ಎಸ್ಪಿ ಬಾಲಸುಬ್ರಮಣ್ಯಂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ; ವದಂತಿ ತಳ್ಳಿ ಹಾಕಿದ ಪುತ್ರ ಚರಣ್

ಹಿರಿಯ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ ಕರೊನಾ ವರದಿ ನೆಗೆಟಿವ್ ಬಂದಿದೆ ಎಂಬ ಸುದ್ದಿಯನ್ನು ಪುತ್ರ ಎಸ್ಪಿ ಚರಣ್ ತಳ್ಳಿಹಾಕಿದ್ದಾರೆ. ಅಪ್ಪನ ಸ್ಥಿತಿ ಸ್ಥಿರವಾಗಿದ್ದು, ಅವರಿಗೆ ವೆಂಟಿಲೇಟರ್ ಸಹಾಯದ ಮೂಲಕವೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಖಚಿತಪಡಿಸಿದ್ದಾರೆ. ಸೋಮ ವಾರ ಬೆಳಗ್ಗೆ ಎಸ್ಪಿಬಿ ವರದಿ ನೆಗೆಟಿವ್ ಬಂದಿತ್ತು ಎಂದು ಎಲ್ಲೆಡೆ ಸುದ್ದಿ ಹರಿದಾಡಿದ್ದರ ಹಿನ್ನೆಲೆಯಲ್ಲಿ ಫೇಸ್ಬುಕ್ ಮೂಲಕ ವಿಡಿಯೋ ತುಣು ಕನ್ನು ಶೇರ್ ಮಾಡಿಕೊಂಡ ಚರಣ್, ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

‘ಅಪ್ಪನ ಆರೋಗ್ಯದ ಸ್ಥಿತಿಗತಿಯನ್ನು ನಾನೇ ಮೊದಲು ಎಲ್ಲರಿಗೂ ತಿಳಿಸುತ್ತೇನೆ. ವೈದ್ಯರು ನನಗೆ ಅಪ್ಡೇಟ್ ಮಾಹಿತಿ ನೀಡಿದ ಬಳಿಕ ಅದನ್ನು ಮಾಧ್ಯಮಗಳಿಗೆ ನಾನು ತಿಳಿಸುತ್ತೇನೆ. ದುರದೃಷ್ಟವಶಾತ್ ಇಂದು ಬೆಳಗ್ಗೆ ಅಪ್ಪನ ಕರೊನಾ ವರದಿ ನೆಗೆಟಿವ್ ಬಂದಿದೆ ಎಂದು ಎಲ್ಲೆಡೆ ಸುದ್ದಿಯಾಗಿದೆ. ಆದರೆ, ಅವರ ವರದಿ ನೆಗೆಟಿವ್ ಇರಲಿ ಪಾಸಿಟಿವ್ ಆಗಿರಲಿ ಅಪ್ಪನ ಸ್ಥಿತಿ ಈ ಮೊದಲು ಹೇಗಿತ್ತೋ ಈಗಲೂ ಹಾಗೆಯೇ ಸ್ಥಿರವಾಗಿದೆ. ವೆಂಟಿಲೇಟರ್ ಸಹಾಯದ ಮೂಲಕವೇ ಚಿಕಿತ್ಸೆ ಮುಂದುವರಿಸಲಾಗಿದೆ. ದಯಮಾಡಿ ಸುಳ್ಳು ಸುದ್ದಿಯನ್ನು ಹರಡಬೇಡಿ. ಸಂಜೆ ವೇಳೆಗೆ ವೈದ್ಯರ ಜತೆ ಚರ್ಚೆಸಿ ಇನ್ನೊಂದು ಪೋಸ್ಟ್ ಹಾಕುತ್ತೇನೆ ಎಂದಿದ್ದಾರೆ.

ಆಗಸ್ಟ್ 5ರಂದು ಎಸ್ಪಿಬಿ ಅವರಲ್ಲಿ ಕರೊನಾ ದೃಢಪಟ್ಟಿತ್ತು. ಅಂದಿನಿಂದಲೂ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಕೆಲವು ದಿನಗಳಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

Leave a Reply