ಗ್ಯಾಸ್ ಬೆಲೆ ಏರಿಕೆ : ಇದೇನಾ ಇವರ ಅಚ್ಚೆ ದಿನ್ – ವೆರೋನಿಕಾ ಕರ್ನೆಲಿಯೋ

ಉಡುಪಿ: ಚುನಾವಣಾ ವೇಳೆಯಲ್ಲಿ ಅಚ್ಚೇ ದಿನ್ ನೀಡುವುದಾಗಿ ನಾಲ್ಕು ದಿನಕ್ಕೊಮ್ಮೆ ಗ್ಯಾಸ್ ಸಿಲಿಂಡರ್ ಏರಿಸಿದ್ದಲ್ಲದೆ ಒಂದೇ ದಿನ ರೂ 50 ಬೆಲೆ ಏರಿಕೆ ಮಾಡಿರುವುದನ್ನು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೊ ಖಂಡಿಸಿದ್ದಾರೆ.

ಅಧಿಕಾರಕ್ಕೆ ಬಂದಾಗ ಗ್ಯಾಸ್ ಬೆಲೆಯನ್ನು ಇಳಿಸುತೆವೆಂದು ವಾಗ್ದಾನ ಮಾಡಿ ಇದೀಗ ನಿರಂತರವಾಗಿ ಬೆಲೆ ಏರಿಕೆ ಮಾಡಿರುವ ರೀತಿಯನ್ನು ಗಮನಿಸಿದರೆ ಇವರು ಜನರ ಪೂರಕವಾಗಿ ಆಡಳಿತ ನಡೆಸುತ್ತಿದ್ದಾರೆಯೇ ಅಥವಾ ಜನರನ್ನು ಲೂಟಿ ಮಾಡುತಿದ್ದಾರೆಯೇ ಎಂದು ಸಂಶಯ ಮೂಡುತ್ತಿದೆ.ಮೊತ್ತಮೊದಲು ಗ್ಯಾಸ್ ಸಿಲಿಂಡರ್ ನ ಸಬ್ಸಿಡಿಯನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿ ಅದೆಷ್ಟೋ ಗೊಂದಲ ನಡೆಯಿತು. ಸಾವಿರಾರು ಜನರಿಗೆ ಸಬ್ಸಿಡಿಯೆ ಸಿಗುತ್ತಿರಲಿಲ್ಲ. ತದನಂತರ ಎಲ್ಲರ ಸಬ್ಸಿಡಿಯನ್ನು ರದ್ದು ಮಾಡಲಾಯ್ತು. ಇದೀಗ ಮನಬಂದಂತೆ ಡೀಸೆಲ್, ಪೆಟ್ರೋಲ್ ಹಾಗೂ ಗ್ಯಾಸ್ ಮೇಲಿನ ದರ ಏರಿಕೆ ಜನಸಾಮಾನ್ಯರ ರಕ್ತ ಹೀರುವಂತೆ ಭಾಸವಾಗುತ್ತದೆ.

ಕೊರೋನಾದಿಂದ ಅತೀವ ಸಂಕಷ್ಟಕ್ಕೆ ಒಳಗಾಗಿರುವ ಜನತೆ, ಇನ್ನೂ ತನ್ನ ದಿನನಿತ್ಯದ ಖರ್ಚುವೆಚ್ಚಗಳನ್ನು ಸರಿದೂಗಿಸಲು ಕಷ್ಟಪಡುತ್ತಿರುವಾಗ ಪ್ರತಿದಿನ ಎಂಬಂತೆ ಏರುತ್ತಿರುವ ಬೆಲೆಯೇರಿಕೆ ಜನರನ್ನು ದಿಗ್ಭ್ರಮೆಗೊಳಿಸಿದೆ ಇದೇನಾ ಇವರ ಅಚ್ಚೆದಿನ್ ಎಂಬ ಸಂಶಯವೂ ಮೂಡುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply