ಕೊರೋನಾ ಹಿನ್ನೆಲೆ ಭಾರತದಿಂದ ಬರುವ ವಿಮಾನಗಳ ಮೇಲಿನ ನಿಷೇಧ ವಿಸ್ತರಿಸಿದ ಯುಎಇ

ಭಾರತದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಭಾರತದಿಂದ ಬರುವ ಪ್ರಯಾಣಿಕರ ವಿಮಾನಗಳ ಮೇಲಿನ ನಿಷೇಧವನ್ನ ಯುನೈಟೆಡ್ ಅರಬ್ ಎಮಿರೇಟ್ಸ್ ಜೂನ್ 30ರವೆರೆಗೆ ವಿಸ್ತರ ಗೊಳಿಸಿದೆ.

ಈ ಬಗ್ಗೆ ಎಮಿರೇಟ್ಸ್ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಭಾರತದಿಂದ ಬರುವ ಪ್ರಯಾಣಿಕರ ವಿಮಾನಗಳ ಮೇಲಿನ ನಿಷೇಧವನ್ನ ವಿಸ್ತರಿಸಿರುವುದಾಗಿ ತಿಳಿಸಿದೆ.

ಈ ಹಿಂದೆ, ಜೂನ್ 14ರವರೆಗೆ ಪ್ರಯಾಣಿಕರ ವಿಮಾನಗಳ ಮೇಲೆ ನಿಷೇಧ ಹೇರಲಾಗಿತ್ತು.ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 1,52,734 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ.

 
 
 
 
 
 
 
 
 
 
 

Leave a Reply