ತಂದೆಗೆ ಲಿವರ್ ದಾನ ಮಾಡಿದ ಭಾರತದ ಅತ್ಯಂತ ಕಿರಿಯ ಬಾಲಕಿ

ಹಲವು ವರ್ಷಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ತನ್ನ ತಂದೆಗೆ 17 ವರ್ಷದ ಬಾಲಕಿ ಲಿವರ್ ದಾನ ಮಾಡಿದ್ದಾಳೆ. ಈ ಮೂಲಕ ಭಾರತದ ಅತ್ಯಂತ ಕಿರಿಯ ಅಂಗಾoಗ ದಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಕೇರಳದಲ್ಲಿ ಓರ್ವ 17 ವರ್ಷದ ಬಾಲಕಿ ತನ್ನ ತಂದೆಗೆ ಲೀವರ್ ದಾನ ಮಾಡಿ ಪ್ರಾಣ ಉಳಿಸಿದ್ದಾಳೆ. ಈ ಮೂಲಕ ಅಪ್ಪ-ಮಗಳ ಬಾಂಧವ್ಯವನ್ನು ಸಾಬೀತು ಮಾಡಿದ್ದಾಳೆ.

ಅಪ್ರಾಪ್ತ ವಯಸ್ಸಿನವರು ಬೇರೊಬ್ಬರಿಗೆ ಅಂಗಾoಗ ದಾನ ಮಾಡುವುದು ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ ದೇವಾನಂದಾ ಕೇರಳ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಳು. ವಿದ್ಯಾರ್ಥಿ(ಹೆಸರು ನಮೂದು ಮಾಡಿಲ್ಲ) ಕೋರಿದ ಮನವಿಯನ್ನು ಪುರಸ್ಕರಿಸಿದ್ದ ಕೋರ್ಟ್ ಲಿವರ್ ದಾನ ಮಾಡಲು ಅನುಮತಿ ನೀಡಿತ್ತು. ಬಳಿಕ ದೇವಾನಂದಾ ತನ್ನ ವಿವರ್ ದಾನ ಮಾಡಲು ವೈದ್ಯರ ಸಲಹೆಯಂತೆ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡಳು. ಅಲ್ಲದೇ ಜಿಮ್‌ನಲ್ಲಿ ವರ್ಕೌಟ್ ಸಹ ಮಾಡಿದ್ದಳು. ಹೀಗೆ ತಂದೆಯನ್ನು ಉಳಿಸಿಕೊಳ್ಳಲು ಈ ಬಾಲಕಿ ಕೊಟ್ಟ ಪರಿಶ್ರಮವನ್ನು ಆಸ್ಪತ್ರೆ ವೈದ್ಯರು ಮೆಚ್ಚಿ ಯಾವುದೇ ಶುಲ್ಕ ತೆಗೆದುಕೊಳ್ಳದೇ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply