ಯುವತಿಯರೊಂದಿಗೆ ಪಾರ್ಟಿಗೆಂದು ಹೋಗಿದ್ದ ಯುವಕರು ಬೆತ್ತಲಾಗಿ ಪಚೀತಿ

ಪಾರ್ಟಿಗೆಂದು ಯುವತಿಯರೊಂದಿಗೆ ಹೋಗಿದ್ದ ಯುವಕರೀರ್ವರು ಎಲ್ಲವನ್ನೂ ಕಳೆದುಕೊಂಡು ಕೊನೆಗೆ ಬಟ್ಟೆ ಯೂ ಇಲ್ಲದೆ ಬೆತ್ತಲಾಗಿ ಗೋಳಾಡಿದರು.

ಮೀರತ್: ಇತ್ತೀಚಿನ ದಿನಗಳಲ್ಲಿ ಬರೀ ಹುಡುಗಿಯರೇ ಮಾತ್ರ ಮೋಸ ಹೋಗುವುದಲ್ಲ. ಯುವಕರೂ ಹುಡುಗಿಯರಿಂದ ವಂಚನೆಗೊಳಗಾಗುವುದು ಹನಿಟ್ರ್ಯಾಪ್ ಗೊಳಗಾಗಿ ಕಷ್ಟ ಪಡುವ ಸುದ್ದಿಗಳನ್ನು ನಾವು ಕೇಳುತ್ತಲೇ ಇರುತ್ತೇವೆ.

ಇದೇ ರೀತಿಯ ಒಂದು ಪ್ರಕರಣ ಉತ್ತರ ಪ್ರದೇಶದ ಮೀರತ್‌ನ ಖರ್ಖೌಡಾ ಪ್ರದೇಶದಲ್ಲಿ ನಡೆದಿದೆ. ಇಲ್ಲಿ ಯುವತಿಯರು, ಇಬ್ಬರು ಯುವಕರನ್ನು ಮೋಸದ ಬಲೆಗೆ ಸಿಲುಕಿಸಿ ಮಹಾ ಜಾಲವನ್ನು ಬೀಸಿ, ಅವರನ್ನು ಹಳ್ಳಕ್ಕೆ ಕೆಡವಿದ್ದಾರೆ. ಇಲ್ಲಿ ಯುವಕರು ಮೋಸ ಹೋಗಿದ್ದೂ ಅಲ್ಲದೇ ವಾಪಸ್‌ ಬರಲು ಬಟ್ಟೆಯೂ ಸಿಗದಂಥ ಪೇಚಿಗೆ ಸಿಲುಕಿದ್ದಾರೆ. 

ಯುವತಿಯರು ಪಾರ್ಟಿ ಮಾಡೋಣ ಎಂದು ಈ ಯುವಕರನ್ನು ಕರೆದಾಗ ಪಾರ್ಟಿಗೆ ಹುಮ್ಮಸ್ಸಿನಿಂದ ಅವರ ಹಿಂದೆ ಹೋಗಿದ್ದಾರೆ. ಆರಂಭದಲ್ಲಿ ಯುವಕರನ್ನು ರಮಿಸುವಂತೆ ಮಾಡಿದ ಯುವತಿಯರು ಬಳಿಕ ಯುವಕರನ್ನು ಸಂಪೂರ್ಣ ಬೆತ್ತಲೆಗೊಳಿಸಿದ್ದಾರೆ. ಪಾರ್ಟಿಗೆಂದು ಯುವತಿಯರೊಂದಿಗೆ ಹೋಗಿದ್ದ ಯುವಕರೀರ್ವರು ಎಲ್ಲವನ್ನೂ ಕಳೆದುಕೊಂಡು ಕೊನೆಗೆ ಬಟ್ಟೆಯೂ ಇಲ್ಲದೆ ಬೆತ್ತಲಾಗಿ ಗೋಳಾಡಿದರು. 

ಅವರ ಜೊತೆಯಲ್ಲಿ ತಾವೂ ನಿಂತು ಅಶ್ಲೀಲವಾದ ವೀಡಿಯೋಗಳನ್ನು ಯುವಕರಿಗೆ ತಿಳಿಯದಂತೆ ಚಿತ್ರೀಕರಣ ಮಾಡಿಕೊಂಡಿದ್ದಾರೆ.​ಇವರೆಲ್ಲರೂ ‘ಮರ್ಯಾದಸ್ಥ’ ಕುಟುಂಬದ ಯುವಕರಾಗಿರುವ ಹಿನ್ನೆಲೆಯಲ್ಲಿ, ನಾಚಿಕೆ, ಮಾನ ಮರ್ಯಾದೆಗೆ ಅಂಜಿ ಬದುಕುವ ಯುವಕರನ್ನೇ ಅವರು ಟಾರ್ಗೆಟ್‌ ಮಾಡಿಕೊಳ್ಳುತ್ತಾರೆ. ಬಳಿಕ ತಮ್ಮ ವರೆಸೆ ಬದಲಿಸಿದ ಯುವತಿಯರು ತಾವು ರೆಕಾರ್ಡ್ ಮಾಡಿಕೊಂಡಿರಯವ ವೀಡಿಯೋವನ್ನು ಅಲ್ಲಿಯೇ ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ವೀಡಿಯೋದಲ್ಲಿ ಆ ಯುವಕರೇ ಯುವತಿಯರ ಮೇಲೆ ಅಸಭ್ಯವಾಗಿ ವರ್ತಿಸಿದಂತೆ ರಿಕಾರ್ಡ್‌ ಮಾಡಲಾಗಿದೆ. ಆರಂಭದಲ್ಲಿ ಯುವತಿಯರು ಯುವಕರಿಗೆ ಮೂರು ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ. ಅಷ್ಟು ಹಣ ಇಲ್ಲ ಎಂದಾಗ ಮನೆಗೆ ಹೋಗಿ ಹಣವನ್ನು ತಂದು ನೀಡುವಂತೆ, ಇಲ್ಲವೇ ಈ ವೀಡಿಯೋ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಅಲ್ಲದೆ ಯುವಕರಿಗೆ ಗನ್‌ ತೋರಿಸಿ ಮೊಬೈಲ್‌ ಫೋನ್‌, ಚಿನ್ನದ ಸರ, ಉಂಗುರ ಕಿತ್ತುಕೊಂಡು ಅವರ ಪರ್ಸ್‌ನಲ್ಲಿದ್ದ ಹಣವನ್ನೆಲ್ಲಾ ಲಪಟಾಯಿಸಿಕೊಂಡು ಕಳುಹಿಸಿದ್ದಾರೆ.

ಅಲ್ಲದೆ ಅವರು ಈ ಎಲ್ಲಾ ಸೊತ್ತುಗಳನ್ನು ನೀಡದಿದ್ದಲ್ಲಿ ಹಾಕಿಕೊಳ್ಳಲು ಬಟ್ಟೆಗಳನ್ನೂ ಕೊಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಎಲ್ಲ ಕಳೆದುಕೊಂಡ ಯುವಕರಾದ ಜುಬೇರ್ ಹಾಗೂ ಆತನ ಸ್ನೇಹಿತ ಶಹಬಾಝ಼್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌‌.

ಈ ಯುವತಿಯರ ಜತೆ ಮತ್ತೆ ಆರು ಮಂದಿ ಯುವಕರು ಶಾಮೀಲಾಗಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಈ ಹಿಂದೆ ಕೂಡ ಇಂಥದ್ದೇ ಸೆಕ್ಸ್‌ ಆಮಿಷವೊಡ್ಡಿ ಯುವಕರನ್ನು ಯುವತಿಯರು ಈ ರೀತಿ ಬಳಸಿ ಕೊಳ್ಳುತ್ತಿರುವುದು ತಿಳಿದುಬಂದಿದೆ. ಈ ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಇನ್ಸ್‌ಪೆಕ್ಟರ್ ಸಂಜಯ್ ಶರ್ಮಾ ತಿಳಿಸಿದ್ದಾರೆ.​

 

 
 
 
 
 
 
 
 
 
 
 

Leave a Reply