ಆಕರ್ಷಕ ಪೊಲೀಸ್ ಬ್ಯಾಂಡ್, ಪಂಜಿನ ಕವಾಯತು,ಪೊಲೀಸ್ ಶ್ವಾನ ಪ್ರದರ್ಶನ


ಕಾರ್ಕಳ : ಬೆಂಗಳೂರು ಹಾಗೂ ಮೈಸೂರಿಗೆ ಮತ್ತು ಟಿ.ವಿಗಳಲ್ಲಿ ನೋಡೊದಕಷ್ಟೆ ಸೀಮಿತವಾಗಿದ್ದ ಪೊಲೀಸ್ ಕವಾಯತು ಅನ್ನು ನಮ್ಮೂರಿನ ಜನ ಕಾರ್ಕಳದವರು ನೋಡಬೇಕೆಂಬ ಮಹದಾಸೆಯಿಂದ ಪೊಲೀಸ್ ಕವಾಯತು ಆಯೋಜಿಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ಹೇಳಿದರು.

ಅವರು ಬೈಲೂರಿನ ಪರಶುರಾಮ ಥೀಮ್‌ ಪಾರ್ಕ್‌ ಲೋಕಾರ್ಪಣೆಯ ಅಂಗವಾಗಿ ಪೊಲೀಸ್‌ ಇಲಾಖೆಯ ನೇತೃತ್ವದಲ್ಲಿ ಶ್ರೀ ಭುವನೇಂದ್ರ ಕಾಲೇಜು ಸಹಯೋಗದೊಂದಿಗೆ ಕಾರ್ಕಳದ ಸ್ವರಾಜ್‌ ಮೈದಾನದಲ್ಲಿ ಸೋಮವಾರ ರಾತ್ರಿ ನಡೆದ  ಆಕರ್ಷಕ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿದರು.


ಎಸ್ಪಿ ಹಾಕೆ ಅಕ್ಷಯ್ ಮಚೀಂದ್ರ ಮಾರ್ಗದರ್ಶನದಲ್ಲಿ  ಡಿವೈಎಸ್‌ಪಿ ವಿಜಯ್‌ ಪ್ರಸಾದ್‌, ನಗರ ಪೊಲೀಸ್‌ ಠಾಣೆ ಎಸ್‌ಐ ಪ್ರಸನ್ನ ಎಂ. ಎಸ್‌. ಉಸ್ತುವಾರಿಯಲ್ಲಿ  ಕವಾಯತು ಪ್ರದರ್ಶನಗೊಂಡಿತು. ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಎಂ , ರಾಜ್ಯ ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ‌, ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ., ಪುರಸಭೆ ಅಧ್ಯಕ್ಷೆ ಸುಮ ಕೇಶವ್, ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಎ ಕೋಟ್ಯಾನ್, ಪೆರ್ವಾಜೆ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಹರ್ಷೀಣಿ ಹೆಗ್ಡೆ, ಉಡುಪಿ. ಜಿ.ಪಂ.ಸಿಇಒ ಪ್ರಸನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪೊಲೀಸ್‌ ಶ್ವಾನ ಪ್ರದರ್ಶನ, ಉಡುಪಿ, ಮಂಗಳೂರು ಹಾಗೂ ಮೈಸೂರು ಜಿಲ್ಲಾ ಪೊಲೀಸ್‌ ತಂಡಗಳಿಂದ‌ 3 ಸೆಟ್‌ ಪೊಲೀಸ್ ಬ್ಯಾಂಡ್‌ ಪ್ರದರ್ಶನ, ಬಳಿಕ ಆಕರ್ಷಕ ಪಂಜಿನ ಕವಾಯತು ನಡೆಯಿತು. ಪೊಲೀಸ್‌ ತಂಡ ಗಳೊಂದಿಗೆ 150 ವಿದ್ಯಾರ್ಥಿಗಳು ಭಾಗವಹಿಸಿದ್ದರು‌.

 
 
 
 
 
 
 
 
 
 
 

Leave a Reply