ಸರಳ ಸಮಾರಂಭದಲ್ಲಿ ತನ್ನ ಭಾವಿ ಪತ್ನಿಯನ್ನು ವರಿಸಿದ ಬ್ರಿಟನ್ ಪ್ರಧಾನಿ

ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ವೆಸ್ಟ್ ಮಿನಿಸ್ಟರ್ ನ ಕ್ಯಾಥೆಡ್ರಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ತಮ್ಮ ಭಾವಿ ಪತ್ನಿ ಕ್ಯಾರಿ ಸೈಮಂಡ್ಸ್ ರನ್ನು ವರಿಸಿದರು.

ಕೇಂದ್ರ ಲಂಡನ್ ನ ರೋಮನ್ ಕ್ಯಾಥೊಲಿಕ್ ಕ್ಯಾಥೆಡ್ರಲ್ ನಲ್ಲಿ ನಡೆದ ಸಮಾರಂಭಕ್ಕೆ ಕೊನೆಯ ಕ್ಷಣದಲ್ಲಿ ಅತಿಥಿಗಳನ್ನು ಆಹ್ವಾನಿಸಲಾಗಿತ್ತು ಹಾಗೂ ಮುಂಚಿತವಾಗಿಯೇ ಪ್ರಕಟಿಸಿರಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ, ಜಾನ್ಸನ್ ಕಚೇರಿಯ ಹಿರಿಯ ಅಧಿಕಾರಿಗಳಿಗೂ ಈ ವಿವಾಹ ಯೋಜನೆಯ ಬಗ್ಗೆ ಯಾವುದೇ ಸುಳಿವಿರಲಿಲ್ಲ ಎಂದು ತಿಳಿದುಬಂದಿದೆ.

ಅಧಿಕಾರದಲ್ಲಿದ್ದಾಗಲೇ ವಿವಾಹವಾದ ಎರಡನೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಗಿದ್ದು, ಕಳೆದ ಎರಡು ಶತಮಾನಗಳಲ್ಲಿ ಮೊದಲಿಗರಾಗಿದ್ದಾರೆ. ಇದಕ್ಕೂ ಮುನ್ನ 1822ರಲ್ಲಿ ರಾಬರ್ಟ್ ಜೆಂಕಿನ್ಸನ್ ಅಧಿಕಾರದಲ್ಲಿದ್ದಾಗಲೇ ವಿವಾಹವಾಗಿದ್ದರು.

ಪ್ರಧಾನಿ ಹಾಗೂ ಕುಮಾರಿ ಸೈಮಂಡ್ಸ್ ಶನಿವಾರ ಮಧ್ಯಾಹ್ನ ನಡೆದ ಸರಳ ಸಮಾರಂಭದಲ್ಲಿ ವಿವಾಹವಾದರು.ಮುಂದಿನ ಬೇಸಿಗೆಯಲ್ಲಿ ದಂಪತಿಗಳು ತಮ್ಮ ವಿವಾಹವನ್ನು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಂಭ್ರಮಿಸಲಿದ್ದಾರೆ ಎಂದು ಹೇಳಲಾಗಿದೆ.

ಕೊರೋನಾ ನಿರ್ಬಂಧಗಳಿಂದ ಇಂಗ್ಲೆಂಡ್ ನಲ್ಲಿ ನಡೆಯುವ ವಿವಾಹ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಜನರ ಮಿತಿಯನ್ನು 30ಕ್ಕೆ ನಿಗದಿಗೊಳಿಸಲಾಗಿದೆ.2019ರಲ್ಲಿ ಬೋರಿಸ್ ಜಾನ್ಸನ್ ಪ್ರಧಾನಿಯಾದಾಗಿನಿಂದ ಡೌನಿಂಗ್ ಸ್ಟ್ರೀಟ್ ನಲ್ಲಿ 56 ವರ್ಷದ ಬೋರಿಸ್ ಜಾನ್ಸನ್ ಹಾಗೂ 33 ವರ್ಷದ ಸೈಮಂಡ್ಸ್ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಬದುಕುತ್ತಿದ್ದರು.

 
 
 
 
 
 
 
 
 
 
 

Leave a Reply