡು ಅಂಚೆ ಚೀಟಿಗಳನ್ನು ಮತ್ತು ಅಂಚೆ ಚಿಕಣಿ‌ಹಾಳೆಗಳನ್ನು ಬಿಡುಗಡೆಗೊಳಿಸಿತ್ತು. 2016 ರಲ್ಲಿ ಸೂರ್ಯ ನಮಸ್ಕಾರದ ವಿವಿಧ ಭಂಗಿಗಳುಳ್ಳ ಅಂಚೆ ಚೀಟಿಗಳನ್ನು, ಅಂಚೆ ಚಿಕಣಿ ಹಾಳೆಗಳನ್ನು ಭಾರತೀಯ ಅಂಚೆ ಇಲಾಖೆ ಬಿಡುಗಡೆಗೊಳಿಸಿತ್ತು. 
ಈ ವರುಷ ಕೋವಿಡ್ 19ನ ಸಂದಿಗ್ಧ ಸಮಯದಲ್ಲಿ ಅಂತರಾಷ್ಟ್ರೀಯ ಯೋಗದಿನವನ್ನು ವಿಶಿಷ್ಠವಾಗಿ ಆಚರಿಸುವ ಇರಾದೆಯೊಂದಿಗೆ ಭಾರತೀಯ ಅಂಚೆ ಇಲಾಖೆ ವಿಶೇಷ ರೀತಿಯ ಕ್ಯಾನ್ಸಲೇಷನ್ ಸ್ಟಾಂಪ್  ( special Cancellation Stamp) (ಅಂಚೆ ಚೀಟಿ ರದ್ದತಿ ಮೊಹರು) ನ್ನು ಹೊರ ತರುತ್ತಿದೆ.​ 
 
ನಮ್ಮ ದೇಶದ ಸುಮಾರು 810 ಪ್ರಧಾನ ಅಂಚೆ ಕಚೇರಿಗಳಲ್ಲಿ ಈ ಸೇವೆ ಅಂತರಾಷ್ಟ್ರೀಯ ಯೋಗ ದಿನವಾದ ಜೂನ್ 21 ರಂದು ಲಭ್ಯವಿದೆ.​ ​ಉಡುಪಿ ಅಂಚೆ ವಿಭಾಗದ ಉಡುಪಿ ಪ್ರಧಾನ ಅಂಚೆ ಕಚೇರಿ,ಮಣಿಪಾಲ ಪ್ರಧಾನ ಅಂಚೆ ಕಚೇರಿ,​ ​ಕುಂದಾಪುರ ಪ್ರಧಾನ ಅಂಚೆ ಕಚೇರಿಯಲ್ಲಿ ಈ ಸ್ಪೆಷಲ್ ಸ್ಟಾಂಪ್ ಕ್ಯಾನ್ಸಲೇಷನ್ ಲಭ್ಯವಿದ್ದು ಈ ಸೇವೆಗೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ.
ಗ್ರಾಹಕರು ಇಲ್ಲವೇ ಅಂಚೆ ಚೀಟಿ ಸಂಗ್ರಹಕಾರರು ತರುವ ಕವರ್,​ ​ಕಾರ್ಡ್ ಮೇಲೆ ಅಂತರಾಷ್ಟ್ರೀಯ ಯೋಗ ದಿನದ ಚಿತ್ರ ವಿನ್ಯಾಸಗಳುಳ್ಳ ಸ್ಪೆಷಲ್ ಸ್ಟಾಂಪ್  ಕ್ಯಾನ್ಸಲೇಷನ್ ನ್ನು ಮುದ್ರಿಸಿ ಕೊಡಲಾಗುವುದು. 
 
ಆಸಕ್ತರು ಅಂಚೆ ಚೀಟಿ ಸಂಗ್ರಹಕಾರರಾಗಲು ವಿಪುಲ ಅವಕಾಶಗಳಿದ್ದುಕೇವಲ 400 ರೂಗಳನ್ನು ಪಾವತಿಸಿದಾಗ ಅದರಲ್ಲಿ ರೂ 200/- ನ್ನು ಠೇವಣಿಯಾಗಿರಿಸಿಕೊಂಡು ಮತ್ತುಳಿದ ಹಣಕ್ಕೆ ಹೊಸ ಹೊಸ ಅಂಚೆ ಚೀಟಿಗಳು ಯಾವುದೇ ಶುಲ್ಕವಿಲ್ಲದೆ ಮನೆ ಬಾಗಿಲಿಗೆ ಬರುವಂತಹ ಫಿಲಾಟಲಿ ಡೆಪಾಸಿಟ್ ಖಾತೆ ಯೋಜನೆಯೂ ಅಂಚೆ ಕಚೇರಿಯಲ್ಲಿದೆ.
ಈ ವರುಷ “ಮನೆಯಲ್ಲಿರಿ…​ ​ಯೋಗದೊಂದಿಗೆ ಇರಿ” ಎಂಬ ಘೋಷಣಾ‌ವಾಕ್ಯದೊಂದಿಗೆ ಅಂತರಾಷ್ಟ್ರೀಯ ಯೋಗದಿನವು ಆಚರಿಸಲ್ಪಡುತ್ತಿದೆ. 
 
ಆಸಕ್ತರು ಯೋಗ ದಿನವಾದ  21.06 .2021ರಂದು ಉಡುಪಿ, ಮಣಿಪಾಲ, ಕುಂದಾಪುರ ಪ್ರಧಾನ ಅಂಚೆ ಕಚೇರಿಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಸ್ಪೆಷಲ್ ಅಂಚೆ ಚೀಟಿ ಕ್ಯಾನ್ಸಲೇಷನ್ ( special stamp  cancellation) ,​ ​ವಿಶೇಷ ಅಂಚೆ ಚೀಟಿ ರದ್ದತಿಯನ್ನು ಪಡೆದುಕೊಳ್ಳಬಹುದೆಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.​​
 
 
 
 
 
 
 
 
 
 
 

Leave a Reply