ದಯವಿಟ್ಟು ಬಡವರನ್ನು ಬದುಕಲು ಬಿಡಿ – ಗೀತಾ ವಾಗ್ಳೆ

ಏಳು ವರ್ಷಗಳ ಹಿಂದೆ ಬಿಜೆಪಿ ನಾಯಕರು ಏನೆಲ್ಲಾ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಏರಿತೋ ಅಂದಿನಿಂದ ಇಂದಿನವರೆಗೂ ಆ ಆಶ್ವಾಸನೆಗಳನ್ನು ಗಾಳಿಗೆ ತೂರಿ ಅಧಿಕಾರದ ಕುರ್ಚಿಗೆ ಅಂಟಿಕೊಂಡು ಕುಳಿತಿದೆ .ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ  ಗೀತಾ ವಾಗ್ಳೆ  ಹೇಳಿದ್ದಾರೆ.

ಡಾ.ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಗ್ಯಾಸ್ ಸಿಲಿಂಡರ್ ದರ ಮುನ್ನೂರೈವತ್ತು ರೂಪಾಯಿ ಇದ್ದಾಗ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಹಾಗೂ ಇನ್ನಿತರರು ಸಿಲಿಂಡರ್ ನೊಂದಿಗೆ ಬೀದಿಗಿಳಿದು ದೊಡ್ಡ ಹೋರಾಟವನ್ನೇ ಮಾಡಿದ್ದರು.ಆದರೆ ಇದೀಗ ಗ್ಯಾಸ್ ಸಿಲಿಂಡರ್ ಬೆಲೆ ಮೂರುಪಟ್ಟು ಏರಿದ್ದರೂ ಸ್ಮೃತಿ ಇರಾನಿಯವರು ಯಾಕೆ ಸುಮ್ಮನಿದ್ದಾರೆ, ಯುಪಿಎ ಸರ್ಕಾರ ವಿದ್ದಾಗ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡವರು ಬದುಕುವುದೇ ದುಸ್ತರವಾಗಿದೆ.

ಬಿಜೆಪಿಯನ್ನುಅಧಿಕಾರಕ್ಕೆ ತಂದಲ್ಲಿ ಎಲ್ಲಾ ವಸ್ತುಗಳನ್ನು ಕಡಿಮೆ ದರದಲ್ಲಿ ಸಿಗುವಂತೆ ಮಾಡುತ್ತೇವೆ.ಬಡ ಮಹಿಳೆ ಹೊಗೆಯಿಂದ ಕಣ್ಣೀರು ಸುರಿಸುವ ಅಗತ್ಯವಿಲ್ಲ .ಪ್ರತೀ ಮನೆಯ ಮಹಿಳೆಯೂ ಗ್ಯಾಸ್ ಮೇಲೇ ಅಡುಗೆ ಮಾಡುವುದರ ಮೂಲಕ ಸಂತುಷ್ಟಳಾಗಿ ನಗುವಂತೆ ಮಾಡುವುದೇ ಬಿಜೆಪಿಯ ಸಂಕಲ್ಪ ಎಂದೆಲ್ಲಾ ದೊಡ್ಡ ದೊಡ್ಡ ಜಾಹೀರಾತು ಗಳ ಮೂಲಕ ಮತದಾರರನ್ನು ಮೂರ್ಖರನ್ನಾಗಿಸಿ ಅಧಿಕಾರಕ್ಕೇರಿದ ಬಿಜೆಪಿ ಮಾಡಿದ್ದೇನು, ಗ್ಯಾಸ್ ಸಿಲಿಂಡರ್ ಬೆಲೆಯನ್ನು ದಿನೇ ದಿನೇ ಎಂಬಂತೆ ಏರಿಸಿದ್ದು ಮಾತ್ರವಲ್ಲದೇ ಶ್ರೀಮಂತರು ಸಬ್ಸಿಡಿ ಬಿಟ್ಟು ಕೊಡಿ,ಬಡವರಿಗೆ ಒಂದು ಹೊತ್ತಿನ ಊಟ ಕೊಡಿ ಎನ್ನುವ ಆಕರ್ಷಕ ಜಾಹೀರಾತುಗಳಿಗೆ ಮರುಳಾಗಿ ಅದೆಷ್ಟೋ ಜನ ತಮಗೆ ಸಿಗುತ್ತಿದ್ದ ಗ್ಯಾಸ್ ಸಬ್ಸಿಡಿಯನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟರು.ಆದರೆ ಇದರಿಂದ ಬಡವರ‌ ಮನೆಯಲ್ಲಿ ಗ್ಯಾಸ್ ಉರಿಯಿತೇ ಎಂದವರು ಪ್ರಶ್ನಿಸಿದ್ದಾರೆ.

ಇದೀಗ ಮತ್ತೊಮ್ಮೆ ಗ್ಯಾಸ್ ಸಿಲಿಂಡರ್ ಬೆಲೆ ನಿಯಂತ್ರಣ ಮೀರಿ ಏರಿದೆ.ಇದು ಬಡವರ ಪರವಾಗಿ ಕೆಲಸ ಮಾಡುವ ಸರಕಾರವೇ? ಮೇರೆ ಮೀರಿದ ಬೆಲೆ ಏರಿಕೆಯಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ಬದುಕುವುದೇ ದುಸ್ತರವಾಗಿದೆ.ಬಿಜೆಪಿಯವರ ಅಚ್ಛೇ ದಿನ್ ಆಯೇಂಗೆ ಎನ್ನುವ ಘೋಷಣೆಯೊಂದಿಗೆ ಗರೀಬ್ ಲೋಗ್ ಮರೇಂಗೆ ಎನ್ನುವುದನ್ನು ಸೇರಿಸಿದರೆ ಇಂದಿನ ಹದಗೆಟ್ಟಿರುವ ಪರಿಸ್ಥಿತಿಯಲ್ಲಿ ಹೆಚ್ಚು ಸೂಕ್ತವಾದೀತು.ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರಕಾರಕ್ಕೆ ನನ್ನದೊಂದು ಮನವಿ, ಗ್ಯಾಸ್ ಸಿಲಿಂಡರ್ ಬೆಲೆಯನ್ನು ತಕ್ಷಣ ಇಳಿಸಿ.ದಯವಿಟ್ಟು ಬಡವರನ್ನು ಬದುಕಲು ಬಿಡಿ ಎಂದವರು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply