ಜಿಲ್ಲಾ ಬಿಜೆಪಿಯಿಂದ‌ ‘ಸಶಕ್ತ ಬೂತ್ – ಸದೃಢ ಭಾರತ’ ಅಭಿಯಾನದಡಿ ‘ಅಧ್ಯಯನ ಹಾಗೂ ಪರಿಶೀಲನ ಪತ್ರಕ’ ಡಿಜಿಟಲೀಕರಣ ಕಾರ್ಯಾಗಾರ

ಉಡುಪಿ ಜಿಲ್ಲಾ ಬಿಜೆಪಿಯಿಂದ ‘ಸಶಕ್ತ ಬೂತ್ – ಸದೃಢ ಭಾರತ’ ಅಭಿಯಾನದಡಿ ‘ಅಧ್ಯಯನ ಹಾಗೂ ಪರಿಶೀಲನ ಪತ್ರಕ’ದ ಡಿಜಿಟಲೀಕರಣದ ಬಗ್ಗೆ ಮಾಹಿತಿ ಕಾರ್ಯಾಗಾರವು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಶುಕ್ರವಾರ ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ‌‌ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಪಕ್ಷದ ಸಂಘಟನಾತ್ಮಕ ಕೆಲಸ ಕಾರ್ಯಗಳನ್ನು ಅತ್ಯಂತ ಶೃದ್ಧೆ ಮತ್ತು ಬದ್ಧತೆಯಿಂದ ನಿಭಾಯಿಸುವ ಸಶಕ್ತ ಕಾರ್ಯ ತಂಡಗಳು ಜಿಲ್ಲೆ, ಮಂಡಲ ಹಾಗೂ ವಿವಿಧ ಘಟಕಗಳ ಹಂತಗಳಲ್ಲಿವೆ. ಈ ನಿಟ್ಟಿನಲ್ಲಿ ‘ಸಶಕ್ತ ಬೂತ್ – ಸದೃಢ ಭಾರತ’ ಅಭಿಯಾನದಡಿ ಬಾಕಿ ಇರುವ ಕೆಲವೊಂದು ಬೂತ್ ಗಳ ಅಧ್ಯಯನ ಹಾಗೂ ಪರಿಶೀಲನ ಪತ್ರಕವನ್ನು ಅಗತ್ಯ ಮಾಹಿತಿಯೊಂದಿಗೆ ಶೀಘ್ರವಾಗಿ ಪೂರ್ತಿಗೊಳಿಸಿ, ರಾಜ್ಯ ತಂಡ ನೀಡಿರುವ ಉಪಯುಕ್ತ ಮಾರ್ಗದರ್ಶನದೊಂದಿಗೆ ಸಮಗ್ರ ಮಾಹಿತಿಯ ಡಿಜಿಟಲೀಕರಣ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಬೂತ್ ಸಶಸ್ತೀಕರಣ ಅಭಿಯಾನದ ಜಿಲ್ಲಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಅಭಿಯಾನದ ಅಧ್ಯಯನ ಹಾಗೂ ಪರಿಶೀಲನ ಪತ್ರಕದ ಡಿಜಿಟಲೀಕರವು ಗರಿಷ್ಠ ಪ್ರಮಾಣದಲ್ಲಿ ಪ್ರಗತಿಯಲ್ಲಿದೆ. ಜಿಲ್ಲಾ ಮತ್ತು ಮಂಡಲವಾರು ತಂಡಗಳು ಜಿಲ್ಲಾ ವ್ಯಾಪ್ತಿಯ ಎಲ್ಲಾ 1,111 ಬೂತ್ ಗಳ ಸಮಗ್ರ ಮಾಹಿತಿಯ ಡಿಜಿಟಲೀಕರಣ ಹಾಗೂ ಪರಿಷ್ಕರಣೆಗೆ ಹೆಚ್ಚಿನ ಒತ್ತು‌ ನೀಡಿ ಶೀಘ್ರವಾಗಿ ಜಿಲ್ಲಾ ಬಿಜೆಪಿ ‘ಪರಿಪೂರ್ಣ ಬೂತ್ ಡಿಜಿಟಲೀಕೃತ ಜಿಲ್ಲೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತೆ ತೊಡಗಿಸಿಕೊಳ್ಳಬೇಕು ಎಂದರು.

‘ಸಶಕ್ತ ಬೂತ್ – ಸದೃಢ ಭಾರತ’ ಅಭಿಯಾನದ ‘ಅಧ್ಯಯನ ಹಾಗೂ ಪರಿಶೀಲನ’ ರಾಜ್ಯ ತಂಡದ ಪ್ರಮುಖ್ ಮಂಜುನಾಥ್ ಮಾಹಿತಿಯ ಡಿಜಿಟಲೀಕರಣ, ಪರಿಷ್ಕರಣೆ ಹಾಗೂ ಡಿಜಿಟಲ್ ಪುಸ್ತಕದ ಬಗ್ಗೆ ವಿಸ್ತ್ರತ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ಪದಾಧಿಕಾರಿಗಳು, ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಅಭಿಯಾನದ ಜಿಲ್ಲಾ ಮತ್ತು ಮಂಡಲಗಳ ತಂಡದ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply