Janardhan Kodavoor/ Team KaravaliXpress
24.6 C
Udupi
Thursday, June 30, 2022
Sathyanatha Stores Brahmavara

ಕೊರೋನಾ ನಿಯಂತ್ರಿಸಲು ಕೇಂದ್ರ ತೆಗೆದುಕೊಂಡ ಕ್ರಮಗಳಿಂದ  ನಿರುದ್ಯೋಗ ದುಪ್ಪಟ್ಟಾಗಿದೆ -ರಾಹುಲ್ ಗಾಂಧಿ

ದೆಹಲಿ : ಕೇಂದ್ರ ಸರ್ಕಾರ ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಲಾಕ್ ಡೌನ್ ನಂತಹ ಕ್ರಮದಿಂದ ನಿರುದ್ಯೋಗ ಸಮಸ್ಯೆ ಎರಡರಷ್ಟಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಒಬ್ಬ ಮನುಷ್ಯ ಮತ್ತು ಅವನ ದುರಹಂಕಾರ ಪ್ಲಸ್ ಒಂದು ವೈರಸ್ ಹಾಗೂ ಅದರ ರೂಪಾಂತರಿ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

ಕೊರೋನಾ ನಿಯಂತ್ರಿಸಲು ಲಾಕ್ ಡೌನ್ ಹೇರಲಾಗಿದೆ. ಲಾಕ್ ಡೌನ್ ನಿಂದಾಗಿ ಭಾರತದ ಬಡತನ ಹೆಚ್ಚುತ್ತಿದ್ದು, ಭಾರತದ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಮತ್ತೊಮ್ಮೆ ಆರ್ಥಿಕತೆ ಚೇತರಿಕೆಯಾಗಲು ಸಾಧ್ಯವಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!