ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರ ಮಾಡಲ್ಲ~ ಕೋಡಿಮಠ ಶ್ರೀ

ನಾಳೆ ರಾಜ್ಯ ವಿಧಾನಸಭಾ ಚುನಾವಣೆಗೆ ಫಲಿತಾಂಶ ಘೋಷಣೆಯಾಗಲಿದೆ. ಇದಕ್ಕೂ ಮುನ್ನಾ ಮತದಾನೋತ್ತರ ಚುನಾವಣಾ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಬರಲಿದೆ ಎಂಬುದಾಗಿ ಹೇಳಿದ್ದವು. ಆದ್ರೇ ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರಲಿದೆ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂಬುದಾಗಿ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. 

ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯದ ರಾಜಕೀಯದಲ್ಲಿ ಎರಡು ಮೂರು ದೊಡ್ಡ ತಲೆಗಳು ಉರುಳುತ್ತವೆ. ರಾಜ್ಯ ರಾಜಕೀಯದಲ್ಲಿ ಅಸ್ಥಿರತೆ ಇರಲಿದೆ ಎಂಬುದಾಗಿ ಹೇಳಿದ್ದಾರೆ. ಅಂದಹಾಗೇ ಈ ಹಿಂದೆ ಫೆಬ್ರವರಿಯಲ್ಲಿ ಬಾಗಲಕೋಟೆಯ ಜಮಖಂಡಿಯಲ್ಲಿ ಮಾತನಾಡಿ, ಚುನಾವಣೆವರೆಗೂ ಪಕ್ಷಾಂತರಗಳು ಇರುತ್ತವೆ. ಆದ್ರೇ ಪಕ್ಷಗಳು ಕೂಡಿ ಹೋಗುವುದು ಕಷ್ಟ. ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದರು.

ಇದಷ್ಟೇ ಅಲ್ಲದೇ, ಸಿದ್ಧರಾಮಯ್ಯ ಸಿಎಂ ಆಗುತ್ತಾರ ಎಂಬುದಾಗಿ ಮಾಧ್ಯಮದವರು ಕೇಳಿದಂತ ಪ್ರಶ್ನೆಗೆ ಚುನಾವಣೆ bವರೆಗೂ ಏನೂ ಹೇಳುವುದಿಲ್ಲ ಎಂದು ತಿಳಿಸಿದ್ದರು. ಇದೀಗ ಎಕ್ಸಿಟ್ ಪೋಲ್ ಬಗ್ಗೆ ರಾಜ್ಯದಲ್ಲಿ ಬಿಸಿ ಬಿಸಿ ಚರ್ಚೆ ಯಾಗುತ್ತಿದೆ. ಅತಂತ್ರದ ಬಗ್ಗೆ ತಂತ್ರಗಾರಿಕೆಯಲ್ಲಿ ರಾಜಕೀಯ ನಾಯಕರು ತೊಡಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ರಣತಂತ್ರ ರೂಪಿಸುತ್ತಿದ್ದಾರೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ. ಸಮ್ಮಿಶ್ರ ಸರ್ಕಾರ ಅಧಿಕಾರ ಮಾಡಲ್ಲ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

 
 
 
 
 
 
 
 
 
 
 

Leave a Reply