‘ವಿಜ್ಞಾನ, ಗಣಿತ ಮತ್ತು ಖಗೋಳ ಮಾದರಿಗಳು’ ಕೃತಿ ಅನಾವರಣ

‘ವಿಜ್ಞಾನ ಮತ್ತು ಗಣಿತ ವಿಷಯಗಳು ವಿದ್ಯಾರ್ಥಿಗಳ ಪಾಲಿಗೆ ಯಾವಾಗಲೂ ಕಬ್ಬಿಣದ ಕಡಲೆಯ ಇದ್ದಂತೆ. ಪ್ರಯೋಗಗಳು ಮಾದರಿಗಳನ್ನು ತಯಾರಿಸಿ ಅವುಗಳ ಮೂಲಕ ಬೋಧನೆಯನ್ನು ಮಾಡಿದರೆ ಅವರಿಗೆ ವಿಷಯಗಳು ಹೆಚ್ಚು ಬೇಗನೆ ಮನದಟ್ಟಾಗುವ ಸಾಧ್ಯತೆ ಇರುತ್ತದೆ. ಈ ಕೃತಿಯ ಕೃತಿಕಾರರು ಆ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಿದ್ದೇ ಅಲ್ಲದೆ ಆ ಬಗ್ಗೆ ತಾವು ಮಾಡಿದ ಕೆಲಸಗಳನ್ನು ಇಲ್ಲಿ ದಾಖಲೀಕರಿಸಿದ್ದು ಶ್ಲಾಘನೀಯ ‘ ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರೂ ಕುಂದಾಪುರದ ಪ್ರಸಿದ್ಧ ಮನೋವೈದ್ಯರು ಆಗಿರುವ ಡಾ.ಕೆ.ಎಸ್.ಕಾರಂತರು ಹೇಳಿದರು. ವಿಜ್ಞಾನ ಮತ್ತು ಗಣಿತ ಅಧ್ಯಾಪಕರಾಗಿದ್ದ ದಿನ.ಗಂಗಾಧರ ಐತಾಳರು ಬರೆದು ಅವರು ಪತ್ನಿ ಪಾರ್ವತಿ ಜಿ ಐತಾಳ್ ಸಂಪಾದಿಸಿ ಜನಪ್ರತಿನಿಧಿ ಪ್ರಕಾಶನವು ಪ್ರಕಟಿಸಿದ ‘ವಿಜ್ಞಾನ, ಗಣಿತ ಮತ್ತು ಖಗೋಳ ಮಾದರಿಗಳು’ ಎಂಬ ಕೃತಿಯನ್ನು ದೇವಸ್ಥಾನದ ಕಾರ್ತಿಕ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಅನಾವರಣಗೊಳಿಸಿ ಅವರು ಮಾತನಾಡಿದರು.

ಸದಾರಾಮ ಹೇರಳೆಯವರು ಕೃತಿಯನ್ನು ಸಭೆಗೆ ಪರಿಚಯಿಸಿದರು. ಪಾರ್ವತಿ ಐತಾಳ್ ಕೃತಿಯ ತಯಾರಿಯ ಹಿನ್ನೆಲೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಊರಿನ ಎಂಟು ಮಂದಿ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು. ಕೋಟೆಕಾರ್ ಶಂಕರಮಠದ ಸತ್ಯಶಂಕರ ಬೊಳ್ಳಾವ, ಕೂಟ ಮಹಾ ಜಗತ್ತಿನ ಕೇಂದ್ರಾಧ್ಯಕ್ಷ ಸತೀಶ ಹಂದೆ, ಸದಸ್ಯರಾದ ಶ್ರೀಧರ್ ರಾವ್ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಾಶಿವ ಐತಾಳ್ ಸ್ವಾಗತಿಸಿದರು . ದೇವಸ್ಥಾನದ ಧರ್ಮದರ್ಶಿ ಶ್ರೀಧರ್ ಕಾರಂತರು ವಂದಿಸಿದರು.

 
 
 
 
 
 
 
 
 
 
 

Leave a Reply