ಠಾಣಾಧಿಕಾರಿ ಕುರ್ಚಿಯಲ್ಲಿ ಕುಳಿತು ಇಮ್ರಾನ್​ ಮದ್ಯಪಾನ

ಪೊಲೀಸ್​ ಠಾಣೆಯೊಳಗೆ ಕುಳಿತು ವ್ಯಕ್ತಿ ಒಬ್ಬ ಮದ್ಯಪಾನ ಮಾಡುತ್ತಿರುವ ಘಟನೆ ಉತ್ತರಪ್ರದೇಶದ ಸಹರಾನ್​ಪುರದಲ್ಲಿ ನಡೆದಿದೆ. ಆರೋಪಿ ಮದ್ಯಪಾನ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ನೆಟ್ಟಿ್ಗರು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ.
ಠಾಣಾಧಿಕಾರಿ ಕುರ್ಚಿಯಲ್ಲಿ ಕುಳಿತು ಕೃತ್ಯ: ಸಹರಾನ್​ಪುರದ ಖಾತಾ ಖೇರಿ ಪೊಲೀಸ್​ ಠಾಣೆಯಲ್ಲಿ ಘಟನೆ ನಡೆದಿದ್ದು ಇದೆ ಸಂಬಂಧ ಆರೋಪಿ ಇಮ್ರಾನ್​ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ

ಬಂಧಿತ ಆರೋಪಿ ಇಮ್ರಾನ್​ ಠಾಣಾಧಿಕಾರಿ ಕುರ್ಚಿಯಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿರುವುದು ಸದ್ಯ ವೈರಲ್​ ಆಗಿರುವ ಫೋಟೋದಲ್ಲಿ ಕಂಡು ಬರುತ್ತದೆ.

 

 
 
 
 
 
 
 
 
 
 
 

Leave a Reply