ವೈದ್ಯಕೀಯ ಉಪಕರಣಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದಲ್ಲಿ ಕ್ರಮ

ವೈದ್ಯಕೀಯ ಉಪಕರಣಗಳಾದ ಆಕ್ಸಿಮೀಟರ್, ಥರ್ಮಮೀಟರ್, ಪಿ.ಪಿ ಕೀಟ್, ವೆಂಟಿಲೇಟರ್, ಸಿ.ಪಿ.ಎ.ಪಿ, ಡಿವೈಸಸ್ ಒಳಗೊಂಡಂತೆ ಎಲ್ಲಾ ಪೊಟ್ಟಣಗಳ ಮೇಲೆ ಗರಿಷ್ಠ ಮಾರಾಟ ಬೆಲೆ (ಎಲ್ಲಾ ತೆರಿಗೆಗಳು ಸೇರಿ) ಹಾಗೂ ಇತರ ಘೋಷಣೆಗಳನ್ನು ಕಡ್ಡಾಯವಾಗಿ ನಮೂದಿಸಿರಬೇಕು. ನಮೂದಿಸಿದ ಗರಿಷ್ಠ ಮಾರಾಟ ಬೆಲೆ (ಎಲ್ಲಾ ತೆರಿಗೆಗಳು ಸೇರಿ) ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತಹ ಸಪ್ಲಾಯರ್, ಡಿಸ್ಟ್ರಿಬ್ಯೂಟರ್ ಮತ್ತು ಔಷಧಿ ಅಂಗಡಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.

ಗ್ರಾಹಕರು ಪೊಟ್ಟಣದ ಮೇಲೆ ನಮೂದಿಸಿದ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ಅಂಗಡಿಯವರು ತಮ್ಮಿಂದ ಪಡೆದುಕೊಂಡಲ್ಲಿ ತಾವು ಖಾಲಿ ಪೊಟ್ಟಣ ಮತ್ತು ಬಿಲ್ಲನ್ನು ಖಾಯ್ದಿರಿಸಿಕೊಂಡು ಅಂತಹ ಅಂಗಡಿಯವರ ವಿವರವನ್ನು ಸಹಾಯಕ ನಿಯಂತ್ರಕರು ಕಾನೂನು ಮಾಪನಶಾಸ್ತ್ರ ಇಲಾಖೆ ಉಡುಪಿ ಮೊಬೈಲ್ ಸಂಖ್ಯೆ 98451 54263 ಅಥವಾ ಈಮೇಲ್ ವಿಳಾಸ www.emapan.karnataka.gov.in ಗೆ ದೂರು ದಾಖಲಿಸುವಂತೆ ಜಿಲ್ಲಾ ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply