ಉದ್ಯಾವರ ಸೇತುವೆಯಲ್ಲಿ ಸ್ಕೂಟರ್ ಬಿಟ್ಟು ಯುವಕ ನಾಪತ್ತೆ; ನದಿಗೆ ಹಾರಿರುವ ಶಂಕೆ

ಉದ್ಯಾವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಸೇತುವೆಯಲ್ಲಿ ಸ್ಕೂಟರ್, ಚಪ್ಪಲಿ ಬಿಟ್ಟು ಯುವಕನೋರ್ವ ನಾಪತ್ತೆಯಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ನಾಪತ್ತೆಯಾದ ಯುವಕ ಉಡುಪಿಯ ಖಾಸಗಿ ಇಲೆಕ್ಟ್ರಾನಿಕ್ ಸಂಸ್ಥೆಯೊಂದರ ಉದ್ಯೋಗಿಯೆಂದು ತಿಳಿದುಬಂದಿದೆ. ಈತ ಸೇತುವೆಯ ಮೇಲೆ ಸ್ಕೂಟರ್ ನಿಲ್ಲಿಸಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.

ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸ್ಥಳೀಯ ಮೀನುಗಾರರ ಸಹಾಯದಿಂದ ದೋಣಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ.

 
 
 
 
 
 
 
 
 
 
 

Leave a Reply