ನಿವೃತ್ತ ಪ್ರಾಂಶುಪಾಲರಾದ ಪ್ರೊ. ಎಂ.ಎಂ. ನಾಡಿಗ್ ರವರಿಗೆ ನುಡಿನಮನ

ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ನಿವೃತ್ತ ಪ್ರಾಂಶುಪಾಲರಾಗಿದ್ದ ಶ್ರೀ ಮಾಧವ ಮೂರ್ತಿ  ನಾಡಿಗ್ ರವರ ನಿಧನದ ಪ್ರಯುಕ್ತ ಶ್ರದ್ಧಾಂಜಲಿ ಸಭೆಯನ್ನು ನಡೆಸಿ ನುಡಿ ನಮನ ಸಲ್ಲಿಸಲಾಯಿತು. ಈ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ನಿರ್ಮಲ ಕುಮಾರಿಯವರು ಮೃತರು ಕಾಲೇಜಿಗೆ ಸಲ್ಲಿಸಿದ ಅವಿಶ್ರಾಂತ ಹಾಗೂ ಶ್ರದ್ದಾ ಪೂರ್ವಕ ಸೇವೆಯನ್ನು ನೆನೆದು ಈ ಕಾಲೇಜಿನ ಸರ್ವತೋಮುಖ  ಅಭಿವೃದ್ಧಿಗಾಗಿ ನಾಡಿಗ್ ರವರು ಸುಮಾರು  30  ವರ್ಷಗಳ ಕಾಲ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಗೈದರು. 
ಇವರ ಪರಿಶ್ರಮ ದಿಂದಾಗಿ ಕಾಲೇಜು ಉತ್ತಮ ದರ್ಜೆಯ ವಿದ್ಯಾರ್ಥಿನಿ ನಿಲಯವನ್ನು ಹೊಂದಲು ಸಾಧ್ಯವಾಯಿತು. ಕಾಲೇಜು ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿ  ಗುಣಮಟ್ಟದ ಕಾನೂನು ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿ ವಿದೇಶಗಳಿಂದಲೂ ವಿದ್ಯಾರ್ಥಿಗಳನ್ನು ಆಕರ್ಷಿಸಲು ಶಕ್ತವಾಯಿತು. 2007ನೆ ಇಸವಿಯಲ್ಲಿ ಕಾಲೇಜಿನಲ್ಲಿ ಸಂಭ್ರಮದಿಂದ ಆಚರಿಸಿದ ಸುವರ್ಣ ಮಹೋತ್ಸವದ ಪ್ರಮುಖ ರೂವಾರಿ ಆಗಿದ್ದು ರಾಷ್ಟಮಟ್ಟದ ಅಣಕು ನ್ಯಾಯಾಲಯದ ಸ್ಪರ್ಧೆಯ  ಯಶಸ್ವೀ  ಸೂತ್ರಧಾರರಾಗಿ ಶ್ರೀಯುತರ ಸಾಧನೆಯು ಅನನ್ಯ ಹಾಗೂ ಅನುಕರಣೀಯ ಎಂದರು. 
 ಮೃತರ ಪತ್ನಿ ಹಾಗೂ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ಭಗವಂತನು  ದಯ ಪಾಲಿಸಲಿ ಎಂದು ಪ್ರಾರ್ಥಿಸಿದರು. ಈ ಸಂತಾಪ ಸಭೆಯಲ್ಲಿ ಕೇರಳದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಜಸ್ಟಿಸ್ ಮುಷ್ಟಾಕ್ ಮೊಹಮ್ಮದ್, ನಿವೃತ್ತ ನ್ಯಾಯಾಧೀಶರಾದ ಜಸ್ಟಿಸ್ ಬಾಬು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೋ.ಡಾ. ಈಶ್ವರ್ ಭಟ್, ಅಲ್ಲಿಯ ಪ್ರೋ.ಚಿದಾನಂದ ಎಸ್. ಪಾಟೀಲ್,  ಉಡುಪಿಯ ವಕೀಲರಾದ ಶ್ರೀ ಮಾಧವಾಚಾರ್, ಗೀತಾ ಕೌಶಿಕ್, ಕೇರಳದ ವಕೀಲರಾದ ಸಾಜನ್ ಮನ್ನಾಲಿ, ರಾಯ್ ಚಾಕೋ, ತಮಿಳುನಾಡಿನ ಕಾರ್ತಿಕೇಯನ್ ,  ಸಾಮ್ ಜಪ ಸಿಂಗ್, ಜೆ. ವಿ ರಾಜ್,ನಿಕಟ ಪೂರ್ವ ಪ್ರಾಂಶು ಪಾಲರಾದ ಪ್ರೊ ಪ್ರಕಾಶ್ ಕಣಿವೆಯವರು ನಾಡಿಗ್ ನವರೊಡಗಿನ ತಮ್ಮ ಒಡನಾಟಗಳನ್ನು ಸ್ಮರಿಸಿದರು. 
ವಿದ್ಯಾರ್ಥಿಗಳು, ಬೋಧಕ ಹಾಗೂ ಭೋದಕೇತರ ಸಿಬ್ಬಂದಿಯವರು  ಎಲ್ಲರೂ ಈ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದು ಮೃತರ ಗೌರವಾರ್ಥ ಒಂದು ನಿಮಿಷಗಳ ಕಾಲ ಮೌನ ಆಚರಿಸ ಲಾಯ್ತು.
 
 
 
 
 
 
 
 
 
 
 

Leave a Reply