ಪ್ಲಾಸ್ಟಿಕ್ ಮುಕ್ತ ಕೊಡವೂರು ನಮ್ಮ ಜವಾಬ್ದಾರಿ

ಕೊಡವೂರು ವಾರ್ಡಿನ ಶಿವಾಜಿ ನಗರದ ಶಿವಾಜಿ ಪಾರ್ಕ್ ನಿರ್ವಹಣಾ ಸಮಿತಿ ವತಿಯಿಂದ ಇಕೋ ಬ್ರಿಕ್ಸ್ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಎಂ ಐ ಟಿ ಮಣಿಪಾಲ ಪ್ರಾಧ್ಯಾಪಕರಾದ ಡಾ|| ನಾರಾಯಣ್ ಶೆಣೈ ಮಾತನಾಡಿ ಪರಿಸರವನ್ನು ರಕ್ಷಿಸಿ ನಮ್ಮ ಮುಂದಿನ ಜನಾಂಗದವರಿಗೆ ನೀಡುವ ಜವಾಬ್ದಾರಿ ನಮ್ಮದಾಗಿದೆ.

ಅದರಿಂದ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಗಳನ್ನು ಪರಿಸರ ಸ್ನೇಹಿ ಇಟ್ಟಿಗೆ ತಯಾರಿಸಿ(ಇಕೋ ಬ್ರಿಕ್ಸ್) ಪ್ಲಾಸ್ಟಿಕ್ ಮುಕ್ತ ಕೊಡವೂರು ಮಾಡಬೇಕಾಗಿದೆ ಎಂದರು. ನಗರ ಸಭಾ ಸದಸ್ಯರಾದ ಕೆ ವಿಜಯ್ ಕೊಡವೂರು ಮಾತನಾಡಿ ಕೊಡವೂರು ವಾರ್ಡಿನಲ್ಲಿ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಅನೇಕ ಸಂಘ ಸಂಸ್ಥೆಗಳು ಮುಂದೆ ಬಂದಿವೆ, ಅದೇ ರೀತಿ ಶಿವಾಜಿ ಪಾರ್ಕ್ ಸಮಿತಿಯು ಈ ಕಾರ್ಯದಲ್ಲಿ ಅಚ್ಚುಕಟ್ಟಾಗಿ ಚಿಕ್ಕ ಮಕ್ಕಳಿಗೆ ತಮ್ಮ ತಮ್ಮ ಜವಾಬ್ದಾರಿ ಕಾರ್ಯದ ಮುಖಾಂತರ ಸಮಾಜದ ಜಾಗೃತಿಯನ್ನು ಮಾಡುತ್ತಿದೆ.ಇದು ನಮ್ಮ ವಾರ್ಡಿನ ಆದರ್ಶ ಸಂಘಗಳಲ್ಲಿ ಒಂದಾಗಿದೆ ಎಂದರು. ಜನವರಿ 1 ರಿಂದ ಫೆಬ್ರವರಿ 19 ರವರೆಗೆ ಪ್ರತಿದಿನ ಬೆಳಿಗ್ಗೆ ರಂಗೋಲಿ ಬಿಡಿಸುವುದು ಮತ್ತು ಸಂಜೆ ಭಜನೆ ಮಾಡುವುದು ಮತ್ತು ಬಹುಮಾನ ವಿತರಣೆ ನೀಡಲಾಗುವುದು. ಅದೇ ರೀತಿ ಇಕೋ ಬ್ರಿಕ್ಸ್ ಮಾಡುವ ಮಕ್ಕಳಿಗೆ ಫೆಬ್ರವರಿ 19 ರ ಶಿವಾಜಿ ಜಯಂತಿ ದಿನ ಬಹುಮಾನ ವಿತರಣೆ ನೀಡಲಾಗುವುದು.ಈ ಸಂದರ್ಭದಲ್ಲಿ ವಾರ್ಡ್ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪ್ರಭಾತ್ ಕೊಡವೂರು, ವೆಂಕಟೇಶ್ ಕಾಮತ್, ಶಿವಾಜಿ ಪಾರ್ಕ್ ಅಧ್ಯಕ್ಷರಾದ ವಿಠಲ್ ನಾಯ್ಕ್ ,ಪ್ರಭಾಕರ್ ಭಟ್ ಸ್ವರ್ಣಾರಾಧನ ಪ್ರಚಾರಕರು, ತೋನ್ಸೆ ಗಣೇಶ್ ಪರ್ಯಾವರಣ ಸಂರಕ್ಷಣೆ ಉಡುಪಿ ಜಿಲ್ಲೆ, ನಗರ ಸಭಾ ಸದಸ್ಯರಾದ ವಿಜಯ್ ಕೊಡವೂರು, ಇನ್ನಿತರರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply