Janardhan Kodavoor/ Team KaravaliXpress
31 C
Udupi
Friday, February 26, 2021

ನಕ್ರೆ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ 

ಆದಿತ್ಯ ಟ್ರಸ್ಟ್ (ರಿ )ನಕ್ರೆ, ಕಾರ್ಕಳ ಇವರ ವತಿಯಿಂದ ಗ್ರಾಮ ಪಂಚಾಯತ್ ಕುಕ್ಕುಂದೂರು, ಪ್ರಾಥಮಿಕ ಅರೋಗ್ಯ ಕೇಂದ್ರ ಕುಕ್ಕುಂದೂರು, ಕೆಎಂಸಿ ಮಣಿಪಾಲ ಇವರ ಜಂಟಿ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಪ್ರಾಥಮಿಕ ಅರೋಗ್ಯ ಕೇಂದ್ರ  ನಕ್ರೆ ಇಲ್ಲಿ ನೆರವೇರಿತು. 
ಆದಿತ್ಯ ಟ್ರಸ್ಟಿನ ಅಧ್ಯಕ್ಷ ಮಂಜುನಾಥ್ ತೆಂಕಿಲ್ಲಾಯ ಇವರು ಪ್ರಸ್ತವಿಕವಾಗಿ ಟ್ರಸ್ಟ್ ದ್ಯೇಯ ಉದ್ದೇಶಗಳನ್ನು ಹೇಳಿದರು. ಗ್ರಾಮ ಪಂಚಾಯತ್ ಸದಸ್ಯ ಅಂತೋನಿ ಡಿಸೋಜಾ ಮತ್ತು ಪ್ರಾಣೇಶ್ ಶೆಟ್ಟಿ ಇವರು ಪಂಚಾಯತ್ ನಿಂದ ವಿಕಲ ಚೇತನರಿಗೆ ದೊರಕುವ ಸೌಲಭ್ಯ ಗಳನ್ನು ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು. 
ನೇತ್ರ ತಜ್ಞ ಡಾ. ನಿಖಿಲ್ ಇವರು ಕಣ್ಣಿನ ಆರೈಕೆ, ಚಿಕಿತ್ಸೆ ಗಳ ಬಗ್ಗೆ ಮಾಹಿತಿ ನೀಡಿದರು. ಡಾ. ಪ್ರತೀಕ್ಷಾ ಶೆಟ್ಟಿ ಇವರು ಆದಿತ್ಯ ಟ್ರಸ್ಟ್ ಇದರ ಕಾರ್ಯ ಯೋಜನೆಗಳ ಬಗ್ಗೆ ಶ್ಲಾಘೀಸಿದರು. ಚುಶನ್ ಚಾರಿಟೇಬಲ್ ಟ್ರಸ್ಟ್ (ರಿ )ಇದರ ಆಡಳಿತಧಿಕಾರಿ  ಅಭಿಗೆಲ್ ಶಲ್ಡನ್ ಅಂಚನ್ ಇವರನ್ನು ಸನ್ಮಾನಿಸಲಾಯಿತು. ವಿಕಲ ಚೇತನ ಫಲನುಭವಿಗೆ ಆರ್ಥಿಕಸಹಾಯ ನೀಡಲಾಯಿತು. ರಮೇಶ್ ಇವರು ಕಾರ್ಯಕ್ರಮ ನಿರ್ವಹಿಸಿದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಕಿದಿಯೂರು ಹೋಟೆಲ್ ನಲ್ಲಿರುವ  ಶ್ರೀ ನಾಗದೇವರ ಸನ್ನಿಧಾನದಲ್ಲಿ 34 ನೇ ವಾರ್ಷಿಕ ಮಹಾಪೂಜೆ 

ಉಡುಪಿ:  ಕಿದಿಯೂರು ಹೋಟೆಲ್ ನಲ್ಲಿರುವ  ಶ್ರೀ ನಾಗದೇವರ ಸನ್ನಿಧಾನದಲ್ಲಿ 34 ನೇ ವಾರ್ಷಿಕ ಮಹಾಪೂಜೆ  ಶುಕ್ರವಾರ ವಿದ್ವಾನ್ ಕಬಿಯಾಡಿ​ ​ಜಯರಾಮ ​ಆಚಾರ್ಯ  ಮಾರ್ಗ ದರ್ಶನದಲ್ಲಿ  ಆಶ್ಲೇಷಾಬಲಿ , ನವಕ ಕಲಶ, ಪ್ರಧಾನ ಹೋಮ...

ಭಾರತೀಯ ಚಾರ್ಟರ್ಡ್ ಅಕೌಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಉಡುಪಿ ಶಾಖೆಗೆ ಸಿಎ. ಕವಿತ ಎಮ್ ಪೈ ಟಿ ನೂತನ  ಅಧ್ಯಕ್ಷೆ 

ಉಡುಪಿ: ಭಾರತೀಯ ಚಾರ್ಟರ್ಡ್ ಅಕೌಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಉಡುಪಿ ಶಾಖೆಗೆ ಸಿಎ. ಕವಿತ ಎಮ್ ಪೈ ಟಿ ಅವರು 2021-22 ನೇ ಸಾಲಿಗೆ 20ನೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಈ...

ಶ್ರೀ ದುರ್ಗಾ ದೇವಸ್ಥಾನ ಕುಂಜೂರುವಿನಲ್ಲಿ ಮಾರ್ಚ್,1ರಂದು ತ್ರಿಕಾಲ ಪೂಜೆ 

 ದುರ್ಗಾ ಸೇವಾ ಸಮಿತಿ ಕುಂಜೂರು ಇವರು ಆಯೋಜಿಸುವ  ಶ್ರೀ ದುರ್ಗಾ ದೇವಸ್ಥಾನ ಕುಂಜೂರು ಇಲ್ಲಿ ಮಾರ್ಚ್,1 ರಂದು  ತ್ರಿಕಾಲ ಪೂಜೆ ಅನ್ನಸಂತರ್ಪಣೆ ಮುಂತಾದ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ದಿನದ ತ್ರಿಸಂಧ್ಯಾ ಕಾಲಗಳಲ್ಲಿ  ಶ್ರೀ ದುರ್ಗಾ ಮಾತೆಗೆ ವಿಸ್ತೃತ...

ಹೆಸರಾಂತ ಆಯುರ್ವೇದ ವೈದ್ಯ ಜಿ. ಶ್ರೀನಿವಾಸ ಆಚಾರ್ಯ ನಿಧನ

ಉಡುಪಿ: ಇಲ್ಲಿನ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ. ಜಿ. ಶ್ರೀನಿವಾಸ ಆಚಾರ್ಯ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ...
error: Content is protected !!