ಯಶಸ್ಸಿನತ್ತ ಸಾಗಿ : ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ಜೂನ್ ೨೦: ಉಡುಪಿಯ ವಿದ್ಯೋದಯ ಟ್ರಸ್ಟ್ (ರಿ.)ನ ಅಧ್ಯಕ್ಷರೂ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಪದವಿ ಪೂರ್ವ ಶಿಕ್ಷಣವು ವೃತ್ತಿ ಶಿಕ್ಷಣದ ಪ್ರಾಥಮಿಕ ಹಂತವಾಗಿದ್ದು ಇಲ್ಲಿ ಗಳಿಸಿರುವ ಉತ್ತಮ ಫಲಿತಾಂಶ ನಿಮ್ಮ ಯಶಸ್ಸಿನ ಪಯಣದ ಮೊದಲ ಹೆಜ್ಜೆಯಾಗಿದೆ. ಯಶಸ್ಸಿನತ್ತ ಸಾಗಿ ಉತ್ತಮ ನಾಗರೀಕರಾಗಿರಿ ಎಂದು ಆಶೀರ್ವಚನ ನೀಡಿದರು. 2021-22 ರ ಸಾಲಿನಲ್ಲಿ ರಾಜ್ಯಮಟ್ಟದ ರ‍್ಯಾಂಕ್‌ಗಳನ್ನು ಪಡೆದು ಸಾಧನೆಗೈದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ ಶುಭ ಹಾರೈಸಿದರು.

ವಿಜ್ಞಾನದಲ್ಲಿ ಓಂಕಾರ್ ಪ್ರಭು ರಾಜ್ಯ ಮಟ್ಟದಲ್ಲಿ 3ನೇ ರ‍್ಯಾಂಕ್; ನಿಯತಾ 5 ನೇ ರ‍್ಯಾಂಕ್, ಲಕ್ಷ್ಮೀ ಪಿ. 7ನೇ ರ‍್ಯಾಂಕ್, ಪ್ರಣಮ್ಯ ಆಚಾರ್ಯ, ಕೆ.ಎಸ್. ನಿಹಾರಿಕಾ ನವ್ಯಾ ದಿನೇಶ್ ಶೆಟ್ಟಿ ೮ನೇ ರ‍್ಯಾಂಕ್, ಪಾವನ್ ಎ. ಶೆಟ್ಟಿ, ಈಶಾ ಕುಂದರ್, ಅಮರನಾಥ ಭಟ್ ಬಿ. ಮತ್ತು ಚಿನ್ಮಯ ಅಡಿಗ 9 ನೇ ರ‍್ಯಾಂಕ್ ಹಾಗೂ ಜಾಗೃತಿ ಚಂದ್ರಶೇಖರ್ ಮತ್ತು ಅವನಿ 10ನೇ ರ‍್ಯಾಂಕ್ ಪಡೆದಿದ್ದು ಅಲ್ಲದೇ ವಾಣಿಜ್ಯ ವಿಭಾಗದಲ್ಲಿ ಮೇಘನಾ ಮೆಂಡನ್ 6 ನೇ ರ‍್ಯಾಂಕ್, ಹಿರಲ್ ಸುಂದರ್ 7ನೇ ರ‍್ಯಾಂಕ್, ದರ್ಶನ್ ಆರ್. ಶೆಟ್ಟಿ ಮತ್ತು ಲರಿಸ್ಸಾ ಹೆಜಲ್ ನಜರೆತ್ ೮ನೇ ರ‍್ಯಾಂಕ್ ಮತ್ತು ವಿಥಿಕಾ ವಿ. ಶೆಟ್ಟಿ 10ನೇ ರ‍್ಯಾಂಕ್ ಅಲ್ಲದೇ 4 ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು (ಪಿ.ಸಿ.ಎಂ.ಇ. ಯಲ್ಲಿ) ಪಡೆದಿರುವ ಪ್ರಜ್ವಲ್ ಮತ್ತು ಶರಧಿ ಹೆಗಡೆ ಈ ವಿದ್ಯಾರ್ಥಿಗಳಿಗೆ ವಿದ್ಯೋದಯ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಶ್ರೀ ಎನ್. ನಾಗರಾಜ ಬಲ್ಲಾಳ್ ಮತ್ತು ಕಾಲೇಜು ಪ್ರಾಂಶುಪಾಲರಾದ ಶ್ರೀ ಸಂದೀಪ್ ಕುಮಾರ್ ಶುಭ ಹಾರೈಸಿದರು. ಪ್ರತಿ ಸಾಧಕ ವಿದ್ಯಾರ್ಥಿಗೂ ಅಭಿನಂದನಾಪೂರ್ವಕವಾಗಿ ಪ್ರಶಸ್ತಿ ಫಲಕ ಹಾಗೂ ತಲಾ ರೂ. 5000 ನಗದು ಪುರಸ್ಕಾರ ನೀಡಲಾಯ್ತು.

ಟ್ರಸ್ಟ್ನ ಕಾರ್ಯದರ್ಶಿ ಶ್ರೀ ಕೆ. ಗಣೇಶ್ ರಾವ್, ಜೊತೆ ಕಾರ್ಯದರ್ಶಿ ಶ್ರೀಮತಿ ರೂಪಾ ಬಲ್ಲಾಳ್, ಕೋಶಾಧಿಕಾರಿ ಶ್ರೀ ಯು. ಪದ್ಮರಾಜ್ ಆಚಾರ್ಯ ಉಪಸ್ಥಿತರಿದ್ದ ಈ ಕಾರ್ಯಕ್ರಮದಲ್ಲಿ ಶ್ರೀಮತಿ ರಂಜನಾ ಕೆ. ಸ್ವಾಗತಿಸಿ, ಶಿವಪ್ರಸಾದ ಭಟ್ ವಂದಿಸಿ, ಶ್ರೀಮತಿ ಅನುಪಮಾ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply