ಮೊದಲ ಬಾರಿಗೆ ಪಕ್ಷದ ಚಿಹ್ನೆಯ​ ​ಮೇಲೆ ಚುನಾವಣೆ ಎದುರಿಸಿದ ಬಿಜೆಪಿಗೆ ಬಂಪರ್

ಬೆಳಗಾವಿ : ತೀವ್ರ​ ಕುತೂಹಲ ಕೆರಳಿಸಿದ್ದ 3 ಮಹಾನಗರ​ ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಶಕ್ತಿಯುತ ಪಕ್ಷವಾಗಿ ಹೊರಹೊಮ್ಮಿದೆ. ಬೆಳ​ಗಾವಿಯಲ್ಲಿ ಸ್ಪಷ್ಟ ಬಹುಮತ ಪಡೆದಿದ್ದರೆ,​ ಹುಬ್ಬಳ್ಳಿ- ಧಾರವಾಡದಲ್ಲಿ ಅತೀ ಹೆಚ್ಚು​ ಸ್ವಾನ, ಕಲಬುರಗಿಯಲ್ಲಿ “ಅಭೂತಪೂರ್ವ​ ಸಾಧನೆ’ ಮೂಲಕ ಅಧಿಕಾರದ ಹೆಬ್ಬಾಲಿಗೆ ಬಂದು ನಿಂತಿದೆ. 

ಕಾಂಗ್ರೆಸ್‌ ಭಾರೀ ಹಿನ್ನಡೆ​ ಅನುಭವಿಸಿದ್ದರೆ, ಜೆಡಿಎಸ್‌ “ಕಿಂಗ್‌ ಮೇಕರ್‌’​ ಪಟ್ಟಉಳಿಸಿಕೊಂಡಿದೆ.ಇದೇ ಮೊದಲ ಬಾರಿಗೆ ಪಕ್ಷದ ಚಿಹ್ನೆಯ​ ​ಮೇಲೆ ಬೆಳಗಾವಿಯಲ್ಲಿ ಚುನಾವಣೆ ಎದುರಿಸಿದ ಬಿಜೆಪಿ ನಿರೀಕ್ಷೆ ಮೀರಿ ಯಶಸ್ಸುಗಳಿ​ಸಿದೆ. ಕಾಂಗೆಸ್‌ ಹೊಂದಾಣಿಕೆ ಮತ್ತು ತಂತ್ರ​ಕಒರತೆ ಎಂಬಂತೆ ಬೆಳಗಾವಿ ಮತ್ತು​ ಹುಬ್ಬಳ್ಳಿ-ಧಾರವಾಡ ಪಾಲಿಕೆಗಳಲ್ಲಿ​ ಹಿನ್ನಡೆ ಅನುಭವಿಸಿದೆ. 

ಕಲಬುರಗಿಯಲ್ಲಿ​ ಕಳೆದ ಬಾರಿಗಿಂತ ನಾಲ್ಕು ಸ್ಥಾನ ಹೆಚ್ಚು​ ಗಳಿಸಿ ತೃಪ್ತಿ ಪಟ್ಟುಕೊಂಡಿದೆ. “ಜೆಡಿಎಸ್‌​ ಕಲಬುರಗಿಯಲ್ಲಿ 4 ಸ್ಥಾನ ಗಳಿಸಿ​ “ಕಿಂಗ್‌ ಮೇಕರ್‌’ ಆಗಿದ್ದರೆ, ಹುಬ್ಬಳ್ಳಿ ಧಾರವಾಡದಲ್ಲಿ 1 ಸ್ಥಾನದಲ್ಲಿ ಗೆಲುವು ಪಡೆದಿದೆ.

​​ಕಲಬುರಗಿಯಲ್ಲಿ ಅತಂತ್ರ ಪರಿಸ್ಥಿತಿ​ ನಿರ್ಮಾಣವಾಗಿದೆ. 55 ಸ್ಥಾನಗಳ ಪೈಕಿ​ ಕಾಂಗ್ರೆಸ್‌ 27, ಬಿಜೆಪಿ 23 ಮತ್ತು ಜೆಡಿಎಸ್‌​ 4 ಹಾಗೂ1 ಸ್ಥಾನ ಪಕ್ಷೇತರ ಅಭ್ಯರ್ಥಿಯ​ ಪಾಲಾಗಿವೆ. ಸರಳ ಬಹುಮತಕ್ಕೆ 32 ಸ್ಥಾನ​ ಅಗತ್ಯವಿದ್ದು. ಬಿಜೆಪಿಯು ಜೆಡಿಎಸ್‌​ -ಪಕ್ಷೇತರ ಸದಸ್ಯನ ಬೆಂಬಲದೊಂದಿಗೆ​ ಅಧಿಕಾರಕ್ಕೆ ಬರಲು ತಂತ್ರ ರೂಪಿಸಿದೆ.

ಮರಾಠಿ ಪ್ರಾಬಲ್ಯದ ಬೆಳಗಾವಿಯಲ್ಲಿ​ ಬಿಜೆಪಿ ಹೊಸ ಮನ್ವಂತರ ಸೃಷ್ಟಿಸಿದೆ. ಒಟ್ಟು​ 58 ವಾರ್ಡ್‌ಗಳ ಪೈಕಿ 55 “ವಾರ್ಡ್‌ಗಳಲ್ಲಿ​ ಸ್ಪರ್ಧಿಸಿದ್ದ ಬಿಜೆಪ 35 ವಾರ್ಡ್‌ಗಳಲ್ಲಿ​ ಗೆಲುವು ಸಾಧಿಸಿ ಸ್ಪಷ್ಟ ಬಹುಮತದೊಂದಿಗೆ​ ಅಧಿಕಾರ ಪಡೆದಿದೆ. 45 ವಾರ್ಡ್‌ಗಳಲ್ಲಿ​ ಸ್ಪರ್ಧಿಸಿದ್ದ​ ​ಕಾಂಗ್ರೆಸ್‌ 10 ಸ್ಥಾನಗಳಲ್ಲಿ ಜಯ ಗಳಿಸಿದ್ದರೆ, ಪಕ್ಷೇತರರು. 12 ಸ್ಥಾನಗಳಲ್ಲಿ​ ಆಯ್ಕೆಯಾಗಿದ್ದಾರೆ. ಕೇವಲ ಎರಡು ಸ್ಥಾ ಸ್ಥಾನ​ ಮಾತ, ಗೆಲ್ಲುವಮೂಲಕ ಎಂಇ ಇಎಸ್‌ ಅತ್ಯಂತ ಶೋಚನೀಯ ಸೋಲೊಪ್ಪಿಕೊಂಡಿದೆ.

ಹುಬ್ಬಳ್ಳಿ ಧಾರವಾಡದಲ್ಲಿ ಬಿಜೆಪಿ ಅತೀ​ ದೊಡ್ಡ “ಪಕ್ಷವಾಗಿ ಹೊರಹೊಮ್ಮಿದ್ದರೂ​ ಆತಂತ ಸ್ಜಿತಿ ನಿರ್ಮಾಣವಾಗಿದೆ.82 ವಾರ್ಡ್‌​ ಗಳ ಪೈಕಿ ಬಿಜೆಪಿ 39, ಕಾಂಗ್ರೆಸ್‌ 33,​ ಪಕ್ಷೇತರರು 6, ಎಐಎಂಐಎಂ 3 ಮತ್ತು​ ಜೆಡಿಎಸ್‌ ಒಂದು ಸ್ಥಾನ ಗಳಿಸಿವೆ. ಮ್ಯಾಜಿಕ್‌​ ಸಂಖ್ಯೆ 42 ಹೊಂದಾಣಿಕೆಗೆ ಬಿಜೆಪಿ ಕಸರತ್ತು ಡೆಸಿದ್ದು ಪಕ್ಷೇತರರ ಜತೆ ಅಧಿಕಾರ ಗದ್ದುಗೆ​ ಏರಲು ಸಿದ್ಧತೆ ನಡೆಸಿದೆ.

 
 
 
 
 
 
 
 
 
 
 

Leave a Reply