ಇಂತಹ ಸೋಲುಗಳನ್ನು ನಾನು ಬಹಳ ನೋಡಿದ್ದೇನೆ- ಅಣ್ಣಾಮಲೈ

ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಣ್ಣಾಮಲೈ ತಮಿಳುನಾಡು ಚುನಾವಣೆಯಲ್ಲಿ ಸೋತಿದ್ದಾರೆ.ಆದರೂ ಸೋಲು ಜೀವನದ ಒಂದು ಭಾಗ ಎಂದು ಉತ್ಸಾಹದ ಮಾತುಗಳನ್ನಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅಣ್ಣಾಮಲೈ, ಸೋಲುಗಳು ಜೀವನದ ಒಂದು ಭಾಗ. ಇಂತಹ ಸೋಲುಗಳನ್ನು ನಾನು ಬಹಳ ನೋಡಿದ್ದೇನೆ. ನಾನು ಗೆಲುವಿನ ಗುರಿ ಮುಟ್ಟಬೇಕಿತ್ತು. ಆದರೆ ಆಗಲಿಲ್ಲ. ಅರವಕುರಿಚ್ಚಿಯಲ್ಲಿ ಬಿಜೆಪಿ ಪರ ಮತ ಹಾಕಿದ 68 ಸಾವಿರಕ್ಕೂ ಅಧಿಕ ಜನರಿಗೆ ಧನ್ಯವಾದ ಎಂದಿದ್ದಾರೆ. ಇನ್ನು ಮುಂದೆ ಶ್ರಮದಿಂದ ಕೆಲಸ ಮಾಡಲು ಸೂಕ್ತ ಸಮಯ, ಬಿಜೆಪಿ ಕೆಲಸಗಳಿಗೆ ಸಂಪೂರ್ಣ ತೊಡಗಿಸಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

 
 
 
 
 
 
 
 
 
 
 

Leave a Reply