ಕೋವಿಡ್ 19 ನಿಂದ ಸರಕಾರಿ ಅರೋಗ್ಯ ಸಂಸ್ಥೆಗಳ ಮೇಲೆ ಹೆಚ್ಚಿನ ಜವಾಬ್ದಾರಿ: ಡಾ. ವಾಸುದೇವ್ ಉಪಾಧ್ಯ.

ಕಳೆದ ವರ್ಷ ಜಗತ್ತಿಗೆ ಅನಿರೀಕ್ಷಿತವಾದ ಕರೋನಾ ಸಾಂಕ್ರಾಮಿಕ ಸೋಂಕಿನ ಪರಿಣಾಮದಿಂದ ಭಾರತದಲ್ಲಿ ಸರಕಾರಿ ಆರೋಗ್ಯ ಸಂಸ್ಥೆಗಳಾದ ಆಸ್ಪತ್ರೆಗಳು, ಪ್ರಾಥಮಿಕ ಅರೋಗ್ಯ ಕೇಂದ್ರಗಳಿಗೆ ಹೆಚ್ಚಿನ ಜವಾಬ್ದಾರಿ ಬಂದಿದ್ದು ಸರಕಾರಿ ಮತ್ತು ಸಾರ್ವಜನಿಕ ವಲಯದಲ್ಲಿ ಅವುಗಳ ಸ್ಥಿತಿಗತಿಗಳ ಬಗ್ಗೆ ಗಮನ ಸೆಳೆಯುವಂತಾಗಿದೆ ಮತ್ತು ವ್ಯಾಪಕವಾಗಿ ಸೌಲಭ್ಯತೆಗಳು ಹರಿದು ಬರಲು ಆರಂಭವಾಗಿದೆ ಎಂದು ಉಡುಪಿ ತಾಲೂಕು ವೈದ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯ ಅವರು ಅಭಿಮತ ವ್ಯಕ್ತ ಪಡಿಸಿದರು.ಆದರೆ ಇದು ಕೇವಲ ಆರಂಭ ಮಾತ್ರ ಆಗಿದ್ದು ಖಾಸಗಿ ಆಸ್ಪತ್ರೆಗಳ ಗುಣಮಟ್ಟದಲ್ಲಿ ಅರೋಗ್ಯ ಸೇವೆ ನೀಡಲು ಸರಕಾರಿ ವಲಯದಲ್ಲಿ  ಸಾಕಷ್ಟು ಸುಧಾರಣೆ ಇನ್ನೂ ಆಗ ಬೇಕಿದೆ ಎಂದು ಅವರು ಹೇಳಿದರು.

ಅವರು ಪ್ರದಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಯಶಸ್ವೀ 7 ವರ್ಷ ಪೂರ್ಣ ಗೊಳಿಸಿದ ಹಿನ್ನೆಲೆಯಲ್ಲಿ ಭಾನುವಾರ ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆ ಮತ್ತು ಉಡುಪಿ ನಗರ ಆಶ್ರಯದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಹಾಗು ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿಆಯೋಜಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ದಾವೂದ್ ಅಬೂಬಕರ್ ರವರು ಕೆಮ್ಮಣ್ಣು ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಆಮ್ಲಜನಕ ಜಾಡಿಯನ್ನು ಅದರ ಉಪಕರಣಗಳ ಸಹಿತ ಹಸ್ತಾಂತರಿಸಿದಾಗ ಅದನ್ನು ಸ್ವೀಕರಿಸಿ ಮಾತನಾಡಿದರು..  

ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರೀಮಾ ಲವೀನಾ, ನಗರಸಭಾ ಸದಸ್ಯರಾದ ಪ್ರಭಾಕರ್ ಪೂಜಾರಿ, ಬಾಲಕೃಷ್ಣ ಶೆಟ್ಟಿ, ಪಂಚಾಯತ್ ಅಧ್ಯಕ್ಷರುಗಳಾದ ಶ್ರೀಮತಿ ಗಾಯತ್ರಿ ಸುರೇಶ್ ತೆಂಕನಿಡಿಯೂರು, ಪ್ರಭಾಕರ್ ತಿಂಗಳಾಯ ಬಡಾನಿಡಿಯೂರು, 

ಕೃಷ್ಣ ದೇವಾಡಿಗ ಕಲ್ಯಾಣಪುರ, ಸ್ಥಳೀಯ ಪಂಚಾಯತ್ ಸದಸ್ಯರಾದ ಸಂದ್ಯಾ, ಪ್ರಶಾಂತ್, ಪುರಂದರ್, ಮಾಜಿ ಪಂಚಾಯತ್ ಅಧ್ಯಕ್ಷ ವೆಂಕಟೇಶ್ ಕುಂದರ್, ಪಂಚಾಯತ್ ಸದಸ್ಯ, ಇರ್ಫಾನ್ ನೇಜಾರ್, ಮಿತ್ರ ಸ್ಕೂಲ್ ಆಫ್  ನರ್ಸಿಂಗ್ ನ ಪ್ರಾಂಶುಪಾಲೆ ನಿಶಾ ಪ್ರಶಾಂತ್  ಹಾಜರಿದ್ದರು.  ನಗರ ಬಿಜೆಪಿ ಪ್ರದಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ಕಾರ್ಯಕ್ರಮ ಸಂಯೋಜಿಸಿದರು.

 
 
 
 
 
 
 
 
 
 
 

Leave a Reply